ETV Bharat / state

ಮಂಜಿನ‌ ನಗರಿಯಲ್ಲಿ ಯುಗಾದಿ ಸಂಭ್ರಮ - Ugadi celebration in madikeri

ಮಡಿಕೇರಿಯಲ್ಲಿ ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಮುಂಜಾನೆಯಿಂದಲೇ ಭಕ್ತರು ದೇವಸ್ಥಾನಗಳಿಗೆ ಆಗಮಿಸಿ ದೇವರ ಕೃಪೆಗೆ ಪಾತ್ರರಾದರು. ದೇಗುಲಗಳಲ್ಲಿ ಸಹ ವಿವಿಧ ಬಗೆಯ ಪೂಜೆ, ಹೋಮ-ಹವನಗಳನ್ನು ನಡೆಸಲಾಯಿತು.

ugadi
ಮಡಿಕೇರಿ
author img

By

Published : Apr 3, 2022, 9:43 AM IST

ಮಡಿಕೇರಿ/ಕೊಡಗು: ಭಾರತೀಯ ಸಂಸ್ಕೃತಿಯಲ್ಲಿ ಯುಗಾದಿ ಹಬ್ಬಕ್ಕೆ ತನ್ನದೇ ಆದ ಮಹತ್ವವಿದೆ. ಮಂಜಿನ‌ ನಗರಿ ಮಡಿಕೇರಿಯಲ್ಲಿ ಯುಗಾದಿ ಸಂಭ್ರಮ ಮನೆಮಾಡಿತ್ತು. ಜಿಲ್ಲೆಯಲ್ಲಿರುವ ದೇವಾಲಯಗಳಲ್ಲಿ ನಿನ್ನೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು‌. ಭಕ್ತರು ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸುವ ಜೊತೆಗೆ ಬೇವು-ಬೆಲ್ಲದ ಸವಿದು ಸಂತಸ ವ್ಯಕ್ತಪಡಿಸಿದರು.

ಮಡಿಕೇರಿಯಲ್ಲಿ ಯುಗಾದಿ ಸಂಭ್ರಮ

ಯುಗಾದಿ‌ ಹಬ್ಬದ ಹಿನ್ನೆಲೆ ಮಡಿಕೇರಿಯ ಪ್ರಸಿದ್ಧ ದೇವಾಲಯಗಳದ ಓಂಕಾರೇಶ್ವರ, ಆಂಜನೇಯ , ವಿಜಯ ವಿನಾಯಕ ದೇವಸ್ಥಾನ ಸೇರಿದಂತೆ ವಿವಿಧ ದೇಗುಲಗಳಲ್ಲಿ ಬೆಳಗ್ಗೆಯಿಂದಲೂ ಅನೇಕ ಬಗೆಯ ಪೂಜೆ, ಹೋಮ-ಹವನಗಳನ್ನು ನಡೆಸಲಾಯಿತು. ಮುಂಜಾನೆಯಿಂದಲೇ ಭಕ್ತರು ದೇವಸ್ಥಾನಗಳಿಗೆ ಆಗಮಿಸಿ ದೇವರ ಕೃಪೆಗೆ ಪಾತ್ರರಾದರು.

ನಗರದ ವಿಜಯ ವಿನಾಯಕ ದೇವಾಲಯದಲ್ಲಿ ಭಕ್ತರಿಗೆ ಪ್ರಸಾದ ಜೊತೆ ಬೇವು-ಬೆಲ್ಲ ವಿತರಿಸಲಾಯಿತು. ಕಳೆದ ಹಲವು ತಿಂಗಳಿಂದ ಕೊರೊನಾ ಹಿನ್ನೆಲೆ‌ ಕೆಲ ನಿರ್ಬಂಧಗಳನ್ನ ವಿಧಿಸಲಾಗಿತ್ತು. ಇದೀಗ ಕೋವಿಡ್ ನಿಯಂತ್ರಣಕ್ಕೆ ಬಂದಿರೋ ಕಾರಣ ದೇವಸ್ಥಾನಗಳಿಗೆ ಹೆಚ್ಚಿನ ಭಕ್ತಾಧಿಗಳು ಕುಟುಂಬ ಸಮೇತರಾಗಿ ಆಗಮಿಸಿ ದೇವರ ದರ್ಶನ ಪಡೆದರು.

ಇದನ್ನೂ ಓದಿ; ಮಿಂಚಿನ ಸರಳುಗಳಂತೆ ಕಾಣಿಸಿಕೊಂಡ ಉಲ್ಕಾಪಾತ: ವಿಡಿಯೋ ವೈರಲ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.