ಕೊಪ್ಪಳ: ಒಂದು ವಾರದೊಳಗೆ 140 ಬೆಡ್ ಹೆಚ್ಚುವರಿಯಾಗಿ ರೆಡಿ ಮಾಡಲಾಗವುದು ಎಂದು ಕೃಷಿ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ ಹೇಳಿದ್ದಾರೆ.
ಜಿಲ್ಲಾಡಳಿತ ಭವನದಲ್ಲಿ ಕೋವಿಡ್ -19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ತೆಗೆದುಕೊಂಡ ಕ್ರಮಗಳ ಕುರಿತ ಅಧಿಕಾರಿಗಳೊಂದಿಗಿನ ಪರಿಶೀಲನಾ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿ ಮಾತನಾಡಿದ ಅವರು, ನಾವು ಮೂರನೇ ಅಲೆಗೆ ಸಿದ್ದವಾಗಬೇಕಿದೆ. ಜಿಲ್ಲೆಗೆ ನಾಲ್ಕು ಆಕ್ಸಿಜನ್ ಪ್ಲಾಂಟ್ ಮಂಜೂರಾಗಿದೆ ಅಲ್ಲದೆ 9 ಹೊಸ ಆ್ಯಂಬುಲೆನ್ಸ್ಗಳು ಬರಲಿವೆ. ಜಿಲ್ಲೆಯ ಮೂರು ಕಡೆ ಸಿಟಿ ಸ್ಕ್ಯಾನ್ ಮಷಿನ್ ಅಳವಡಿಕೆ ಮಾಡಲಾಗುವುದು. ಇನ್ನು ಆಕ್ಸಿಜನ್ ನಿರ್ವಹಣೆಯ ಜವಾಬ್ದಾರಿಯನ್ನು ಅಪರ ಜಿಲ್ಲಾಧಿಕಾರಿಗೆ ನೀಡಲಾಗಿದೆ. ಜಿಲ್ಲೆಯಲ್ಲಿ ಬೆಡ್ ಕುರಿತಂತೆ ಪ್ರತಿದಿನ ಬೆಡ್ ಬುಲೆಟಿನ್ ಬಿಡುಗಡೆ ಮಾಡಲು ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ ಎಂದರು.
ನೆಗಡಿ, ಕೆಮ್ಮು, ಜ್ವರ ಬಂದರೆ ಜನರು ವೈದ್ಯರ ಬಳಿಗೆ ಹೋಗುವಂತೆ ಸಚಿವ ಬಿ.ಸಿ. ಪಾಟೀಲ ಜನರಲ್ಲಿ ಮನವಿ ಮಾಡಿದರು. ಅಲ್ಲದೆ ಯಾರೂ ಭಯ ಬೀಳದೆ ಧೈರ್ಯದಿಂದ ಎದುರಿಸುವಂತೆ ಸಚಿವರು ಮನವಿ ಮಾಡಿದರು.
ಸಭೆಯಲ್ಲಿ ಸಂಸದ ಸಂಗಣ್ಣ ಕರಡಿ, ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
ವಾರದೊಳಗೆ 140 ಹೆಚ್ಚುವರಿ ಬೆಡ್ ರೆಡಿ; ಬಿ.ಸಿ. ಪಾಟೀಲ - Koppal 3 Oxygen plant granted
ಜಿಲ್ಲೆಗೆ ನಾಲ್ಕು ಆಕ್ಸಿಜನ್ ಪ್ಲಾಂಟ್ ಮಂಜೂರಾಗಿದೆ ಅಲ್ಲದೆ 9 ಹೊಸ ಅಂಬುಲೆನ್ಸ್ ಗಳು ಬರಲಿವೆ. ಜಿಲ್ಲೆಯಮೂರು ಕಡೆ ಸಿಟಿ ಸ್ಕ್ಯಾನ್ ಮಷಿನ್ ಅಳವಡಿಕೆ ಮಾಡಲಾಗುವುದು. ಇನ್ನು ಆಕ್ಸಿಜನ್ ನಿರ್ವಹಣೆಯ ಜವಾಬ್ದಾರಿಯನ್ನು ಅಪರ ಜಿಲ್ಲಾಧಿಕಾರಿಗೆ ನೀಡಲಾಗಿದೆ.