ETV Bharat / state

ಮಗುವಿಗೆ ಸಿದ್ದರಾಮಯ್ಯ ಎಂದು ನಾಮಕರಣ ಮಾಡಿದ ಮಾಜಿ ಸಿಎಂ ಅಭಿಮಾನಿ - ವಿಪಕ್ಷದ ನಾಯಕ ಸಿದ್ದರಾಮಯ್ಯ

ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ದ್ಯಾಂಪುರ ಗ್ರಾಮದ ಮಂಜುನಾಥ ಎಂಬುವವರು ತಮ್ಮ ಪುತ್ರನಿಗೆ ಸಿದ್ದರಾಮಯ್ಯ ಎಂದು ನಾಮಕರಣ ಮಾಡಿದ್ದಾರೆ. ಆ ಮೂಲಕ ತಾನು ಪಕ್ಕಾ ಸಿದ್ದರಾಮಯ್ಯ ಅಭಿಮಾನಿ ಎಂಬುದನ್ನು ತೋರಿಸಿದ್ದಾರೆ.

A former CM fan who named the child as Siddaramaiah in haveri district
ಮಗುವಿಗೆ ಸಿದ್ದರಾಮಯ್ಯ ಎಂದು ನಾಮಕರಣ ಮಾಡಿದ ಮಾಜಿ ಸಿಎಂ ಅಭಿಮಾನಿ
author img

By

Published : Jun 24, 2021, 5:34 AM IST

Updated : Jun 24, 2021, 8:21 PM IST

ಕೊಪ್ಪಳ: ವಾಹನಗಳ ಮೇಲೆ, ದೇಹದ ಮೇಲೆ ಜನ ತಮ್ಮ ನೆಚ್ಚಿನ ನಟ, ನಾಯಕನ ಹೆಸರು ಅಥವಾ ಭಾವಚಿತ್ರ ಹಾಕಿಸಿಕೊಳ್ಳುವುದು ನೋಡಿರುತ್ತೇವೆ. ಆದರೆ ಕುಕನೂರು ತಾಲೂಕಿನ ದ್ಯಾಂಪುರ ಗ್ರಾಮದ ಮಂಜುನಾಥ ತಮ್ಮ ಪುತ್ರನಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೆಸರು ಇಡುವ ಮೂಲಕ ಅಭಿಮಾನ ಮೆರೆದಿದ್ದಾರೆ.

ಸಿದ್ದರಾಮಯ್ಯ ಅಂತ ಪುತ್ರನಿಗೆ ನಾಮಕರಣ ಮಾಡಿರುವ ಮಂಜುನಾಥ-ನೇತ್ರಾವತಿ ದಂಪತಿ, ಕಾರ್ಯಕ್ರಮಕ್ಕೆ ಬಂದಿದ್ದ ಸಂಬಂಧಿಕರು, ನೆರಹೊರೆಯವರಿಗೆ ಊಟ ಹಾಕಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಮಂಜುನಾಥ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ವಿವಿಧ ಯೋಜನೆಗಳನ್ನು ಮೆಚ್ಚಿಕೊಂಡು ಅವರ ಕಟ್ಟಾ ಅಭಿಮಾನಿಯಾಗಿದ್ದಾರೆ. ಸಿದ್ದರಾಮಯ್ಯ ಅವರ ಅನೇಕ ಕಲ್ಯಾಣ ಯೋಜನೆಗಳಿಂದಾಗಿ ತಮ್ಮ ಮೊದಲ ಮಗನಿಗೆ ಸಿದ್ದರಾಮಯ್ಯ ಎಂಬ ಹೆಸರಿಡಬೇಕೆಂದು ನಿಶ್ಚಿಯಿಸಿಕೊಂಡು, ಅದರಂತೆ ಪುತ್ರನಿಗೆ ಮಾಜಿ ಸಿಎಂ ಅವರ ಹೆಸರನ್ನು ನಾಮಕರಣ ಮಾಡಿದ್ದೇನೆ ಎನ್ನುತ್ತಾರೆ ಮಂಜುನಾಥ್‌.

ಮಗುವಿಗೆ ಸಿದ್ದರಾಮಯ್ಯ ಎಂದು ನಾಮಕರಣ ಮಾಡಿದ ಮಾಜಿ ಸಿಎಂ ಅಭಿಮಾನಿ

ಇದನ್ನೂ ಓದಿ: ಡಿಕೆಶಿ ಬೆನ್ನಲ್ಲೇ ಸಿದ್ದರಾಮಯ್ಯಗೆ ಹೈಕಮಾಂಡ್ ಬುಲಾವ್: ಮುಂದಿನ ವಾರ ದಿಲ್ಲಿಗೆ ಪ್ರಯಾಣ ಸಾಧ್ಯತೆ

ಸದ್ಯ ಅಧಿಕಾರಿದಲ್ಲಿ ಇಲ್ಲದಿದ್ರೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರೇ ರಾಜ್ಯದ ಮುಂದಿನ ಮುಖ್ಯಮಂತ್ರಿ ಎಂದು ಕೆಲ ಕಾಂಗ್ರೆಸ್‌ ಶಾಸಕರು ಹೇಳಿಕೆಗಳನ್ನು ನೀಡುತ್ತಾರೆ. ಇದು ವಿಚಾರ ಹೈಕಮಾಂಡ್‌ ವರೆಗೂ ತಲುಪಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಇದರ ನಡುವೆ ಮಂಜುನಾಥ ಪುತ್ರನಿಗೆ ಸಿದ್ದರಾಮಯ್ಯ ಎಂದು ನಾಮಕರಣ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

Last Updated : Jun 24, 2021, 8:21 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.