ETV Bharat / state

'ಬಡ ರಾಜಕಾರಣಿ ಎಂದು ಕಣ್ಣೀರು ಸುರಿಸ್ತೀಯಾ ಮಿಸ್ಟರ್‌ ರಮೇಶ್‌ಕುಮಾರ್‌..' - LAtest Kolar news

ವಿಧಾನಸಭೆಯಲ್ಲಿ ನಾನು ಬಡ ರಾಜಕಾರಣಿ ಎಂದು ಕಣ್ಣೀರು ಸುರಿಸುತ್ತೀಯಾ.. ನಾನು ಸಾಚ, ಬಡವ ಅಂತಾ ನೀನು ಮಾತಾಡ್ತೀಯಾ.. ಪ್ರಾಮಾಣಿಕ ರಾಜಕಾರಣಿ ತರ ಪೋಸ್ ಕೊಟ್ಟು ಬಾಡಿಗೆ ಮನೆಯಲ್ಲಿ ವಾಸ ಮಾಡತ್ತಿದ್ದೀನಿ ಅಂತಾ ಹೇಳ್ತೀಯ. ಆದರೆ, ನೂರಾರು ಎಕರೆ ಸರ್ಕಾರಿ ಜಮೀನು ಕಬಳಿಸಿರುವ ನಿನಗೆ ನಾಚಿಕೆ ಆಗಲ್ವಾ ಮಿಸ್ಟರ್ ರಮೇಶ್ ಕುಮಾರ್, ನಿನಗೆ ಮಾನ-ಮರ್ಯಾದೆ ಇದೆಯಾ ಎಂದು ಪ್ರಶ್ನಿಸಿದ್ರು.

venkatashivareddy-
ಮಾಜಿ ಸ್ಪೀಕರ್​ ವಿರುದ್ದ ಗುಡುಗಿದ ವೆಂಕಟಾಶಿವಾರೆಡ್ಡಿ
author img

By

Published : Jan 11, 2020, 7:36 PM IST

ಕೋಲಾರ : ಮಾಜಿ ಸ್ಪೀಕರ್​​ ರಮೇಶ್​ ಕುಮಾರ್​ ವಿರುದ್ದ ಜೆಡಿಎಸ್​ ಮಾಜಿ ಶಾಸಕ ವೆಂಕಟಶಿವಾರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.

ಜಿಲ್ಲೆಯ ಶ್ರೀನಿವಾಸಪುರದಲ್ಲಿನ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕಳೆದ 9ನೇ ತಾರೀಖು ವೆಂಕಟಶಿವಾರೆಡ್ಡಿ ವಿರುದ್ದ ಶ್ರೀನಿವಾಸಪುರದ ಜೆಎಂಎಫ್​ಸಿ ಕೋಟ್೯ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಇದರಿಂದ ಕೆರಳಿದ ಅವರು ನಾನು ಬಡವ ಎಂದು ಸುಳ್ಳು ಹೇಳಿ ಜನರನ್ನು ಮರಳು ಮಾಡಿ ರಾಜಕೀಯ ಮಾಡ್ತಿದ್ದಾರೆ ಎಂದು ಹರಿಹಾಯ್ದರು.

ಮಾಜಿ ಸ್ಪೀಕರ್​ ವಿರುದ್ಧ ಗುಡುಗಿದ ಜೆಡಿಎಸ್‌ ನಾಯಕ ವೆಂಕಟಶಿವಾರೆಡ್ಡಿ..

