ಕೊಪ್ಪಳ: ಕೋವಿಡ್-19 ಹರಡುವಿಕೆ ತಡೆ ಕಾರ್ಯಾಚರಣೆ ತೀವ್ರಗೊಳಿಸಲು ಸರ್ಕಾರ ಕುಷ್ಟಗಿ ತಾಲೂಕಿನಲ್ಲಿ 6 ಜನ ಸೆಕ್ಟರ್ ಮ್ಯಾಜಿಸ್ಟ್ರೇಟ್ಗಳನ್ನ ನಿಯೋಜಿಸಿದ್ದು, ಕೊರೊನಾ ವೈರಸ್ ಕಾರ್ಯಾಚರಣೆ ಇನ್ನಷ್ಟು ಚುರುಕುಗೊಂಡಿದೆ.
ಕುಷ್ಟಗಿ ಪಟ್ಟಣಕ್ಕೆ ಪುರಸಭೆ ಮುಖ್ಯಾಧಿಕಾರಿ ಅಶೋಕ ಪಾಟೀಲ, ತಾವರಗೇರಾ ಪಟ್ಟಣಕ್ಕೆ ಮುಖ್ಯಾಧಿಕಾರಿ ಶಂಕರ್ ಕಾಳೆ, ಹನುಮಸಾಗರ ಹೋಬಳಿಯ ಉಪ ನೋಂದಣಾಧಿಕಾರಿ ಪದ್ಮನಾಭ ಗುಡಿ, ಕುಷ್ಟಗಿ ಹೋಬಳಿಯ ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ ಮಗ್ಗದ್, ಹನುಮನಾಳ ಹೋಬಳಿಯ ಸಹಕಾರಿ ಅಧಿಕಾರಿ ಬಸವರಾಜ ಕೊರಗಲ್, ತಾವರಗೇರಾ ಹೋಬಳಿಯ ಲೋಕೋಪಯೋಗಿ ಇಲಾಖೆಯ ಎಇಇ ಎಚ್.ಬಿ. ಕಂಠಿ ಅವರನ್ನು ನೇಮಿಸಲಾಗಿದೆ.
ನಿಗದಿತ ಪ್ರದೇಶದಲ್ಲಿ ಸೆಕ್ಟರ್ ಮ್ಯಾಜಿಸ್ಟ್ರೇಟ್ಗಳು, ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಸರ್ಕಾರ ಜಾರಿಗೊಳಿಸಿರುವ ನಿಯಮಾವಳಿಗಳ ಅನುಷ್ಠಾನ ಮೇಲ್ವಿಚಾರಣೆ ನಡೆಸುತ್ತಾರೆ. ಯಾವುದೇ ಜಾತ್ರೆ, ನಾಟಕ, ಸಂತೆ, ಟ್ಯೂಶನ್ ಕ್ಲಾಸ್, ಬೇಸಿಗೆ ಶಿಬಿರಗಳು ನಡೆಯದಂತೆ ನೋಡಿಕೊಳ್ಳಬೇಕು. ತಾಲೂಕಾ ದಂಡಾಧಿಕಾರಿಗಳಿಗೆ ಇರುವ ಎಲ್ಲಾ ಅಧಿಕಾರಗಳು ಸೆಕ್ಟರ್ ಮ್ಯಾಜಿಸ್ಟ್ರೇಟ್ಗೆ ಇರಲಿವೆ ಎಂದು ತಹಶೀಲ್ದಾರ ಸಿದ್ದೇಶ್ ಎಂ. ಮಾಹಿತಿ ನೀಡಿದರು.