ಕೊಡಗು(ಭಾಗಮಂಡಲ): ಬ್ರಹ್ಮಗಿರಿ ಬೆಟ್ಟಸಾಲು ಕುಸಿದ ದುರಂತದಲ್ಲಿ ಮೃತಪಟ್ಟ ಪ್ರಧಾನ ಅರ್ಚಕರಾದ ನಾರಾಯಣ ಆಚಾರ್ ಅವರ ಅಂತ್ಯ ಸಂಸ್ಕಾರವನ್ನು ಬ್ರಾಹ್ಮಣ ಸಂಪ್ರದಾಯದಂತೆ ಮಾಡಲಾಯಿತು.
ಭಾಗಮಂಡಲ ಸಮೀಪದ ಭಟ್ಟಕಾಡು ಬಳಿ ಸ್ಥಳೀಯರ ನೆರವಿನೊಂದಿಗೆ ನಾರಾಯಣ ಆಚಾರ್ ಚಿತೆಗೆ ಅಗ್ನಿ ಸ್ಪರ್ಶಿಸುವ ಮೂಲಕ ಶಾಸ್ತ್ರೋಕ್ತವಾಗಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಮೃತ ನಾರಾಯಣ ಆಚಾರ್ ಅವರ ಇಬ್ಬರು ಮಕ್ಕಳಾದ ನಮಿತಾ, ಶಾರದ, ಕುಟುಂಬಸ್ಥರು ಹಾಗೂ ಸ್ಥಳೀಯರ ಸಮ್ಮುಖದಲ್ಲಿ ಕಾರ್ಯವನ್ನು ನೆರವೇರಿಸಲಾಯಿತು.