ETV Bharat / state

341ನೇ ವಿಧಿಯಲ್ಲಿರುವ ಗೊಂದಲಗಳನ್ನು ಬಗೆಹರಿಸುವ ಶಕ್ತಿ ಬಿಜೆಪಿ ಸರ್ಕಾರಕ್ಕಿದೆ: ಎ.ನಾರಾಯಣಸ್ವಾಮಿ - ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ

ನೂರಕ್ಕೆ ನೂರರಷ್ಟು ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ನಮ್ಮ ಸರ್ಕಾರದಲ್ಲಿಯೇ ಜಾರಿಯಾಗುತ್ತದೆ. ಹಾಗೆಯೇ 341ನೇ ವಿಧಿಯಲ್ಲಿರುವ ಗೊಂದಲಗಳನ್ನು ಬಗೆಹರಿಸುವ ಶಕ್ತಿ ಬಿಜೆಪಿ ಸರ್ಕಾರಕ್ಕಿದೆ ಎಂದು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.

ಎ.ನಾರಾಯಣಸ್ವಾಮಿ
ಎ.ನಾರಾಯಣಸ್ವಾಮಿ
author img

By

Published : Oct 27, 2021, 11:07 AM IST

ಕೊಪ್ಪಳ: ಸಂವಿಧಾನದ 370 ನೇ ವಿಧಿಯನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಪ್ರಯತ್ನದಿಂದ ತೆಗೆದು ಹಾಕಲಾಗಿದೆ. ಅದೇ ರೀತಿ 341 ನೇ ವಿಧಿ ಕುರಿತು ಅನೇಕ ಗೊಂದಲಗಳಿವೆ. ಈ ಸಮಸ್ಯೆಯನ್ನು ಬಗೆಹರಿಸುವ ಶಕ್ತಿ ಬಿಜೆಪಿ ಸರ್ಕಾರಕ್ಕಿದೆ ಎಂದು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಹೇಳಿದರು.

ಕೊಪ್ಪಳ ತಾಲೂಕಿನ ಹುಲಗಿ ಗ್ರಾಮದಲ್ಲಿ ಮಾತನಾಡಿದ ಅವರು, ನೂರಕ್ಕೆ ನೂರರಷ್ಟು ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ನಮ್ಮ ಸರ್ಕಾರದಲ್ಲಿಯೇ ಜಾರಿಯಾಗುತ್ತದೆ. ಉಪಚುನಾವಣೆ ಪ್ರಚಾರದ ವೇಳೆ ಯಾರು ಸಹ ವೈಯಕ್ತಿಕವಾಗಿ ಮಾತನಾಡಬಾರದು‌. ಪಕ್ಷ ಹಾಗೂ ಯೋಜನೆಗಳ ಕುರಿತು ಮಾತನಾಡಬೇಕಿತ್ತು‌. ವೈಯಕ್ತಿಕವಾಗಿ ಮಾತನಾಡುವುದು ರಾಜಕಾರಣಕ್ಕೆ ಕಪ್ಪು ಚುಕ್ಕೆ ಎಂದರು.

ಕೊಪ್ಪಳ ತಾಲೂಕಿನ ಹುಲಗಿ ಗ್ರಾಮದಲ್ಲಿ ಮಾತನಾಡಿದ ಎ.ನಾರಾಯಣಸ್ವಾಮಿ

ಆರ್​ಎಸ್ಎಸ್ ಕುರಿತಂತೆ ಕಾಂಗ್ರೆಸ್ ಮತ್ತು ಜೆಡಿಎಸ್​ನವರು ಟೀಕೆ ಮಾಡುತ್ತಿದ್ದಾರೆ. ನಾನು ಮೊದಲು ಸಂಘ ಪರಿವಾರದಿಂದ ಬಂದವನು. ಧರ್ಮವನ್ನು ಒಡೆಯುವುದು, ಧರ್ಮವನ್ನು ಇಬ್ಭಾಗ ಮಾಡುವುದನ್ನು ಈ ಎರಡೂ ಪಕ್ಷಗಳು ಮಾಡಿವೆ ಎಂದು ಆರೋಪಿಸಿದರು.

ಬಿಜೆಪಿಯಿಂದ ದಲಿತರಿಗೆ ನ್ಯಾಯ ಸಿಗುವುದಿಲ್ಲ ಎನ್ನುವ ಸಿದ್ದರಾಮಯ್ಯ ಹೇಳಿಕೆ ಕುರಿತು ಮಾತನಾಡಿದ ಸಚಿವ ನಾರಾಯಣಸ್ವಾಮಿ, ಈ ಬಗ್ಗೆ ನಾನು ಸಿಂದಗಿಯಲ್ಲಿ ಮಾತನಾಡುತ್ತೇನೆ‌‌. ಇಲ್ಲಿ ರಾಜಕಾರಣ ಮಾಡುತ್ತಿಲ್ಲ. ಹಾನಗಲ್ ಹಾಗೂ ಸಿಂದಗಿ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದು ನಿಶ್ಚಿತ‌. ಬಿಜೆಪಿಯ ಮೋದಿ ಎಂಬ ಸಂತನ ಆಡಳಿತ, ದೇಶಭಕ್ತಿಯ ಆಡಳಿತದಿಂದಾಗಿ ಜನರು ಬಿಜೆಪಿಯನ್ನು ಗೆಲ್ಲಿಸುತ್ತಾರೆ. ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಬೊಮ್ಮಾಯಿ ಆಡಳಿತವಿದೆ. ಈ ರಾಜ್ಯ ಕಂಡ ಅಪರೂಪದ ಮುಖ್ಯಮಂತ್ರಿ ಯಡಿಯೂರಪ್ಪ ಎಂದು ನಾರಾಯಣಸ್ವಾಮಿ ಬಣ್ಣಿಸಿದರು.

ಇನ್ನು ಇದಕ್ಕೂ ಮೊದಲು ಸಚಿವ ನಾರಾಯಣಸ್ವಾಮಿ ಕೊಪ್ಪಳ ತಾಲೂಕಿನ ಪ್ರಸಿದ್ಧ ಹುಲಗಿಯ ಹುಲಿಗೆಮ್ಮದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದುಕೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.