ಕೊಪ್ಪಳ: ಕಾಲು ಕಳೆದುಕೊಂಡ ನೂರಕ್ಕೂ ಹೆಚ್ಚು ಜನರಿಗೆ ಕೃತಕ ಕಾಲು ಜೋಡಣಾ ಶಿಬಿರ ಜಿಲ್ಲೆಯ ಗಡಿಯಾರ ಕಂಬ ಬಳಿಯ ಜೈನ್ ಸ್ಥಾನಿಕ್ ನಲ್ಲಿ ನಡೆಯಿತು.ಕಾರ್ಯಕ್ರಮವನ್ನು ಅಭಿನವ ಗವಿಸಿದ್ದೇಶ್ವರ ಶ್ರೀಗಳು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ದುಡ್ಡು ಗಳಿಸಲು ಮತ್ತು ದಾನ ಮಾಡಲು ಅದಕ್ಕೊಂದು ವಿಧಾನವಿದೆ. ವಿದ್ಯೆ ಮತ್ತು ದುಡ್ಡನ್ನು ಗಳಿಸುವಾಗ ನಮಗೆ ಸಾವಿಲ್ಲ ಎಂದು ತಿಳಿಯಬೇಕು. ಅದೇ ದಾನ ಮಾಡುವಾಗ ಸಾವು ಖಚಿತ ಎಂದು ತಿಳಿದು ಕೊಟ್ಟು ಹೋಗಬೇಕು. ಇಲ್ಲ ಬಿಟ್ಟು ಹೋಗಬೇಕು.
ಇದು ನಿಸರ್ಗ ನಮಗೆ ನೀಡಿರುವ ಆಯ್ಕೆ. ಜನಸೇವೆಯೇ ಜನಾರ್ದನ ಸೇವೆ. ಕಾಣದ ದೇವರನ್ನು ಕಾಣುವ ಬಗೆ ಹೇಗೆಂದರೆ ದೀನ ದಲಿತರ ಕಣ್ಣೀರು ಒರೆಸುವುದು ಎಂದು ನುಡಿದರು. ಜಿಲ್ಲೆಯ ಅಭಯಕುಮಾರ್ ಮೆಹ್ತಾ ಕುಟುಂಬ ಮತ್ತು ಆರ್.ಕೆ.ಬಿ ಫೌಂಡೇಷನ್ ರಾಯಚೂರು ಇವರ ಸಹಯೋಗದಲ್ಲಿ ಶಿಬಿರ ಜರುಗಿತು.
ಇದನ್ನೂ ಓದಿ:ಸುರತ್ಕಲ್ ಟೋಲ್ ಗೇಟ್ ರದ್ದು ಆದೇಶವಾದರೂ 30ನೇ ದಿನಕ್ಕೆ ಕಾಲಿಟ್ಟ ಅನಿರ್ದಿಷ್ಟಾವಧಿ ಧರಣಿ