ಕೋಲಾರ: ಅನೇಕ ವಿಘ್ನಗಳ ನಡುವೆ ಚಾಲನೆ ನೀಡಲಾಗಿದ್ದ ಕೆ.ಸಿ.ವ್ಯಾಲಿ (ಕೋರಮಂಗಲ-ಚಲ್ಲಘಟ್ಟ ಕಣಿವೆ) ಯೋಜನೆಯಲ್ಲಿ ನೀರು ಪೋಲಾಗುತ್ತಿದ್ದು ಅಧಿಕಾರಿಗಳು ಗಮನಹರಿಸದೆ ಬೇಜವಾಬ್ದಾರಿತನ ತೋರಿಸುತ್ತಿರುವುದು ಸ್ಥಳೀಯರ ಕೆಂಗಣ್ಣಿಗೆ ತುತ್ತಾಗಿದೆ.
ಜಿಲ್ಲೆಯಲ್ಲಿ ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಸಲುವಾಗಿ ಅನೇಕ ಕೆರೆಗಳಿಗೆ ಕೆ.ಸಿ.ವ್ಯಾಲಿ ನೀರು ಹರಿಸಲಾಗುತ್ತಿದೆ. ಈ ನೀರನ್ನು ರೈತರು ಬಳಕೆ ಮಾಡಿಕೊಂಡರೆ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಹೇಳುವ ಅಧಿಕಾರಿಗಳು, ಹೀಗೆ ನೀರು ಪೋಲಾಗುತ್ತಿದ್ದರೂ ದುರಸ್ಥಿ ಮಾಡದೆ ಸುಮ್ಮನಿದ್ದಾರೆ ಅನ್ನೋದು ಸ್ಥಳೀಯರು ಆಕ್ರೋಶ.