ಕೊಪ್ಪಳ : ಬಳ್ಳಾರಿ ಜಿಲ್ಲೆಯ ಕಂಪ್ಲಿ ಮೂಲದ ಒಂದು ಕೊರೊನಾ ಪ್ರಕರಣ ಸೇರಿ ಜಿಲ್ಲೆಯಲ್ಲಿ ಇಂದು ಒಟ್ಟು 8 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಸೋಂಕಿತರ ಸಂಖ್ಯೆ 139ಕ್ಕೆ ಏರಿಕೆಯಾಗಿದೆ.
ಗಂಗಾವತಿ ತಾಲೂಕಿನಲ್ಲಿ 3, ಕುಷ್ಟಗಿ ತಾಲೂಕಿನ 3, ಯಲಬುರ್ಗಾ ತಾಲೂಕಿನ 1 ಹಾಗೂ ಬಳ್ಳಾರಿ ಜಿಲ್ಲೆಯ ಕಂಪ್ಲಿ ಮೂಲದ 27 ವರ್ಷದ ಪುರುಷ ಸೇರಿ ಇಂದು ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 8 ಪಾಸಿಟಿವ್ ಪ್ರಕರಣ ದೃಢಪಟ್ಟಿವೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ಗಂಗಾವತಿ ತಾಲೂಕಿನ ತೊಂಡಿಹಾಳ ಕ್ಯಾಂಪ್ನ 41 ವರ್ಷದ ಪುರುಷ, ಗಂಗಾವತಿ ನಗರದ 78 ವರ್ಷದ ಮಹಿಳೆ, 28 ವರ್ಷದ ಮಹಿಳೆ, ಕುಷ್ಟಗಿ ತಾಲೂಕಿನ ಪುರ ಗ್ರಾಮದ 10 ವರ್ಷದ ಬಾಲಕ, 54 ವರ್ಷದ ಪುರುಷ, ನವಲಹಳ್ಳಿ ಗ್ರಾಮದ 23 ವರ್ಷದ ಪುರುಷ ಹಾಗೂ ಮಧ್ಯಪ್ರದೇಶದ ಟ್ರಾವೆಲ್ ಹಿಸ್ಟರಿ ಇರುವ ಯಲಬುರ್ಗಾ ತಾಲೂಕಿನ ಗುನ್ನಾಳ ಗ್ರಾಮದ 24 ವರ್ಷದ ಮಹಿಳೆಯಲ್ಲಿ ಸೋಂಕು ದೃಢವಾಗಿದೆ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಲ್ಕರ್ ಅವರು ಮಾಹಿತಿ ನೀಡಿದ್ದಾರೆ.