ಕೋಲಾರ: ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದಿದ್ದ ಕಡವೆಯೊಂದನ್ನು ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿ ಕಾಡಿಗೆ ಬಿಟ್ಟ ಘಟನೆ ಕೋಲಾರ ನಗರದಲ್ಲಿ ಜರುಗಿದೆ.
ಕೋಲಾರ ನಗರದ ಪೊಲೀಸ್ ಕ್ವಾಟ್ರಸ್ ಬಳಿ ಬಂದಿದ್ದ ಕಡವೆ, ಗಾಬರಿಯಿಂದ ಅಡ್ಡಾದಿಡ್ಡಿ ಓಡಾಡತೊಡಗಿತ್ತು. ಜೊತೆಗೆ ನಗರಕ್ಕೆ ಬಂದಿದ್ದ ಕಡವೆ ನೋಡಲು ಜನ ಮುಗಿಬಿದ್ದ ಹಿನ್ನೆಲೆ ಸ್ಥಳದಲ್ಲಿ ಹೆಚ್ಚು ಗಲಾಟೆಯಾಗುತ್ತಿತ್ತು. ಇದ್ರಿಂದ ಗಾಬರಿಗೊಂಡಿದ್ದ ಕಡವೆ ಸ್ಥಳದಲ್ಲಿಯೇ ಇದ್ದ ಮರದ ಸಾಮಗ್ರಿಗಳ ಮಧ್ಯೆ ಸಿಲುಕಿಕೊಂಡಿತ್ತು. ಈ ವೇಳೆ ಸುಮಾರು ಒಂದು ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಕಡವೆಯನ್ನು ಸುರಕ್ಷಿತವಾಗಿ ಹಿಡಿಯಲಾಯಿತು. ಪೊಲೀಸರು ಹಾಗೂ ಅರಣ್ಯ ಇಲಾಖೆಯ ಸಮಯ ಪ್ರಜ್ಞೆಯಿಂದ ಜಿಂಕೆಯನ್ನು ರಕ್ಷಣೆ ಮಾಡಲಾಯಿತು.
ಇನ್ನು ಕೋಲಾರಕ್ಕೆ ಹೊಂದಿಕೊಂಡಂತೆ ಅರಣ್ಯ ಪ್ರದೇಶ ಇರುವ ಕಾರಣ ಕಾಡಿನಲ್ಲಿ ಪ್ರಾಣಿಗಳಿಗೆ ಸರಿಯಾದ ರೀತಿಯ ಆಹಾರ ವ್ಯವಸ್ಥೆ ಮಾಡಬೇಕೆಂದು ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.