ETV Bharat / state

ಡಿಸೆಂಬರ್ 9 ರಂದು ಗಂಗಾವತಿಯಲ್ಲಿ ಬೃಹತ್ ಸಂಕೀರ್ತನಾ‌ ಯಾತ್ರೆ

ಹನುಮಮಾಲಾ ವಿಸರ್ಜನೆ ಹಿನ್ನೆಲೆ ಬರುವ ಡಿಸೆಂಬರ್ 9 ರಂದು ಗಂಗಾವತಿ ನಗರದಲ್ಲಿ ಬೃಹತ್ ಸಂಕೀರ್ತನಾ‌ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಭಜರಂಗದಳದ ಮುಖಂಡ ಸೂರ್ಯ ನಾರಾಯಣ ಹೇಳಿದ್ದಾರೆ.

author img

By

Published : Nov 22, 2019, 8:10 PM IST

ಸೂರ್ಯ ನಾರಾಯಣ

ಕೊಪ್ಪಳ: ಹನುಮಮಾಲಾ ವಿಸರ್ಜನೆ ಹಿನ್ನೆಲೆ ಬರುವ ಡಿಸೆಂಬರ್ 9 ರಂದು ಗಂಗಾವತಿ ನಗರದಲ್ಲಿ ಬೃಹತ್ ಸಂಕೀರ್ತನಾ‌ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಭಜರಂಗದಳದ ಮುಖಂಡ ಸೂರ್ಯ ನಾರಾಯಣ ಹೇಳಿದ್ದಾರೆ.

ಕೊಪ್ಪಳ ಸೂರ್ಯ ನಾರಾಯಣ ಸುದ್ದಿಗೋಷ್ಠಿ

ನಗರದ ಮೀಡಿಯಾ ಕ್ಲಬ್​ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ಹನುಮಭಕ್ತರು ಈಗಾಗಲೇ ಹನುಮಮಾಲಾ ಧರಿಸಿ ವೃತ ಕೈಗೊಂಡಿದ್ದಾರೆ. ಇನ್ನೂ ಅನೇಕ ಭಕ್ತರು ಮಾಲೆಯನ್ನು ಧರಿಸಿ ವೃತಾಚರಣೆ ಕೈಗೊಳ್ಳಲಿದ್ದಾರೆ. ಡಿಸೆಂಬರ್ 9 ರಂದು ಈ ವೃತ ಪೂರ್ಣಗೊಳ್ಳಲಿದೆ. ಮಾಲೆ ಧರಿಸಿದ ಮಾಲಾಧಾರಿಗಳು ಗಂಗಾವತಿ ತಾಲೂಕಿನ ಪೌರಾಣಿಕ ನೆಲೆಯಾದ ಅಂಜನಾದ್ರಿ ಬೆಟ್ಟಕ್ಕೆ ಬಂದು ಮಾಲೆಯನ್ನು ವಿಸರ್ಜಿಸಲಿದ್ದಾರೆ. ಈ ಬಾರಿ ಸುಮಾರು 16 ಸಾವಿರದಷ್ಟು ಹನುಮ ಮಾಲಾಧಾರಿಗಳು ಅಂಜನಾದ್ರಿಗೆ ಆಗಮಿಸಲಿದ್ದಾರೆ ಎಂದರು.

ಡಿಸೆಂಬರ್ 9 ರಂದು ಬೆಳಗ್ಗೆ 8 ಗಂಟೆಗೆ ಗಂಗಾವತಿ ನಗರದಲ್ಲಿ ಬೃಹತ್ ಸಂಕೀರ್ತನಾ ಯಾತ್ರೆ ನಡೆಯಲಿದೆ. ಇದಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ. ಅಂದು ಅಂಜನಾದ್ರಿಯಲ್ಲಿ ಪವಮಾನಹೋಮ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಸಂಕೀರ್ತನಾ ಯಾತ್ರೆಯ ಬಳಿಕ ಹನುಮ ಮಾಲಾಧಾರಿಗಳು ಅಂಜನಾದ್ರಿಗೆ ತೆರಳಿ ಮಾಲೆ ವಿಸರ್ಜಿಸಲಿದ್ದಾರೆ ಎಂದರು.

