ಕೋಲಾರ: ಜಿಲ್ಲೆಯ ಮುಳಬಾಗಿಲು ತಾಲೂಕಿನ ಬೇವಹಳ್ಳಿ ಗ್ರಾಮದಲ್ಲಿರೇಷ್ಮೆಹುಳುಗಳ ಸಾಕಾಣಿಕೆ ಕೇಂದ್ರ ಬೆಂಕಿಗಾಹುತಿಯಾಗಿದ್ದು, ದುಷ್ಕರ್ಮಿಗಳು ಬೆಂಕಿ ಇಟ್ಟಿದ್ದಾರೆ ಎಂದು ಮಾಲೀಕರು ಆರೋಪಿಸಿದ್ದಾರೆ.
ಬೆಂಕಿ ಅನಾಹುತದ ಪರಿಣಾಮ ಚಾಕಿ ಕೇಂದ್ರದಲ್ಲಿದ್ದ 400 ಚಂದ್ರಂಕಿ ಹಾಗೂ ರೇಷ್ಮೆ ಗೂಡು ಬೆಂಕಿಗಾಹುತಿಯಾಗಿದೆ.
ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕು ಬೇವಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮದ ಬಾಬಣ್ಣ ಎಂಬುವರಿಗೆ ಸೇರಿದ ಚಾಕಿ ಕೇಂದ್ರ ಸಂಪೂರ್ಣ ಬೆಂಕಿಗಾಹುತಿಯಾಗಿದೆ.
ಘಟನೆಯಿಂದ ಸುಮಾರು 6 ಲಕ್ಷಕ್ಕೂ ಅಧಿಕಮೌಲ್ಯದ ವಸ್ತುಗಳು ಭಸ್ಮವಾಗಿದ್ದ ಘಟನೆ ಸಂಬಂಧ ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.