ETV Bharat / state

ಕೊಡಗಿನಲ್ಲಿ ಹುಲಿ ಸೆರೆಗೆ ಗ್ರಾಮಸ್ಥರ ಪಟ್ಟು; ಪತ್ತೆಯಾಗದ ಹೆಜ್ಜೆ ಗುರುತು - ಮಡಿಕೇರಿಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ

ಕಳೆದ ನಾಲ್ಕು ದಿನಗಳ ಹಿಂದೆ ಕಾರ್ಮಿಕನನ್ನು ಕೊಂದಿದ್ದ ಹುಲಿ ಸೆರೆಗೆ ಕಾರ್ಯಾಚರಣೆ ತೀವ್ರಗೊಂಡಿದ್ದು, ಹುಲಿಯನ್ನು ಹಿಡಿದೇ ತೆರಳಬೇಕು ಎಂದು ಕೊಡಗಿನ ರುದ್ರಗುಪ್ಪೆ ಗ್ರಾಮಸ್ಥರು ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ಒತ್ತಾಯಿಸಿದ್ದಾರೆ.

tiger-operation-in-madikeri-unsuccessful-villagers-pressure-to-trap-tiger
ನರಹಂತಕ ಹುಲಿಸೆರೆಗಾಗಿ ಕಾರ್ಯಾಚರಣೆ ಪತ್ತೆಯಾಗದ ಹೆಜ್ಜೆ ಗುರುತು: ಹುಲಿ ಸೆರೆಗೆ ಗ್ರಾಮಸ್ಥರ ಪಟ್ಟು
author img

By

Published : Apr 5, 2022, 11:19 AM IST

ಕೊಡಗು: ಜಿಲ್ಲೆಯಲ್ಲಿ ಹುಲಿ ಸೆರೆಗಾಗಿ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ. ಅರಣ್ಯ ಇಲಾಖೆಯ ತಂಡಕ್ಕೆ ಸಾಕಾನೆಗಳು, ಶಾರ್ಪ್ ಶೂಟರ್​ಗಳು ಸಾಥ್ ನೀಡುತ್ತಿದ್ದಾರೆ. ಸುತ್ತಮುತ್ತಲಿನ ಜನತೆಗೆ ಎಚ್ಚರಿಕೆಯಿಂದಿರಲು ಸೂಚನೆ ನೀಡಲಾಗಿದೆ.

ವಿರಾಜಪೇಟೆ ತಾಲೂಕಿನ ರುದ್ರಗುಪ್ಪೆ ಗ್ರಾಮದಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ಕಾರ್ಮಿಕ ಗಣೇಶ್ ಎಂಬಾತನನ್ನು ಹುಲಿ ಕೊಂದು ಹಾಕಿತ್ತು. ಅಂದಿನಿಂದಲೇ ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ. ಕಳೆದೆರಡು ದಿನಗಳಿಂದ ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಲಾಗಿದೆ.

ಒಟ್ಟು 150 ಅರಣ್ಯ ಇಲಾಖೆಯ ಸಿಬ್ಬಂದಿ ಜೊತೆಯಲ್ಲಿ ವೈದ್ಯರು ಹಾಗೂ ಇಬ್ಬರು ಶಾರ್ಪ್ ಶೂಟರ್​ಗಳು ಬೀಡುಬಿಟ್ಟಿದ್ದಾರೆ. ಹುಲಿಯ ಚಲನವಲನ ಅರಿಯಲು ಅಲ್ಲಲ್ಲಿ ಸುಮಾರು 35 ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಈ ಮೂಲಕ ರುದ್ರಗುಪ್ಪೆ ಗ್ರಾಮದ ಸುಮಾರು 10 ಕಿಲೋಮೀಟರ್​ ವ್ಯಾಪ್ತಿಯಲ್ಲಿ ಕೂಂಬಿಂಗ್ ನಡೆಸಲಾಗುತ್ತಿದೆ.

ಗ್ರಾಮಗಳ ಜನತೆಗೆ ಅಪಾಯ ಆಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಮಾಹಿತಿ ವಿನಿಮಯಕ್ಕಾಗಿ ವಾಟ್ಸಪ್ ಗ್ರೂಪ್​ಗಳನ್ನು ಮಾಡಿಕೊಳ್ಳಲಾಗಿದೆ. ಮತ್ತೊಂದು ಜೀವಕ್ಕೆ ತೊಂದರೆಯಾಗುವ ಮೊದಲು ಹುಲಿಯನ್ನು ಹಿಡಿಯಲು ಅರಣ್ಯ ಇಲಾಖೆ ಹರಸಾಹಸಪಡುತ್ತಿದೆ.

ಅರಣ್ಯ ಇಲಾಖೆ ಅಳವಡಿಸಿದ ಕ್ಯಾಮರಾಗಳಲ್ಲಿ ಹುಲಿಯ ಚಲನವಲನ ಕಂಡುಬಂದಿದೆ. ಆದ್ದರಿಂದ ಸುತ್ತಮುತ್ತಲಿನ ಗ್ರಾಮದಲ್ಲಿ ಹುಲಿ ಇರುವುದು ಖಚಿತವಾಗಿದೆ. ಹುಲಿ ದಾಳಿಗೆ ಒಬ್ಬರು ಬಲಿಯಾಗಿರುವ ಹಿನ್ನೆಲೆಯಲ್ಲಿ ಕಾರ್ಮಿಕರು ಭಯಭೀತರಾಗಿದ್ದಾರೆ.

ಯಾರೊಬ್ಬರೂ ತೋಟದ ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಹುಲಿ ಹಾಗೂ ಆನೆಗಳ ಹಾವಳಿಯಿಂದ ನಮಗೆ ನೆಮ್ಮದಿಯಿಂದ ಕೆಲಸ ಮಾಡಲು ಆಗುತ್ತಿಲ್ಲ. ಕೊಡಗು ಜಿಲ್ಲೆಯಲ್ಲಿ ನಮ್ಮನ್ನು ಹುಲಿಗಳು ಬದುಕಲು ಬಿಡುತ್ತಿಲ್ಲ. ತುಂಬಾ ಸಮಸ್ಯೆಯಾಗುತ್ತಿದ್ದು ಅರಣ್ಯ ಇಲಾಖೆ ಇದುವರೆಗೂ ಯಾವುದೇ ಶಾಶ್ವತ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಕಾರ್ಮಿಕರು ಆತಂಕ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ ಬೋಟ್ ಭಟ್ಕಳ ಬಂದರು ಸಮೀಪ ಮುಳುಗಡೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.