ವಿಧಾನಸಭೆಯಲ್ಲಿ ನಾನು ಬಡ ರಾಜಕಾರಣಿ ಎಂದು ಕಣ್ಣೀರು ಸುರಿಸುತ್ತೀಯಾ.. ನಾನು ಸಾಚ, ಬಡವ ಅಂತಾ ನೀನು ಮಾತಾಡ್ತೀಯಾ.. ಪ್ರಾಮಾಣಿಕ ರಾಜಕಾರಣಿ ತರ ಪೋಸ್ ಕೊಟ್ಟು ಬಾಡಿಗೆ ಮನೆಯಲ್ಲಿ ವಾಸ ಮಾಡತ್ತಿದ್ದೀನಿ ಅಂತಾ ಹೇಳ್ತೀಯ. ಆದರೆ, ನೂರಾರು ಎಕರೆ ಸರ್ಕಾರಿ ಜಮೀನು ಕಬಳಿಸಿರುವ ನಿನಗೆ ನಾಚಿಕೆ ಆಗಲ್ವಾ ಮಿಸ್ಟರ್ ರಮೇಶ್ ಕುಮಾರ್, ನಿನಗೆ ಮಾನ-ಮರ್ಯಾದೆ ಇದೆಯಾ ಎಂದು ಪ್ರಶ್ನಿಸಿದ್ರು.

ತಮ್ಮ ಸ್ವಗ್ರಾಮ ಅಡ್ಡಗಲ್‌ನ ಪಕ್ಕದ ಹೊಸಹುಡ್ಯ ಗ್ರಾಮದಲ್ಲಿ ಅಧಿಕಾರಿಗಳನ್ನು ಬೆದರಿಸಿ ಅರಣ್ಯ ಇಲಾಖೆಗೆ ಸೇರಿದ ಜಮೀನನ್ನು ರಮೇಶ್‌ಕುಮಾರ್​ ಕಬಳಿಕೆ ಮಾಡಿದ್ದಾರೆ ಎಂದು ಆರೋಪಿಸಿದರು. ಬೆಂಗಳೂರಿನ ಇಂದಿರಾನಗರದಲ್ಲಿ ಕೋಟ್ಯಂತರ ಬೆಲೆ ಬಾಳುವ ಕಾಂಪ್ಲೆಕ್ಸ್‌ ಇದೆ. ಥಣಿಸಂದ್ರದಲ್ಲಿ ಸುಮಾರು ₹16 ಕೋಟಿ ವೆಚ್ಚದಲ್ಲಿ ಮಗನ ಹೆಸರಿನಲ್ಲಿ ಮನೆ ಇದೆ. ಅತ್ತಿಕುಂಟೆಯ ಕೊಲೆ ಪ್ರಕರಣದಲ್ಲಿ ರಮೇಶ್ ಕುಮಾರ್ 11ನೇ ಅರೋಪಿ. ಅಡ್ಡಗಲ್‌ನ ಶ್ಯಾಮ್ ಸುಂದರ್ ರೆಡ್ಡಿ ಕೊಲೆ ಪ್ರಕರಣದಲ್ಲೂ ಆರೋಪಿಯಾಗಿದ್ದಾರೆ ಎಂದು ಆರೋಪಗಳ ಸುರಿಮಳೆ ಸುರಿಸಿದ್ರು.

40 ವಷ೯ಗಳಿಂದ ರಾಜಕಾರಣ ಮಾಡ್ತಿರೋ ರಮೇಶ್ ಕುಮಾರ್ ನಾನು ಬಡವ ಅಂತಾ ಶ್ರೀನಿವಾಸಪುರ ತಾಲೂಕಿನ ಜನರನ್ನ ವಂಚನೆ ಮಾಡಿ ಜನತೆಯ ರಕ್ತ ಹೀರುವ ರಾಜಕಾರಣ ಮಾಡುತ್ತಿದ್ದಾರೆ ಎಂದು ಗುಡುಗಿದರು.

