ETV Bharat / state

ಗಾರ್ಡನ್ ಸಿಟಿಯಿಂದ ಗೋಲ್ಡನ್​ ಸಿಟಿಗೆ ಹೆಚ್ಚಿದ ಸೋಂಕಿನ ಆತಂಕ..

ಬೆಂಗಳೂರಿನಲ್ಲಿ ಪ್ರತಿದಿನ ಕೊರೊನಾ ಸೋಂಕಿತರ ಸಂಖ್ಯೆ 2 ಸಾವಿರದಷ್ಟು ದಾಟುತ್ತಿದೆ. ಈಗಾಗಲೇ ಕೋಲಾರದ ಬಹುತೇಕ ಏರಿಯಾಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿದೆ, ಇದರ ಜೊತೆಗೆ ಸಾವಿನ ಸಂಖ್ಯೆ ಸಹ ಏರುತ್ತಿದೆ. ಜಿಲ್ಲೆಯಲ್ಲಿ 16 ಲಕ್ಷದಷ್ಟು ಜನಸಂಖ್ಯೆ ಇದೆ..

Kolar
ಕೋಲಾರ
author img

By

Published : Jul 13, 2020, 8:30 PM IST

ಕೋಲಾರ: ಕೋಲಾರದಲ್ಲಿ ಈಗಾಗಲೇ ಶೇ.30ರಷ್ಟು ಬೆಂಗಳೂರಿನಿಂದ ಬಂದವರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಬೆಂಗಳೂರಿಗೆ ಹೊಂದಿಕೊಂಡಿರುವ ಕೋಲಾರಕ್ಕೆ ಕೊರೊನಾ ಗಂಡಾಂತರ ಎದುರಾಗಿದೆ.

ಕೋಲಾರ ಜಿಲ್ಲಾಡಳಿತಕ್ಕೆ ತಲೆನೋವಾದ ಕೇಸ್​ಗಳು

ಮೊದಲಿಗೆ ಹೊರ ರಾಜ್ಯದಿಂದ ಬಂದವರಲ್ಲಿ ಸೋಂಕು ಹೆಚ್ಚಾಗುತ್ತಿತ್ತು. ಆದರೆ, ಈಗ ಅಂತರ ಜಿಲ್ಲೆ ಅದರಲ್ಲೂ ಬೆಂಗಳೂರಿಗೆ ಹೋಗಿ ಬಂದವರಲ್ಲಿ ದಿನದಿಂದ ದಿನಕ್ಕೆ ಸೋಂಕು ಪತ್ತೆಯಾಗುತ್ತಿದೆ. ಕೋಲಾರ ಜಿಲ್ಲೆಯಲ್ಲಿ ಈಗ ಪ್ರತಿ ದಿನ ಹತ್ತಕ್ಕೂ ಹೆಚ್ಚು ಕೇಸ್‌ ಪತ್ತೆಯಾಗುತ್ತಿರುವುದು ಜಿಲ್ಲಾಡಳಿತಕ್ಕೆ ಮತ್ತು ಆರೋಗ್ಯ ಇಲಾಖೆಗೆ ತಲೆನೋವಾಗಿದೆ.

