ಕೊಡಗು: ಜಿಲ್ಲೆಯಲ್ಲಿ ಇತ್ತೀಚೆಗೆ ಕೊರೊನಾ ಮಹಾಮಾರಿ ಮಿತಿ ಮೀರುತ್ತಿರುವುದರಿಂದ ದಸರಾ ಕರಗ ಉತ್ಸವದಲ್ಲಿ ಜನರು ಭಾಗವಹಿಸದಂತೆ ದಸರಾ ದಶ ಮಂಟಪ ಸಮಿತಿ ಮನವಿ ಮಾಡಿದೆ.
ಇದೇ 17 ರಂದು ಕರಗ ಉತ್ಸವದ ಮೂಲಕ ದಸರಾಕ್ಕೆ ಚಾಲನೆ ದೊರೆಯಲಿದೆ. ಈ ಹಿನ್ನೆಲೆ ಕರಗ ಹೊರುವ ಸಿಬ್ಬಂದಿ ಮತ್ತು ದಸರಾದಲ್ಲಿ ಭಾಗವಹಿಸುವ ದೇವಾಲಯದ ಸಿಬ್ಬಂದಿಗೆ ಮಡಿಕೇರಿಯಲ್ಲಿ ಕೋವಿಡ್ ಟೆಸ್ಟ್ ಮಾಡಿಸಲಾಯಿತು. ಅದ್ಧೂರಿ ದಸರಾ ಆಚರಣೆಗೆ ಜಿಲ್ಲಾಡಳಿತ ಕೂಡ ಅವಕಾಶ ನೀಡಿಲ್ಲ. ಹೀಗಾಗಿ ಜನರು ಕರಗ ಉತ್ಸವದ ಸಂದರ್ಭದಲ್ಲಿ ಮನೆಯಲ್ಲಿಯೇ ಇದ್ದು, ದೇವರಲ್ಲಿ ಪ್ರಾರ್ಥನೆ ಸಲ್ಲಿಸುವಂತೆ ದಸರಾ ಸಮಿತಿ ಮನವಿ ಮಾಡಿದೆ.
ಇನ್ನೂ ಅ. 17 ರಂದು ಪಂಪಿನ ಕೆರೆ ಬಳಿ ನಾಲ್ಕು ಶಕ್ತಿ ದೇವತೆಗಳಿಗೆ ಪೂಜೆ ಸಲ್ಲಿಸಲಾಗುವುದು. ನಂತರ ಆಯಾ ದೇವಾಲಯಗಳಿಗೆ ಕರಗಗಳು ತೆರಳಲಿವೆ. ಭಕ್ತರು ದೇವಾಲಯಗಳಿಗೆ ಹೋಗಿ ಪೂಜೆ ಸಲ್ಲಿಸಬಹುದು ಅಷ್ಟೆ. ಇನ್ನು 26 ರಂದು ದಸರಾದಲ್ಲಿ ಕೂಡ ದಶ ಮಂಟಪಗಳು ಹೊರಡಲಿದ್ದು, ಆ ವೇಳೆಯೂ ಜನರ ಭಾಗವಹಿಸುವಿಕೆಗೆ ಅವಕಾಶ ಇಲ್ಲವೆಂದು ದಸರಾ ದಶ ಮಂಟಪ ಮುಖಂಡರು ಹೇಳಿದ್ದಾರೆ.