Intro:ಆಂಕರ್ : ರಾಯಲಸೀಮ ರಾಜಕೀಯ ಎಂದೆ ಹೆಸರಾಗಿರುವ ಕೋಲಾರದ ಶ್ರೀನಿವಾಸಪುರದಲ್ಲಿ ರೆಡ್ಡಿ ವರ್ಸಸ್ ಸ್ವಾಮಿ ಅವರ ನಡುವಿನ ಕಾಳಗ ಮುಂದುವರೆದಿದೆ. Body:ಇಂದು ಕೋಲಾರ ಜಿಲ್ಲೆ ಶ್ರೀನಿವಾಸಪುರದಲ್ಲಿನ ಜೆಡಿಎಸ್ ಕಛೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿದ, ಜೆಡಿಎಸ್‌ನ ಮಾಜಿ ಶಾಸಕ ವೆಂಕಟಶಿವಾರೆಡ್ಡಿ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಗುಡುಗಿದ್ದಾರೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕಳೆದ ೯ ನೇ ತಾರೀಖು ವೆಂಕಟಶಿವಾರೆಡ್ಡಿ ವಿರುದ್ದ ಶ್ರೀನಿವಾಸಪುರದ ಜೆಎಂಎಫ್ಸಿ ಕೋಟ್೯ನಲ್ಲಿ ಮಾನನಷ್ಟ ಮೊಕ್ಕದಮ್ಮೆ ಹೂಡಿದ್ರು. ಈ ಹಿನ್ನಲೆ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಮಿಸ್ಟರ್ ರಮೇಶ್ ಕುಮಾರ್ ನಿನಗೆ ತಾಕತ್ ಇದ್ದರೆ ನನ್ನನ್ನು ಜೈಲ್‌ಗೆ ಹಾಕಿಸೋದಲ್ಲ ಗಲ್‌ಗೆ ಹಾಕ್ಸು ಎಂದು ಸವಾಲ್ ಎಸೆದಿದ್ದಾರೆ. ಅಲ್ಲದೆ ವಿಧಾನಸಭೆಯಲ್ಲಿ ನಾನು ಬಡ ರಾಜಕಾರಣಿ ಎಂದು ಕಣ್ಣೀರು ಸುರಿಸುತ್ತೀಯ, ನಾನು ಸಾಚ, ಬಡವ ಅಂತಾ ನೀನು ಮಾತಾಡ್ತೀಯಾ,ಪ್ರಾಮಾಣಿಕ ರಾಜಕಾರಣಿ ತರ ಪೋಸ್ ಕೊಟ್ಟು ಬಾಡಿಗೆ ಮನೆಯಲ್ಲಿ ವಾಸ ಮಾಡತ್ತಿದ್ದೀನಿ ಅಂತಾ ಹೇಳ್ತೀಯ, ಆದ್ರೇ ನೂರಾರು ಎಕರೆ ಸರ್ಕಾರಿ ಜಮೀನು ಕಬಳಿಸರುವ ನಿನಗೆ ನಾಚಿಕೆ ಆಗೋಲ್ವಾ ಮಿಸ್ಟರ್ ರಮೇಶ್ ಕುಮಾರ್ ನಿನಗೆ ಮಾನ ಮರ್ಯಾದೆ ಇದೆಯಾ ಎಂದು ಪ್ರಶ್ನಿಸಿದ್ರು. ಅಲ್ಲದೆ ರಮೇಶ್ ಕುಮಾರ್ ವಿರುದ್ಧ ಗುಡುಗಿದ ಅವರು, ತಮ್ಮ ಸ್ವಗ್ರಾಮ ಅಡ್ಡಗಲ್‌ನ ಪಕ್ಕದ ಹೊಸಹುಡ್ಯ ಗ್ರಾಮದ ಸವೆ೯ ನಂ ನಲ್ಲಿ ಅಧಿಕಾರಿಗಳನ್ನು ಬೆದರಿಸಿ ಅರಣ್ಯ ಇಲಾಖೆಗೆ ಸೇರಿದ ಜಮೀನನ್ನು ಕಬಳಿಕೆ ಮಾಡಿದ್ದಾರೆ ಎಂದು ಆರೋಪಿಸಿದ್ರು. ಇನ್ನು