ಪೊನ್ನಂಪೇಟೆ (ಕೊಡಗು): ನಕ್ಷತ್ರ ಆಮೆ ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಘಟನೆ ಪೊನ್ನಂಪೇಟೆ ತಾಲೂಕಿನ ಗೋಣಿಕೊಪ್ಪಲು ಪಟ್ಟಣದಲ್ಲಿ ನಡೆದಿದೆ.
ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳ ಮೂಲದ ಲಕ್ಷ್ಮಣ, ರಾಮ ಪೋಗು ಲಕ್ಷ್ಮೀನಾರಾಯಣ, ನಾಗೇಶ್ ಹಾಗೂ ತೆಲಗು ತಿಮ್ಮಪ್ಪ ಆಮೆ ಮಾರಾಟಕ್ಕೆ ಯತ್ನಿಸಿ ಪೊಲೀಸರ ಅತಿಥಿಗಳಾದ ಆರೋಪಿಗಳು.
ಬಂಧಿತರಿಂದ 1.50 ಲಕ್ಷ ಮೌಲ್ಯದ ನಕ್ಷತ್ರ ಆಮೆ ಮತ್ತು ಮಹಿಂದ್ರಾ ವೆರಿಟೊ ಕಾರನ್ನು ಮಡಿಕೇರಿ ಸಿಐಡಿ ಪೊಲೀಸ್ ಅರಣ್ಯ ಘಟಕದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.