ಈ ವೇಳೆ ಭಜರಂಗದಳದ ಮುಖಂಡರಾದ ರಾಜು ಬಾಕಳೆ, ದೊಡ್ಡಬಸಯ್ಯ, ಸುಭಾಷ್ ಸಾದರ, ವಿನಯ್ ಪಾಟೀಲ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Intro:

Body:ಕೊಪ್ಪಳ:- ಹನುಮಮಾಲಾ ವಿಸರ್ಜನೆ ಹಿನ್ನೆಲೆಯಲ್ಲಿ ಬರುವ ಡಿಸೆಂಬರ್ 9 ರಂದು ಗಂಗಾವತಿ ನಗರದಲ್ಲಿ ಬೃಹತ್ ಸಂಕೀರ್ತನಾ‌ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಭಜರಂಗದಳದ ಮುಖಂಡ ಸೂರ್ಯನಾರಾಯಣ ಹೇಳಿದ್ದಾರೆ. ನಗರದ ಮೀಡಿಯಾ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಾದ್ಯಂತ ಹನುಮಭಕ್ತರು ಈಗಾಗಲೇ ಹನುಮಮಾಲಾ ಧರಿಸಿ ವೃತವನ್ನು ಕೈಗೊಂಡಿದ್ದಾರೆ. ಇನ್ನೂ ಅನೇಕ ಭಕ್ತರು ಮಾಲೆಯನ್ನು ಧರಿಸಿ ವೃತಾಚರಣೆ ಕೈಗೊಳ್ಳಲಿದ್ದಾರೆ. ಡಿಸೆಂಬರ್ 9 ರಂದು ಈ ವೃತ ಪೂರ್ಣಗೊಳ್ಳಲಿದೆ. ಮಾಲೆ ಧರಿಸಿದ ಮಾಲಾಧಾರಿಗಳು ಗಂಗಾವತಿ ತಾಲೂಕಿನ ಪೌರಾಣಿಕ ನೆಲೆಯಾದ ಅಂಜನಾದ್ರಿ ಬೆಟ್ಟಕ್ಕೆ ಬಂದು ಮಾಲೆಯನ್ನು ವಿಸರ್ಜಿಸಲಿದ್ದಾರೆ. ಈ ಬಾರಿ ಸುಮಾರು 16 ಸಾವಿರದಷ್ಟು ಹನುಮಮಾಲಾಧಾರಿಗಳು ಅಂಜನಾದ್ರಿಗೆ ಆಗಮಿಸಲಿದ್ದಾರೆ. ಡಿಸೆಂಬರ್ 9 ರಂದು ಬೆಳಗ್ಗೆ 8 ಗಂಟೆಗೆ ಗಂಗಾವತಿ ನಗರದಲ್ಲಿ ಬೃಹತ್ ಸಂಕೀರ್ತನಾ ಯಾತ್ರೆ ನಡೆಯಲಿದೆ. ಇದಕ್ಕಾಗಿ ಅಗತ್ಯ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ. ಅಂದು ಅಂಜನಾದ್ರಿಯಲ್ಲಿ ಪವಮಾನಹೋಮ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಸಂಕೀರ್ತನಾ ಯಾತ್ರೆಯ ಬಳಿಕ ಹನುಮಮಾಲಾಧಾರಿಗಳು ಅಂಜನಾದ್ರಿಗೆ ತೆರಳಿ ಮಾಲೆ ವಿಸರ್ಜಿಸಲಿದ್ದಾರೆ ಎಂದರು. ವರ್ಗಬೇಧ ಮರೆತು ನಾವೆಲ್ಲಾ ಹಿಂದೂ ನಾವೆಲ್ಲ ಒಂದು ಎಂಬ ಭಾವನೆಯೊಂದಿಗೆ ಈ ಸಂಕೀರ್ತನೆ ಯಾತ್ರೆ ನಡೆಯಲಿದೆ ಎಂದರು. ಭಜರಂಗದಳದ ಮುಖಂಡರಾದ ರಾಜು ಬಾಕಳೆ, ದೊಡ್ಡಬಸಯ್ಯ, ಸುಭಾಷ್ ಸಾದರ, ವಿನಯ್ ಪಾಟೀಲ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಬೈಟ್1:- ಸೂರ್ಯನಾರಾಯಣ, ಭಜರಂಗದಳದ ಮುಖಂಡ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.