ETV Bharat / state

ಅವರೊಂದಿಗೆ ಮಲಗುವುದಕ್ಕೆ ನನಗೆ ಇಷ್ಟವಿಲ್ಲ: ಹೆಚ್.ಮುನಿಯಪ್ಪ  ಹೇಳಿಕೆಗೆ  ಸ್ಪೀಕರ್ ತಿರುಗೇಟು

ಸಂಸದ ಕೆ.ಹೆಚ್.ಮುನಿಯಪ್ಪ ಅವರಿಗೆ ನನ್ನೊಂದಿಗೆ ಮಲಗಲು ಇಷ್ಟವಿರಬಹುದು. ಆದರೆ, ಅವರೊಂದಿಗೆ ಮಲಗುವುದಕ್ಕೆ ನನಗೆ ಇಷ್ಟವಿಲ್ಲ ಎಂದು ಕೆಚ್,ಮುನಿಯಪ್ಪ ಅವರ ಹೇಳಿಕೆಗೆ ಸ್ಪೀಕರ್ ರಮೇಶ್​ ಕುಮಾರ್​ ವ್ಯಂಗ್ಯವಾಡಿದ್ದಾರೆ.

ಕೆಚ್,ಮುನಿಯಪ್ಪ ಅವರ ಹೇಳಿಕೆಗೆ ಸ್ಪೀಕರ್ ರಮೇಶ ಕುಮಾರ ವ್ಯಂಗ್ಯ
author img

By

Published : Mar 22, 2019, 4:42 AM IST

ಕೋಲಾರ: ನಾನು ಯಾರೊಂದಿಗೂ ಮಲಗುವುದಿಲ್ಲ,ಒಂದು ವೇಳೆ ಸಂಸದ ಕೆ.ಹೆಚ್.ಮುನಿಯಪ್ಪ ಅವರಿಗೆ ನನ್ನೊಂದಿಗೆ ಮಲಗಲು ಇಷ್ಟವಿರಬಹುದು.ಆದರೆ, ಅವರೊಂದಿಗೆ ಮಲಗುವುದಕ್ಕೆ ನನಗೆ ಇಷ್ಟವಿಲ್ಲ ಎಂದು ಕೆಚ್. ಮುನಿಯಪ್ಪ ಅವರ ಹೇಳಿಕೆಗೆ ಸ್ಪೀಕರ್ ರಮೇಶ್​ ಕುಮಾರ್​ ವ್ಯಂಗವಾಡಿದ್ರು.

ಕೆಚ್,ಮುನಿಯಪ್ಪ ಅವರ ಹೇಳಿಕೆಗೆ ಸ್ಪೀಕರ್ ರಮೇಶ ಕುಮಾರ ವ್ಯಂಗ್ಯ

ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಸಂಸದ ಕೆ.ಹೆಚ್. ಮುನಿಯಪ್ಪ ಅವರು ಸ್ಪೀಕರ್ ಹಾಗು ನಾನು ಗಂಡ ಹೆಂಡತಿ ಇದ್ದ ಹಾಗೆ ಎಂದು ಹೇಳಿಕೆ ನೀಡಿದ್ದರು, ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಸ್ಪೀಕರ್, ನಾನು ಗಂಡಸರೊಂದಿಗೆ ಮಲಗುವುದಿಲ್ಲ, ನಾನು ನನ್ನ ಮನೆಯಲ್ಲಿಯೇ ಮಲಗುವೆ, ನನ್ನ ಕೈಹಿಡಿದಿರುವ ನನ್ನ ಹೆಂಡತಿಯೊಂದಿಗೆ ಸಂಭಂದವಿದೆ ಹೊರತು ಯಾವುದೇ ಅನೈತಿಕ ಸಂಬಂಧವಿಲ್ಲ ಎಂದು ಟೀಕಿಸಿದ್ರು.

ಇನ್ನು ಕೆ.ಎಚ್.ಮುನಿಯಪ್ಪ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಾನು ಜಡ್ಜ್ ಇದ್ದ ಹಾಗೆ ಯಾವ ಪಕ್ಷಕ್ಕೂ ಸಹಮತ ನೀಡುವುದಿಲ್ಲ ಹಾಗೆಯೇ ಭಿನ್ನಮತವೂ ಇಲ್ಲ, ಎರಡೂ ಕಡೆಯವರು ಸರ್ವಾನುಮತದಿಂದ ಆಯ್ಕೆ ಮಾಡಿದ್ದಾರೆ, ಹೀಗಾಗಿ ಪಕ್ಷದಲ್ಲಿರುವವರು ತೀರ್ಮಾನ ತೆಗೆದುಕೊಳ್ಳುತ್ತಾರೆ ಜೊತೆಗೆ ನನ್ನ ಮನಸ್ಸಿನಲ್ಲಿರುವುದು ಹೇಳುವುದಕ್ಕೂ ಆಗುವುದಿಲ್ಲ ಎಂದರು.

ಅಲ್ಲದೆ ಸಾರ್ವಜನಿಕ ಜೀವನದಲ್ಲಿ ರಾಜಕರಣಿಗಳಿಗೆ ಪ್ರಧಾನವಾಗಿ ವಿಜೃಂಭಿಸಬೇಕಾದದ್ದು ಲಜ್ಜೆ, ಸಾರ್ವಜನಿಕ ಜೀವನ ಕಳೆದಂತೆಲ್ಲ ಲಜ್ಜಾ ಹೀನವಾಗಿ ಬದುಕಬಾರದು, ಜನರ ಮಾನ, ಲಜ್ಜೆ ಕಳೆಯಬಾರದು, ಆಗ ಪ್ರಜಾಸತ್ತತೆಗೆ ಗೌರದ ಸಿಗುವಂತಾಗುತ್ತದೆ ಎಂದು ಪರೋಕ್ಷವಾಗಿ ಮುನಿಯಪ್ಪ ಅವರ ವಿರುದ್ದ ವಾಗ್ದಾಳಿ ನಡೆಸಿದ್ರು.

sample description
ETV Bharat Logo

Copyright © 2024 Ushodaya Enterprises Pvt. Ltd., All Rights Reserved.