ಕೊಪ್ಪಳ: ಭಜನಾ ತಂಡದೊಂದಿಗೆ ಪದಗಳನ್ನು ಹಾಡುತ್ತಾ ಶ್ರೀಮಠದ ಮುಖ್ಯ ಮಹಾದ್ವಾರದಿಂದ ಕೈಲಾಸ ಮಂಟಪದಲ್ಲಿರುವ ಶ್ರೀ ಮರಿಶಾಂತವೀರ ಮಹಾಸ್ವಾಮಿಗಳ ಗದ್ದುಗೆಯವರೆಗೂ ಶರಣರು ಹೂವಿನ ಹಾಸಿಗೆ ಮೇಲೆ ದೀರ್ಘದಂಡ ನಮಸ್ಕಾರ ಹಾಕಿದರು.
ಶರಣರು ದೀರ್ಘದಂಡ ನಮಸ್ಕಾರ ಹಾಕುವುದಕ್ಕೆ ಭಕ್ತರು ವಿವಿಧ ಬಗೆಯ ಹೂಗಳನ್ನು ತಂದು ಹಾಕುತ್ತಾರೆ. ಭಕ್ತರು ಹಾಸಿದ ಈ ಹೂವಿನ ಹಾಸಿಗೆ ಮೇಲೆ ಶಿವಶಾಂತವೀರ ಶರಣರು ದೀರ್ಘದಂಡ ನಮಸ್ಕಾರ ಹಾಕುತ್ತಾರೆ. ಶರಣರ ಹಿಂದೆ ಸಾವಿರಾರು ಭಕ್ತರು ದೀರ್ಘದಂಡ ನಮಸ್ಕಾರ ಹಾಕುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿದರು.
ಶರಣರು ಹೂವಿನ ಹಾಸಿಗೆ ಮೇಲೆ ದಿರ್ಘದಂಡ ನಮಸ್ಕಾರ ಹಾಕುವ ಕ್ಷಣವನ್ನು ನೋಡಲು ಸಾವಿರಾರು ಭಕ್ತರು ಮಧ್ಯಾಹ್ನದಿಂದಲೇ ಶ್ರೀಮಠದ ಆವರಣದಲ್ಲಿ ನೆರೆದಿದ್ದರು. ಲಿಂಗೈಕ್ಯ ಶ್ರೀ ಚನ್ನವೀರ ಶರಣರು ದೀರ್ಘದಂಡ ನಮಸ್ಕಾರ ಹಾಕುತ್ತಿದ್ದ ಪರಂಪರೆಯನ್ನು ಪ್ರಸ್ತುತ ಶ್ರೀ ಶಿವಶಾಂತವೀರ ಶರಣರು ಪ್ರತಿವರ್ಷ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.