ಕೊಡಗು: ಇಂದು ಜಿಲ್ಲೆಯಲ್ಲಿ ಹೊಸದಾಗಿ 10 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಇದುವರೆಗೆ ಒಟ್ಟು ಸೋಂಕಿತರ ಸಂಖ್ಯೆ 274 ಕ್ಕೇ ಏರಿದೆ.
ಸೋಮವಾರಪೇಟೆ ತಾಲೂಕಿನಲ್ಲಿ 7 ಸೋಂಕಿತರು, ವಿರಾಜಪೇಟೆ 2 ಹಾಗು ಮಡಿಕೇರಿ ತಾಲೂಕಿನಲ್ಲಿ 1 ಸೋಂಕಿತ ಪ್ರಕರಣಗಳು ವರದಿಯಾಗಿವೆ.
ಸೋಮವಾರಪೇಟೆ ತಾಲೂಕಿನ ಕಕ್ಕೆಹೊಳೆಯ ಸೋಂಕಿತನಿಂದ ಇಬ್ಬರಿಗೆ ಸೋಂಕು ಹರಡಿದೆ. ತೊರೆನೂರಿನ ಸೋಂಕಿತನಿಂದ ಮೂವರಿಗೆ ಹರಡಿದ್ದರೆ ಬೆಂಗಳೂರಿನಿಂದ ಹಿಂದಿರುಗಿದ್ದ ಇಬ್ಬರಿಗೆ ಕೊರೊನಾ ದೃಢಪಟ್ಟಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚುತ್ತಿದೆ.