ಕೊಪ್ಪಳ: 15 ದಿನಗಳಲ್ಲಿ 100ಕ್ಕೂ ಹೆಚ್ಚು ಜಾನುವಾರುಗಳು ವಿಚಿತ್ರ ಕಾಯಿಲೆಯಿಂದ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ದನದನಕೊಡ್ಡಿ, ಕೂಕನಪಳ್ಳಿ, ಕಾಮನೂರು, ಕೆರಳ್ಳಿ ಗ್ರಾಮಗಳಲ್ಲಿ ನಡೆದಿದೆ.
ಆರೋಗ್ಯಕರವಾಗಿರುವ ಜಾನುವಾರುಗಳು ಹಠಾತ್ ಆಗಿ ಸಾವನ್ನಪ್ಪುತ್ತಿವೆ. ಇದರಿಂದ ಮಾಲೀಕರಲ್ಲಿ ಆತಂಕ ಶುರುವಾಗಿದೆ. ಇನ್ನು, ಸೂಕ್ತ ಸಮಯಕ್ಕೆ ಜಾನುವಾರುಗಳಿಗೆ ಚಿಕಿತ್ಸೆ ನೀಡಲು ಪಶುವೈದ್ಯರು ಬಾರದ ಹಿನ್ನೆಲೆ ಜಾನುವಾರುಗಳು ಸಾವನ್ನಪ್ಪಿವೆ ಎಂದು ಪಶುವೈದ್ಯರ ವಿರುದ್ಧ ರೈತರು ಆರೋಪಿಸಿದ್ದಾರೆ. ಅಲ್ಲದೇ ಜಿಲ್ಲಾ ಆಡಳಿತ ಭವನದ ಎದುರು ಮೃತ ಜಾನುವಾರುಗಳನ್ನು ಇಟ್ಟು ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ: ನಿಗೂಢವಾಗಿ 8 ಜಾನುವಾರು ಸಾವು: 50ಕ್ಕೂ ಅಧಿಕ ಹಸು ಅಸ್ವಸ್ಥ..!