ಕೋಲಾರ : ನಾನು ಜಿಲ್ಲೆಯ ಎಂಎಲ್ಎ ಇದೀನಿ. ಒಂದು ದಿನ ಆದ್ರೂ ನಗರಸಭೆಯಿಂದ ನಿರ್ಮಾಣ ಆಗುತ್ತಿರುವ ಪಾರ್ಕ್ ಬಗ್ಗೆ ನನ್ನ ಗಮನಕ್ಕೆ ತಂದಿದ್ದೀರಾ ನಾನ್ ಸೆನ್ಸ್ ಎಂದು ಜೆಡಿಎಸ್ ಶಾಸಕ ಶ್ರೀನಿವಾಸ್ ಗೌಡ ಉಸ್ತುವಾರಿ ಸಚಿವ ಕೃಷ್ಣ ಭೈರೇಗೌಡ ಅವರ ಮುಂದೇಯೆ ಅವಾಜ್ ಹಾಕಿರುವ ಘಟನೆ ನಡೆದಿದೆ.
ಇಂದು ನಗರಸಭೆ ಪ್ರಗತಿ ಕಾಮಗಾರಿ ಯೋಜನೆಯ ಸಭೆಗಾಗಿ ಆಗಮಿಸಿದ್ದ ಉಸ್ತುವಾರಿ ಸಚಿವ ಕೃಷ್ಣ ಭೈರೇಗೌಡರು ಕಾರ್ಯಕ್ರಮ ನಿಯೋಜನೆ ಇಲ್ಲದ್ದಿದ್ದರೂ ಧಿಡೀರನೆ ಪಾರ್ಕ್ ಕಾಮಗಾರಿ ವೀಕ್ಷಣೆಗೆ ಆಗಮಿಸಿದ್ದರು. ಇದಕ್ಕೂ ಮುನ್ನ ನಗರದ ಮಹಾಲಕ್ಮೀ ಲೇಔಟ್ನಲ್ಲಿರುವ ಶಾಸಕ ಶ್ರೀನಿವಾಸ್ ಗೌಡ ನಿವಾಸಕ್ಕೆ ಭೇಟಿ ನೀಡಿದ ಸಚಿವರು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಬಳಿಕ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವಾಗ ಶ್ರೀನಿವಾಸ್ ಗೌಡ್ರು ಶಾಸಕರು ಅಧಿಕಾರಿಗಳೊಂದಿಗೆ ಚರ್ಚಿಸುತ್ತಿರುವ ವೇಳೆ ಅಲ್ಲಾ ರೀ ಒಂದು ಕೋಟಿ ತ್ತೊಂಬತ್ತೆಂಟು ಲಕ್ಷ ವೆಚ್ಚದ ಕಾಮಗಾರಿ ನಡೆಯುತ್ತಿದೆ. ನಾನೊಬ್ಬ ಶಾಸಕನಿದ್ದೇನೆ. ನಾನು ಶಾಸಕ ಆದ ಮೇಲೆ ಈ ಕೆಸಲ ಮಾಡುತ್ತಿದ್ದೀರಾ, ನನಗೂ ಒಮ್ಮೆಯಾದರೂ ಈ ಕುರಿತು ನನಗೆ ತಿಳಿಸಿದ್ದೀರಾ, ನಾನ್ ಸೆನ್ಸ್. ಎಲ್ಲಾ ದರೋಡೆ ಮಾಡ್ತಿದ್ದೀರಿ. ನನಗಂತೂ ಸಾಕಾಗೋಗಿದೆ ಎಂದು ಕೋಲಾರ ನಗರಸಭೆ ಇಂಜಿನಿಯರ್ ಪೂಜಾರಪ್ಪ ಅವರಿಗೆ ತರಾಟೆ ತೆಗೆದುಕೊಂಡಿದ್ದಾರೆ.
ಇನ್ನು ಶಾಸಕ ಶ್ರೀನಿವಾಸ್ ಗೌಡ ನಿವಾಸದ ಬಳಿಯೇ 1 ಕೋಟಿ 90 ಲಕ್ಷ ವೆಚ್ಚದ ಚಿಕ್ಕ ನಂಜಪ್ಪ ಉದ್ಯಾನ ವನ ಕಾಮಗಾರಿ ಆಗುತ್ತಿದ್ದು, ಇದು ಕಳಪೆಯಾಗಿದೆ ಎಂದು ಸಾವ೯ಜನಿಕರೂ ದೂರು ನೀಡಿರೋ ಉದ್ದೇಶದಿಂದಲೇ ಕೋಪಗೊಂಡು ಈ ರೀತಿ ನಡೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದೇ ವೇಳೆ ಸಚಿವರು ಸಹ ಶಾಸಕ ಶ್ರೀನಿವಾಸ್ ಗೌಡ ಜೊತೆಗೂಡಿ ಅಧಿಕಾರಿಗೆ ಇನ್ನಷ್ಟು ಪ್ರಶ್ನೆ ಕೇಳಿ ಬೆವರಿಳಿಸಿದರು.