ಬೆಂಗಳೂರಿನ ಇಂದಿರಾನಗರದಲ್ಲಿ ಕೋಟ್ಯಾಂತರ ಬೆಲೆ ಬಾಳುವ ಕಾಂಪ್ಲೆಕ್ಸ್ ಇದೆ, ಸುಮಾರು ೧೬ ಕೋಟಿ ವೆಚ್ಚದಲ್ಲಿ ಮಗನ ಹೆಸರಲ್ಲಿ ಥಣಿಸಂದ್ರದಲ್ಲಿ ಮನೆ ಇದೆ, ಅತ್ತಿಕುಂಟೆಯ ಕೊಲೆ ಪ್ರಕರಣದಲ್ಲಿ ರಮೇಶ್ ಕುಮಾರ್ ೧೧ ನೇ ಅರೋಪಿಯಾಗಿದ್ದಾರೆ, ಅಡ್ಡಗಲ್ ನ ಶ್ಯಾಮ್ ಸುಂದರ್ ರೆಡ್ಡಿ ಕೊಲೆ ಪ್ರಕರಣದಲ್ಲೂ ಅರೋಪಿಯಾಗಿದ್ದಾರೆ ಎಂದು ಆರೋಪಗಳ ಸುರಿಮಳೆ ಸುರಿದ್ರು. ಇನ್ನು ೪೦ ವಷ೯ಗಳಿಂದ ರಾಜಕಾರಣ ಮಾಡ್ತಿರೋ ರಮೇಶ್ ಕುಮಾರ್ ನಾನು ಬಡವ ಅಂತಾ ಶ್ರೀನಿವಾಸಪುರ ತಾಲ್ಲೂಕಿನ ಜನರನ್ನ ವಂಚನೆ ಮಾಡ್ಕೊಂಡು,ಜನತೆಯ ರಕ್ತ ಹೀರುವ ರಾಜಕಾರಣ ಮಾಡುತ್ತಿದ್ದಾರೆ ಅಂತ ಹೇಳಿದ್ರು. ಇನ್ನು ರಮೇಶ್ ಕುಮಾರ್ ಹಾಗೂ ವೆಂಕಟಾಶಿವಾರೆಡ್ಡಿ ಇಬ್ಬರು ಸಹ ಶ್ರೀನಿವಾಸಪುರ ಕ್ಷೇತ್ರದಲ್ಲಿ ಸಾಂಪ್ರದಾಯಕ ಎದುರಾಳಿಗಳಾಗಿದ್ದು ಡಿಸೆಂಬರ್ ೧೯-೨೦೧೯ ರಂದು ವಿಧಾನಸೌಧದಲ್ಲಿ ರಮೇಶ್ ಕುಮಾರ್ ವಿರುದ್ಧ ಪತ್ರಿಕಾಗೋಷ್ಟಿ ನಡೆಸಿ ೨೦೦ ಕ್ಕೂ ಹೆಚ್ಚ ಪುಟಗಳ ಅಕ್ರಮವೆಸಗಿರುವ ಬಗ್ಗೆ ದಾಖಲೆ ಬಿಡುಗಡೆ ಮಾಡಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ರು. ಈ ಹಿನ್ನಲೆ ರಮೇಶ್ ಕುಮಾರ್ ಇದೇ ಜ.೯ ರಂದು ಶ್ರೀನಿವಾಸಪುರದ ಜೆಎಂಎಫ್ಸಿ ಕೋಟ್೯ನಲ್ಲಿ ಮಾಜಿ ಶಾಸಕ ವೆಂಕಟಾಶಿವಾರೆಡ್ಡಿ ವಿರುದ್ಧ ಮಾನನಷ್ಟ ಮೊಕ್ಕದಮ್ಮೆ ದಾಖಲಿಸಿದ್ದಾರೆ.

Conclusion:ಒಟ್ನಲ್ಲಿ ಇಷ್ಟೂ ದಿನ ತಣ್ಣಗಿದ್ದ ರೆಡ್ಡಿ ವರ್ಸಸ್ ಸ್ವಾಮಿ ಕಾಳಗ ಶ್ರೀನಿವಾಸಪುರದಲ್ಲಿ ಪ್ರಾರಂಭವಾಗಿದೆ.

ಬೈಟ್ ೧: ವೆಂಕಟಶಿವಾರೆಡ್ಡಿ (ಮಾಜಿ ಶಾಸಕ ಶ್ರೀನಿವಾಸಪುರ)

ಬೈಟ್ ೨: ವೆಂಕಟಶಿವಾರೆಡ್ಡಿ (ಮಾಜಿ ಶಾಸಕ ಶ್ರೀನಿವಾಸಪುರ)
ETV Bharat Logo

Copyright © 2025 Ushodaya Enterprises Pvt. Ltd., All Rights Reserved.