ಕೋಲಾರ: ಗ್ರೀನ್ ಜೋನ್ ಘೋಷಣೆಯಾದ ಬಳಿಕ ಜಿಲ್ಲೆಯಲ್ಲಿ ಸಡಿಲಿಕೆಯಾಗಿದ್ದ ಲಾಕ್ಡೌನ್ ವಾಪಸ್ ಪಡೆದ ಹಿನ್ನೆಲೆ ಜಿಲ್ಲೆಯಾದ್ಯಂತ ಪೊಲೀಸರು ಲಾಕ್ಡೌನ್ ಮತ್ತಷ್ಟು ಬಿಗಿಗೊಳಿಸಿದ್ದಾರೆ.
ಅಗತ್ಯ ವಸ್ತುಗಳಾದ ದಿನಸಿ, ತರಕಾರಿ, ಹಾಲು, ಔಷಧ, ಅಂಗಡಿ ಹೊರತುಪಡಿಸಿ, ಸಂಚಾರ ವ್ಯವಸ್ಥೆ ಹಾಗೂ ಅಂಗಡಿ ಮುಂಗ ಟ್ಟುಗಳನ್ನು ಪೊಲೀಸರು ಬಂದ್ ಮಾಡಿಸಿದ್ರು. ಜೊತೆಗೆ ಅನವಶ್ಯಕವಾಗಿ ರೋಡಿಗಳಿದ ಬೈಕ್ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ಪೊಲೀಸರು ಡ್ರಿಲ್ ಮಾಡಿದ್ರು.
ಇನ್ನು ಲಾಕ್ ಡೌನ್ ಸಡಿಲಿಕೆ ಬೆನ್ನಲ್ಲೇ ನಿನ್ನೆ ನಗರದಾದ್ಯಂತ ಜನಜಂಗುಳಿ ಹೆಚ್ಚಾಗಿತ್ತು. ಜೊತೆಗೆ ಜನರು ಸಾಮಾಜಿಕ ಅಂತರವಿಲ್ಲದೆ, ಮಾಸ್ಕ್ ಇಲ್ಲದೆ ಅಡ್ಡಾದಿಡ್ಡಿಯಾಗಿ ಓಡಾಡುತ್ತಿದ್ದರು. ಹೀಗಾಗಿ ನಿನ್ನೆ ರಾತ್ರಿ ಸಿಟಿ ರೌಂಡ್ಸ್ ಮಾಡಿದ ಜಿಲ್ಲಾಧಿಕಾರಿಗಳು ಲಾಕ್ಡೌನ್ ಸಡಿಲಿಕೆ ಆದೇಶವನ್ನ ಹಿಂಡಪಡೆದ ಪರಿಣಾಮ ಸುಮ್ಮನೆ ರಸ್ತೆಗಿಳಿದವರಿಗೆ ಪೊಲೀಸರು ಬಿಸಿ ಮುಟ್ಟಿಸಿದರು.