ETV Bharat / state

ಜಿಲ್ಲಾಡಳಿತ ನಿಯಮ ಉಲ್ಲಂಘಿಸಿ ಪ್ರವಾಸಿಗರಿಗೆ ಆಶ್ರಯ ನೀಡಿದ್ದ ಹೋಮ್​ ಸ್ಟೇಗಳ ಮೇಲೆ ದಾಳಿ

ಮಡಿಕೇರಿ‌ ಸಮೀಪದ ಕಡಗಡಾಳುವಿನಲ್ಲಿರುವ ಜೋಸ್ಟಲ್ ಹೋಮ್ಸ್ ಕೂರ್ಗ್ ಹೆಸರಿನ ಹೋಮ್​ ಸ್ಟೇ, ಸುಂಟಿಕೊಪ್ಪ ಸಮೀಪದ ಉಪ್ಪುತೋಡುವಿನಲ್ಲಿರುವ ಕೂರ್ಗ್ ಕಾಫಿ ಫ್ಲವರ್ ರೆಸಾರ್ಟ್​ನಲ್ಲಿ ಜಿಲ್ಲಾಡಳಿತದ ನಿಯಮ ಉಲ್ಲಂಘಿಸಿ ಪ್ರವಾಸಿಗರಿಗೆ ಆಶ್ರಯ ನೀಡಲಾಗಿತ್ತು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ..

Kodagu
ನಿಯಮ ಉಲ್ಲಂಘಿಸಿ ಪ್ರವಾಸಿಗರಿಗೆ ಆಶ್ರಯ ನೀಡಿದ್ದ ಹೋಮ್​ ಸ್ಟೇಗಳ ಮೇಲೆ ದಾಳಿ
author img

By

Published : Jul 2, 2021, 7:45 AM IST

ಕೊಡಗು : ಜಿಲ್ಲೆಯಲ್ಲಿ ಹೋಮ್​ ಸ್ಟೇ ಮೇಲಿನ ದಾಳಿ ಮುಂದುವರೆದಿದೆ. ಪೊಲೀಸರು ಮತ್ತು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು, ಜಿಲ್ಲಾಡಳಿತದ ನಿಯಮ ಉಲ್ಲಂಘಿಸಿ ಪ್ರವಾಸಿಗರಿಗೆ ಆಶ್ರಯ ನೀಡಿದ್ದ ಜಿಲ್ಲೆಯ ವಿವಿಧ ಹೋಮ್​ ಸ್ಟೇಗಳಿಗೆ ಬೀಗ ಹಾಕಿ ದಂಡ ವಿಧಿಸಿದರು.

ನಿಯಮ ಉಲ್ಲಂಘಿಸಿ ಪ್ರವಾಸಿಗರಿಗೆ ಆಶ್ರಯ ನೀಡಿದ್ದ ಹೋಮ್​ ಸ್ಟೇಗಳ ಮೇಲೆ ದಾಳಿ

ಮಡಿಕೇರಿ‌ ಸಮೀಪದ ಕಡಗಡಾಳುವಿನಲ್ಲಿರುವ ಜೋಸ್ಟಲ್ ಹೋಮ್ಸ್ ಕೂರ್ಗ್ ಹೆಸರಿನ ಹೋಮ್​ ಸ್ಟೇ, ಸುಂಟಿಕೊಪ್ಪ ಸಮೀಪದ ಏಳನೇ ಹೊಸಕೋಟೆಯ ತೊಂಡೂರು ರಸ್ತೆಯಲ್ಲಿರುವ ಉಪ್ಪುತೋಡುವಿನಲ್ಲಿರುವ ಕೂರ್ಗ್ ಕಾಫಿ ಫ್ಲವರ್ ರೆಸಾರ್ಟ್​ನಲ್ಲಿ ಜಿಲ್ಲಾಡಳಿತದ ನಿಯಮ ಉಲ್ಲಂಘಿಸಿ ಪ್ರವಾಸಿಗರಿಗೆ ಆಶ್ರಯ ನೀಡಲಾಗಿತ್ತು.

ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಲಾಗಿದೆ. ಜೊತೆಗೆ ಕೋವಿಡ್ ನಿಯಮ‌ ಉಲ್ಲಂಘಿಸಿ ಗೂಡ್ಸ್ ವಾಹನ 30ಕ್ಕೂ ಹೆಚ್ಚು ಜನರನ್ನ ಸಾಗಾಟ ವಾಹನವನ್ನು ಪೊಲೀಸರು ಜಪ್ತಿಮಾಡಿದ್ದಾರೆ.

ಕೊಡಗಿನಲ್ಲಿ ಕೊರೊನಾ ಸೋಂಕು ಹೆಚ್ಚಾಗಿರುವುದರಿಂದ ಹೊರ ಜಿಲ್ಲೆ ಮತ್ತು ಹೊರ ರಾಜ್ಯದ ಪ್ರವಾಸಿಗರಿಗೆ ನಿರ್ಬಂಧ ಹೇರಿ ಕೊಡಗಿನ ಎಲ್ಲ ಹೋಮ್​ ಸ್ಟೇ, ಲಾಡ್ಜ್ ಮತ್ತು ರೆಸಾರ್ಟ್‌ಗಳನ್ನು ತೆರೆಯದಂತೆ ಜಿಲ್ಲಾಡಳಿತ ಸೂಚಿಸಿತ್ತು. ಆದರೆ, ಈ ಆದೇಶವನ್ನು ಉಲ್ಲಂಘಿಸಿ ರೆಸಾರ್ಟ್ ಮಾಲೀಕರು ಪ್ರವಾಸಿಗರಿಗೆ ಆಶ್ರಯ ನೀಡಿದ್ದರಿಂದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಬೀದಿನಾಯಿಗಳಿಗೆ ಆಹಾರ ಹಕ್ಕಿದೆ, ಅವುಗಳನ್ನ ಪೋಷಿಸುವ ಹಕ್ಕೂ ಜನರಿಗಿದೆ.. ದೆಹಲಿ ಕೋರ್ಟ್​ ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.