ETV Bharat / state

ರೈತನಿಗೆ, ಸೈನಿಕರಿಗೆ ಗೌರವವಿಲ್ಲದ ದೇಶ ದೇಶವೇ ಅಲ್ಲ: ರಮೇಶ್ ಕುಮಾರ್ ಆಕ್ರೋಶ - ಮಾಜಿ ಸ್ಪೀಕರ್ ರಮೇಶ್ ಕುಮಾರ್

ರೈತರನ್ನ ಕಂಟ್ರೋಲ್ ಮಾಡುವುದಕ್ಕೆ ಸೈನ್ಯವನ್ನ ಕೇಳಿದ್ದಾರೆ, ಆದರೂ ರೈತರನ್ನ ಕಂಟ್ರೋಲ್ ಮಾಡಲು ಆಗುತ್ತಿಲ್ಲ, ಯಾಕೆಂದರೆ ರೈತರು ಅಷ್ಟು ಪ್ರಬಲರಾಗಿದ್ದಾರೆ. ಇನ್ನು ರೈತರಿಗೆ ಅಪಾಯ ಬಂದಿದೆ, ಅಪಮಾನಗಳು ಆಗುತ್ತಿವೆ, ರೈತರು ಆತ್ಮಹತ್ಯೆಗಳು ಮಾಡಿಕೊಳ್ಳುತ್ತಿದ್ದರೂ, ಕಂಪನಿಯವರು ಹೇಳಿದ್ದೇ ರೈಟ್​​ ಎನ್ನುತ್ತಿವೆ ಸರ್ಕಾರಗಳು ಎಂದು ರಮೇಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

former-speaker-ramesh-kumar-reaction-delhi-protest
ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆಕ್ರೋಶ
author img

By

Published : Jan 30, 2021, 1:55 PM IST

ಕೋಲಾರ : ರೈತನಿಗೆ ಹಾಗೂ ಸೈನಿಕರಿಗೆ ಗೌರವವಿಲ್ಲದ ದೇಶ, ದೇಶವೇ ಅಲ್ಲ ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆಕ್ರೋಶ ಹೊರಹಾಕಿದ್ದಾರೆ.

ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆಕ್ರೋಶ

ತಾಲೂಕಿನ ಸುಗಟೂರು ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ, ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿರುವ ರೈತರಿಗೆ, ರಾತ್ರಿ ಸಮಯದಲ್ಲಿ ವಿದ್ಯುತ್‌ ತೆಗೆಯುವ ಮೂಲಕ, ಗನ್ ಗಳನ್ನ ತೋರಿಸುವ ಮೂಲಕ ಸರ್ಕಾರಗಳು ಬೆದರಿಕೆ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿದರು. ಅಲ್ಲದೇ ರೈತ ಮುಖಂಡ ರಾಕೇಶ್ ಟೆಕಾಯತ್ ಕಣ್ಣೀರು ಹಾಕಿಕೊಂಡಿದ್ದು, ಸತ್ತರೆ ಇಲ್ಲಿಯೇ ಪ್ರತಿಭಟನೆಯಲ್ಲಿ ಸಾಯುವೇ ಹೊರತು ಕದಲುವುದಿಲ್ಲ ಎಂದು ಹೇಳಿದ್ದಾರೆ. ಅದರೆ‌ ನಾವಿಲ್ಲಿ ಸುಖವಾಗಿದ್ದೇವೆ ಎಂದರು‌.

ನಮಗೆ ಲಜ್ಜೆ ಗಿಜ್ಜೆ ಏನು ಇಲ್ಲ, ನಾವು ಈ ರೀತಿಯ ಜನ ಎಂದ ಅವರು, ಮತ್ತೆ ಪ್ರತಿಭಟನೆಗೆ ಸುಮಾರು ಹತ್ತು ಲಕ್ಷ ಜನ ಬರಲಿದ್ದಾರೆ ಎಂದರು‌. ಜೊತೆಗೆ ರೈತರನ್ನ ಕಂಟ್ರೋಲ್ ಮಾಡುವುದಕ್ಕೆ ಸೈನ್ಯವನ್ನ ಕೇಳಿದ್ದಾರೆ, ಆದರೂ ರೈತರನ್ನ ಕಂಟ್ರೋಲ್ ಮಾಡಲು ಆಗುತ್ತಿಲ್ಲ, ಯಾಕೆಂದರೆ ರೈತರು ಅಷ್ಟು ಪ್ರಬಲರಾಗಿದ್ದಾರೆ. ಇನ್ನು ರೈತರಿಗೆ ಅಪಾಯ ಬಂದಿದೆ, ಅಪಮಾನಗಳು ಆಗುತ್ತಿವೆ, ರೈತರು ಆತ್ಮಹತ್ಯೆಗಳು ಮಾಡಿಕೊಳ್ಳುತ್ತಿದ್ದರೂ, ಕಂಪನಿಯವರು ಹೇಳಿದ್ದೇ ರೈಟ್​​ ಎನ್ನುತ್ತಿವೆ ಸರ್ಕಾರಗಳು. ನಾವೇನು ಪುಗಸಟ್ಟೆ ವ್ಯವಸಾಯ ಮಾಡುತ್ತಿದ್ದೇವಾ ಎಂದು ಪ್ರಶ್ನಿಸಿದ ಅವರು, ನಾವು ಗಂಜಲ, ಸಗಣಿ ಎತ್ತುತ್ತಿದ್ದೇವೆ, ಅದೇ ಅವರಿಗೆ ಬೆವರು ಬಂದರೆ ಪೌಡರ್ ಹಾಕಿಕೊಳ್ಳಲು ಹೋಗುತ್ತಾರೆ ಎಂದು ಸರ್ಕಾರಗಳ ವಿರುದ್ದ ಹರಿಹಾಯ್ದರು.

ಓದಿ : ದಾವಣಗೆರೆಯಲ್ಲಿ ಬಾರಕೋಲು ಚಳವಳಿ: ತೀವ್ರ ಸ್ವರೂಪ ಪಡೆದುಕೊಂಡ ಪಂಚಮಸಾಲಿ ಹೋರಾಟ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.