ETV Bharat / state

ರೌಡಿ ತಂಗಂ ಸೋದರರು ಅಕ್ರಮ ಗಾಂಜಾ ವಹಿವಾಟಿನಲ್ಲಿ ಭಾಗಿ: ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲು..!

ರೌಡಿ ತಂಗಂ ಸೋದರರು ಅಕ್ರಮ ಗಾಂಜಾ ವಹಿವಾಟು ಮಾಡಿ ಇತ್ತೀಚೆಗೆ ಸಿಕ್ಕಿಬಿದ್ದಿದ್ದು, ಅವರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Rowdy Thangam brothers involved in illegal marijuana trade
ರೌಡಿ ತಂಗಂ ಸೋದರರು ಅಕ್ರಮ ಗಾಂಜಾ ವಹಿವಾಟಿನಲ್ಲಿ ಭಾಗಿ
author img

By

Published : Dec 1, 2020, 9:40 PM IST

ಕೋಲಾರ: ಒಂದು ಕಾಲದಲ್ಲಿ ಚಿನ್ನದ ಗಣಿ ಪ್ರದೇಶದಲ್ಲಿ ಸದ್ದು ಮಾಡಿದ್ದ ರೌಡಿ ತಂಗಂ ಸೋದರರಾದ ಜೋಸೆಫ್​ ಮತ್ತು ಪಲ್ಲರಾಜು, ಅಕ್ರಮ ಗಾಂಜಾ ವಹಿವಾಟು ಮಾಡಿ ಇತ್ತೀಚೆಗೆ ಸಿಕ್ಕಿಬಿದ್ದಿದ್ದಾರೆ. ಆದ್ದರಿಂದ ಅವರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿ ಕೆ.ಜಿ.ಎಫ್‌ ಪೊಲೀಸ್‌ ವರಿಷ್ಠಾಧಿಕಾರಿ ಇಲಕ್ಕಿಯಾ ಕರುಣಾಕರನ್‌ ಕ್ರಮಕ್ಕೆ ಶಿಫಾರಸ್ಸು ಮಾಡಿದ್ದಾರೆ.

ಈ ಮೊದಲು 1990ರ ದಶಕದಲ್ಲಿ ತಂಗಂ ಸೇರಿದಂತೆ ಅವರ ಕುಟುಂಬದವರ ಅಟ್ಟಹಾಸ ಎಲ್ಲೆ ಮೀರಿತ್ತು. ಆ ವೇಳೆ ಪೊಲೀಸರು ತಂಗಂ, ಸೆಲ್ವಂರನ್ನು ಎನ್​​ಕೌಂಟರ್​ ಮಾಡಿ, ಇಡೀ ಕುಟುಂಬದರ ಹೆಡೆ ಮುರಿ ಕಟ್ಟಿದ್ದರು. ಇದಾದ ನಂತರ ತಂಗಂ ಕುಟುಂಬ ಸೈಲೆಂಟಾಗಿತ್ತು. ಆದ್ರೆ ಇತ್ತೀಚೆಗೆ ಕಳೆದ ಒಂದು ದಶಕಗಳಿಂದ ಮತ್ತೆ ಅನೈತಿಕ ಚಟುವಟಿಕೆಗಳನ್ನು ಶುರುಮಾಡಿಕೊಂಡಿದ್ರು. ಕಳ್ಳತನ, ಸುಲಿಗೆ, ಡಕಾಯಿತಿ, ಕೊಲೆ ಯತ್ನ ಪ್ರಕರಣಗಳಲ್ಲಿ ಭಾಗಿಯಾಗಿದ್ರು. ಈ ಸಂಬಂಧ ಅವರ ಮೇಲೆ ರೌಡಿಶೀಟ್ ಓಪನ್ ಮಾಡಿ ಎಚ್ಚರಿಕೆ ನೀಡಲಾಗಿತ್ತು.

ರೌಡಿ ತಂಗಂ ಸೋದರರು ಅಕ್ರಮ ಗಾಂಜಾ ವಹಿವಾಟಿನಲ್ಲಿ ಭಾಗಿ

ಇನ್ನು ಪಲ್ಲರಾಜ್​ ಹಾಗೂ ಜೋಸೆಫ್​ ಮೇಲೆ ಹತ್ತಾರು ಪ್ರಕರಗಳಿವೆ, ಪಲ್ಲರಾಜ್​ 1991 ರಿಂದಲೂ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು, ಈಗಲೂ ಈತನ ಮೇಲೆ ಸುಮಾರು 40 ಪ್ರಕರಣಗಳಿವೆ. ಜೊತೆಗೆ ಈತ ರೌಡಿಶೀಟರ್​ ಕೂಡಾ ಹೌದು. ಜೋಸೆಫ್​ ಕೂಡಾ 1994 ರಿಂದಲೂ ಅಕ್ರಮ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದಾನೆ. ಈತನ ಮೇಲೆ ಈಗಲೂ ವಿವಿಧ ಪೊಲೀಸ್​ ಠಾಣೆಗಳಲ್ಲಿ 29 ಪ್ರಕರಗಳು ಬಾಕಿ ಇವೆ.

ಹೀಗಿದ್ದರೂ ಇವರು ಅಂತರಾಜ್ಯ ಗಾಂಜಾ ಜಾಲದಲ್ಲಿ ಸಿಕ್ಕಿಬಿದ್ದ ಹಿನ್ನೆಲೆ, ಇಬ್ಬರ ಮೇಲೂ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ಬಳ್ಳಾರಿ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗಿದೆ. ಜೊತೆಗೆ ಇವರನ್ನು ಗಡಿಪಾರು ಮಾಡಲು ಸರ್ಕಾರದ ಹಾಗೂ ನ್ಯಾಯಾಂಗ ಇಲಾಖೆಯ ಸಮ್ಮತಿ ಕೇಳಿದ್ದು, ಒಪ್ಪಿಗೆ ಸಿಕ್ಕಿದ್ದೇ ಆದಲ್ಲಿ ಗೂಂಡಾ ಕುಟುಂಬವನ್ನು ಗಡಿಪಾರು ಮಾಡುವ ಸಾಧ್ಯತೆ ಇದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.