ಕೊಡಗು: ದೇಶದ 130 ಕೋಟಿ ಜನತೆಯ ಆರೋಗ್ಯ ಸುಧಾರಣೆಗೆ ವೈದ್ಯರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಶ್ರಮವನ್ನು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಶ್ಲಾಘಿಸಿದ್ದಾರೆ.
ವಿಶ್ವ ಆರೋಗ್ಯ ದಿನಾಚರಣೆ ಪ್ರಯುಕ್ತ ನಗರದ ಜಿಲ್ಲಾಸ್ಪತ್ರೆಯಲ್ಲಿ ದಾದಿಯರು ಹಾಗೂ ವೈದ್ಯರ ಸೇವೆಯ ಸ್ಮರಣಾರ್ಥ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂದು ವಿಶ್ವ ಆರೋಗ್ಯ ದಿನಾಚರಣೆ. ಆದ್ರೆ, ಪ್ರಸ್ತುತ ವಿಶ್ವದಾದ್ಯಂತ ಈ ಕೊರೊನಾ ಮಹಾಮಾರಿಯ ಹಿನ್ನೆಲೆಯಲ್ಲಿ ಎಲ್ಲರೂ ಸಂಕಷ್ಟದಲ್ಲಿ ಇದ್ದಾರೆ. ದೇಶದ ಗಡಿಗಳ ರಕ್ಷಣೆಯನ್ನು ಯೋಧರು ಮಾಡುತ್ತಿದ್ದಾರೆ.
ಅದರಂತೆ ಕೊರೊನಾ ತಡೆಗಟ್ಟುವಲ್ಲಿ ವೈದ್ಯರು ಮತ್ತು ದಾದಿಯರ ಸೇವೆ ಅವಿಸ್ಮರಣೀಯವಾಗಿದೆ. ಸಾಂಕ್ರಾಮಿಕ ಕೊರೊನಾವನ್ನು ತಡೆಗಟ್ಟುವಲ್ಲಿ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಮತ್ತು ಅಧಿಕಾರಿಗಳು ಸಂಘಟಿತ ಹೋರಾಟ ಮಾಡಿದ್ದಾರೆ ಎಂದರು.