ETV Bharat / state

ಮುಸ್ಲಿಮರ ಸಹಕಾರದೊಂದಿಗೆ ಕೋಲಾರದ ಕ್ಲಾಕ್ ಟವರ್ ಮೇಲೆ ಹಾರಾಡಿದ ತ್ರಿವರ್ಣ ಧ್ವಜ..

ಟವರ್​ ಮೇಲ್ಬಾಗದಲ್ಲಿ ತ್ರಿವರ್ಣ ಧ್ವಜದ ಬಣ್ಣ ಬಳಿದು, ನಾಲ್ಕು ಗಂಟೆ ಸುಮಾರಿಗೆ ಹಲವು ವರ್ಷಗಳ ನಂತರ ತ್ರಿವರ್ಣ ಧ್ವಜ ಹಾರಿಸಿ ರಾಷ್ಟ್ರಗೀತೆ ಹಾಡಿ ಎಲ್ಲರೂ ಜೈ ಹಿಂದ್​ ಘೋಷಣೆ ಕೂಗಿ ಸಂಭ್ರಮಿಸಿದರು..

ಕೋಲಾರದ ಕ್ಲಾಕ್ ಟವರ್ ಮೇಲೆ ಹಾರಾಡಿದ ತ್ರಿವರ್ಣ ಧ್ವಜ

author img

By

Published : Mar 19, 2022, 7:00 PM IST

ಕೋಲಾರ : ಅದು ಸಮಯ ತಿಳಿಸುವ ಭವ್ಯ ಕಟ್ಟಡವಾದರೂ ಆ ಕಟ್ಟಡದ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಸಮಯ ಬಂದಿರಲಿಲ್ಲ. ಆದರೆ, ಸಂಸದ ಮುನಿಸ್ವಾಮಿ ಮೌನ ಪ್ರತಿಭಟನೆ ಮಾಡುವ ಮೂಲಕ ಎರಡೇ ದಿನದಲ್ಲಿ ಕ್ಲಾಕ್ ಟವರ್ ಮೇಲೆ ತ್ರಿವರ್ಣ ಧ್ವಜ ವೀರಾಜಮಾನವಾಗಿ ಹಾರಾಡುವಂತೆ ಮಾಡಿದ್ದಾರೆ.

ಕಳೆದ ಎರಡು ದಿನಗಳಿಂದ ಕೋಲಾರದ ಕ್ಲಾಕ್ ಟವರ್ ಏರಿಯಾ ಆತಂಕದ ಕೇಂದ್ರವಾಗಿ, ಬೂದಿ ಮುಚ್ಚಿದ ಕೆಂಡದಂತಿತ್ತು. ಇದಕ್ಕೆ ಕಾರಣ ಸಂಸದ ಮುನಿಸ್ವಾಮಿ ಕ್ಲಾಕ್ ಟವರ್ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಬೇಕು, ಇಲ್ಲವಾದಲ್ಲಿ ಪ್ರತಿಭಟನೆ ಮಾಡುವ ಹೇಳಿಕೆ ನೀಡಿದ್ದರು. ಕೋಮು ಸೂಕ್ಷ್ಮ ಪ್ರದೇಶದಲ್ಲಿ ಮುನಿಸ್ವಾಮಿ ಹೇಳಿಕೆ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.

ಕೋಲಾರದ ಕ್ಲಾಕ್ ಟವರ್ ಮೇಲೆ ಹಾರಾಡಿದ ತ್ರಿವರ್ಣ ಧ್ವಜ..

ಪರಿಣಾಮ ಕೂಡಲೇ ಎಚ್ಚೆತ್ತು ಕೊಂಡ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಎರಡೂ ಕೋಮಿನ ಮುಖಂಡರುಗಳ ಸಭೆ ಕರೆದು ಮನವೊಲಿಸಿ, ಮುನಿಸ್ವಾಮಿ ಅವರಿಗೆ ಪ್ರತಿಭಟನೆಗೆ ಅವಕಾಶ ನೀಡದೆ, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಇಂದು ಮುಂಜಾನೆ ಐದು ಗಂಟೆಯಿಂದಲೇ ಕ್ಲಾಕ್​ ಟವರ್​ ಏರಿಯಾದಲ್ಲಿ ನಾಕಾ ಬಂಧಿ ಹಾಕಿ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಕ್ಲಾಕ್ ಟವರ್​​ಗೆ ಬಣ್ಣ ಬಳಿಯುವ ಕೆಲಸ ಮಾಡಿದ್ದರು.

ನಂತರ ಟವರ್​ ಮೇಲ್ಭಾಗದಲ್ಲಿ ತ್ರಿವರ್ಣ ಧ್ವಜದ ಬಣ್ಣ ಬಳಿದು, ನಾಲ್ಕು ಗಂಟೆ ಸುಮಾರಿಗೆ ಹಲವು ವರ್ಷಗಳ ನಂತರ ತ್ರಿವರ್ಣ ಧ್ವಜ ಹಾರಿಸಿ ರಾಷ್ಟ್ರಗೀತೆ ಹಾಡಿ ಎಲ್ಲರೂ ಜೈ ಹಿಂದ್​ ಘೋಷಣೆ ಕೂಗಿ ಸಂಭ್ರಮಿಸಿದರು.

ಇನ್ನು ಧ್ವಜಾರೋಹಣ ನಂತರ ಮಾತನಾಡಿದ ಸಂಸದ ಮುನಿಸ್ವಾಮಿ, 74 ವರ್ಷಗಳ ಕನಸು ಇಂದು ನನಸಾಗಿದೆ. ಕೆಲವು ರಾಜಕಾರಣಿಗಳ ವೋಟ್​ ಬ್ಯಾಂಕ್​ ರಾಜಕಾರಣದಿಂದ ಅದು ಸಾಧ್ಯವಾಗಿರಲಿಲ್ಲ. ಇಂದು ಎಲ್ಲರೂ ಹಿಂದೂಸ್ಥಾನ್​ ಜಿಂದಾಬಾದ್ ಎಂದು ಕೂಗಿದ್ದಾರೆ, ಇಂಥಾದೊಂದು ಕ್ಷಣಕ್ಕೆ ಸಹಕಾರ ಕೊಟ್ಟ ಎಲ್ಲಾ ಮುಸ್ಲಿಮರು ಹಾಗೂ ಅಧಿಕಾರಿಗಳು, ಸರ್ಕಾರಕ್ಕೆ ಧನ್ಯವಾದ ಎಂದರು.

ಇದೇ ವೇಳೆ ಮಾತನಾಡಿದ ಅಂಜುಮನ್​ ಮುಖಂಡ, ನಾವೂ ಕೂಡ ಈ ದೇಶಕ್ಕಾಗಿ ಹೋರಾಟ ಮಾಡಿದವರು. ನಾವು ಇದೇ ದೇಶದವರು, ನಮಗೂ ದೇಶದ ಬಗ್ಗೆ ಅಪಾರ ಗೌರವವಿದೆ ಎಂದರು. ಇನ್ನು ಈ ವೇಳೆ ಮಾತನಾಡಿದ ಎಸ್ಪಿ ದೇವರಾಜ್, ಇನ್ನು ಒಂದು ವಾರಗಳ ಕಾಲ ಕೋಲಾರ ನಗರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ ಎಂದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.