ಕೋಲಾರ: ಕೋಲಾರದ ಬಂಗಾರಪೇಟೆ ಸರ್ಕಾರಿ ಆಸ್ಪತ್ರೆಗೆ ನ್ಯಾಯಾಧೀಶರು ಧಿಡೀರ್ ಭೇಟಿ ನೀಡಿ, ಆಸ್ಪತ್ರೆಯ ಅವ್ಯವಸ್ಥೆ ಕಂಡು ವೈದ್ಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮಹಿಳೆಯೊಬ್ಬರು ಬೆಡ್ ಮೇಲೆ ನರಳುತ್ತಿದ್ದುದ್ದನ್ನು ಕಂಡು ಆಕ್ರೋಶ ವ್ಯಕ್ತಪಡಿಸಿದ ಜಿಲ್ಲಾ ನ್ಯಾಯಾಧೀಶ ನಾಗರಾಜ್ ಅವರು, ಮಹಿಳೆ ನರಳುತ್ತಿದ್ದರೂ ಕ್ಯಾರೇ ಅನ್ನದೆ ಸುಮ್ಮನಿದ್ದ ಆಸ್ಪತ್ರೆಯ ಸಿಬ್ಬಂದಿ ವಿರುದ್ಧ ಹರಿಹಾಯ್ದರು.
ಜೊತೆಗೆ ಹೊಟ್ಟೆ ನೋವಿನಿಂದ ಒದ್ದಾಡುತ್ತಿದ್ದವರ ನರಳಾಟವನ್ನು ಕಣ್ಣಾರೆ ಕಂಡು, ಪರಿಗಣಿಸದೇ ಇದ್ದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು ಚಿಕಿತ್ಸೆ ನೀಡಲು ಸೂಚನೆ ನೀಡಿದರು. ಅಲ್ಲದೆ ನ್ಯಾಯಾಧೀಶರು ಹೇಳಿದ ಬಳಿಕ ವೈದ್ಯರು ರೋಗಿಗೆ ಚಿಕಿತ್ಸೆ ಆರಂಭಿಸಿದರು.
ಜೊತೆಗೆ ಆಸ್ಪತ್ರೆಯ ಮುಖ್ಯ ವೈದ್ಯ ಡಾ. ಪುಣ್ಯಮೂರ್ತಿಗೂ ಕರೆ ಮಾಡಿ ನ್ಯಾಯಾಧೀಶರು ಪ್ರಶ್ನೆ ಮಾಡಿದ್ದು, ನೀವು ಸರಿಯಾಗಿ ಕೆಲಸ ಮಾಡುತ್ತಿಲ್ಲವಂತೆ, ಆಸ್ಪತ್ರೆಗೆ ಬರೋದಿಲ್ಲವಂತೆ ಎಂದು ಇಲ್ಲಿ ಹೇಳುತ್ತಿದ್ದಾರೆ. ಯಾವಾಗ ಬರುತ್ತೀರಿ, ಏನು ನಿಮ್ಮ ಕಾರ್ಯವೈಖರಿ ಎಂದು ಫೋನ್ ಮಾಡಿ ತರಾಟೆಗೆ ತೆಗೆದುಕೊಂಡರು.
ಇದನ್ನೂ ಓದಿ: 'ಅವರ ಒಳಉಡುಪು ಕೇಸರಿ': ಹೈಕೋರ್ಟ್ ನ್ಯಾಯಾಧೀಶರ ವಿರುದ್ಧ ಪಿಎಫ್‌ಐ ನಾಯಕನ ವಿವಾದಿತ ಹೇಳಿಕೆ