ಸಂಬಂಧಿಕರು, ಉದ್ಯೋಗ, ವಿದ್ಯಾಭ್ಯಾಸ ಹಾಗೂ ವ್ಯಾಪಾರ ಹೀಗೆ ಬೆಂಗಳೂರನ್ನೇ ನಂಬಿದ್ದ ಕೋಲಾರದ ಸಾವಿರಾರು ಜನ ಲಾಕ್​ಡೌನ್​ನಿಂದ ಕಂಗಾಲಾಗಿದ್ದಾರೆ. ಆದರೆ, ಅನಿವಾರ್ಯ ಕಾರಣಗಳಿಗೆ ಅಂದ್ರೆ ಸರ್ಕಾರಿ ಉದ್ಯೋಗ, ವ್ಯಾಪಾರ, ದುಡಿಮೆಗಾಗಿ ಪ್ರತಿ ದಿನ ನೂರಾರು ಜನ ಇಂದಿಗೂ ಕೆಲಸಕ್ಕಾಗಿ ಹೋಗಿ ಬರುತ್ತಿದ್ದಾರೆ. ಇದ್ರಿಂದ ಕೊರೊನಾ ಸೋಂಕಿನ ಪ್ರಕರಣ ದಿನೇದಿನೆ ಹೆಚ್ಚುತ್ತಿವೆ. ಇನ್ನು, ಬಹುತೇಕ ಪ್ರಕರಣ ಟ್ರಾವಲ್ ಹಿಸ್ಟರಿ ಬೆಂಗಳೂರಿಗೆ ಹೋಗಿ ಬಂದವರಲ್ಲಿದೆ ಮತ್ತು ಬೆಂಗಳೂರಿನಿಂದ ಹೆಚ್ಚಾಗಿ ಬರುತ್ತಿರುವುದು ಜನರಲ್ಲಿ ಆತಂಕಕ್ಕೀಡು ಮಾಡಿದೆ. ಜಿಲ್ಲೆಯಲ್ಲಿ ಈವರೆಗೂ 20ಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆಯಾಗಿದೆ.

ಬೆಂಗಳೂರಿನಲ್ಲಿ ಪ್ರತಿದಿನ ಕೊರೊನಾ ಸೋಂಕಿತರ ಸಂಖ್ಯೆ 2 ಸಾವಿರದಷ್ಟು ದಾಟುತ್ತಿದೆ. ಈಗಾಗಲೇ ಕೋಲಾರದ ಬಹುತೇಕ ಏರಿಯಾಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿದೆ, ಇದರ ಜೊತೆಗೆ ಸಾವಿನ ಸಂಖ್ಯೆ ಸಹ ಏರುತ್ತಿದೆ. ಜಿಲ್ಲೆಯಲ್ಲಿ 16 ಲಕ್ಷದಷ್ಟು ಜನಸಂಖ್ಯೆ ಇದೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಇಷ್ಟು ಜನಸಂಖ್ಯೆಗೆ ಶೇ 0.11 ಜನ್ರಲ್ಲಿ ಸೋಂಕು ಕಾಣಿಸಿಕೊಳ್ಳಬಹುದು.

ಆದರೆ,1892 ಜನರಲ್ಲಿ ಸೋಂಕು ಕಾಣಿಸಿಕೊಳ್ಳಬಹುದೆಂದು ಅಂದಾಜಿಸಲಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಕೇವಲ 200 ಬೆಡ್‌ಗಳು ಮಾತ್ರ ಇವೆ. ಮುಂದೆ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಯಾವ ರೀತಿ ಸಮಸ್ಯೆ ಎದುರಾಗಬಹುದು ಗೊತ್ತಿಲ್ಲ. ಹಾಗಾಗಿ ಜಿಲ್ಲೆಯ ಗಡಿಯಲ್ಲಿ ಚೆಕ್​ಪೋಸ್ಟ್ ಹೆಚ್ಚು ಮಾಡಿ, ಹೊರ ಜಿಲ್ಲೆಯಿಂದ ಬಂದವರನ್ನ ಪರೀಕ್ಷಿಸಿ ಒಳಗೆ ಬಿಟ್ಟುಕೊಳ್ಳುವುದು ಉತ್ತಮ ಅನ್ನೋದು ಜನರ ಮಾತು.

ಈವರೆಗೂ 276 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. 4 ಜನ ಮೃತಪಟ್ಟಿದ್ದಾರೆ. ಇದು ಜಿಲ್ಲೆಯ ಜನರಲ್ಲಿ ನಡುಕ ಉಂಟು ಮಾಡಿದೆ. ಗಾರ್ಡನ್ ಸಿಟಿಯಿಂದ ಗೋಲ್ಡನ್​ ಸಿಟಿ ಕೋಲಾರಕ್ಕೆ ಸೋಂಕು ಹರಡುವ ಆತಂಕ ಹೆಚ್ಚಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.