ETV Bharat / state

ಮಡಿಕೇರಿ: ಕೆಸರು ಗದ್ದೆಯಲ್ಲಿ ಗ್ರಾಮೀಣ ಕ್ರೀಡೆಗಳ ಝಲಕ್

ಬೇಕೋಟು ಮಕ್ಕ ಎಂಬ ತಂಡದ ವತಿಯಿಂದ ಮಡಿಕೇರಿ ತಾಲೂಕಿನ ಹಾಕತ್ತೂರಿನಲ್ಲಿ ವರ್ಷದ ಮೊದಲ ಕೆಸರು ಗದ್ದೆ ಕ್ರೀಡಾಕೂಟ ಆಯೋಜಿಸಲಾಗಿತ್ತು. ಈ ಕ್ರೀಡಾಕೂಟದಲ್ಲಿ ಪುರುಷರು, ಮಹಿಳೆಯರು ಹಾಗೂ ಮಕ್ಕಳು ಕೆಸರು ಗದ್ದೆಯಲ್ಲಿ ಆಟವಾಡಿ ಸಖತ್​ ಎಂಜಾಯ್​ ಮಾಡಿದ್ರು.

Madikeri
ಕೆಸರು ಗದ್ದೆ ಕ್ರೀಡಾಕೂಟ
author img

By

Published : Jul 27, 2021, 8:57 AM IST

Updated : Jul 27, 2021, 4:52 PM IST

ಮಡಿಕೇರಿ (ಕೊಡಗು): ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿ ಕಾಣಸಿಗುತ್ತಿದ್ದ ಅದೆಷ್ಟೋ ಗ್ರಾಮೀಣ ಕ್ರೀಡೆಗಳು ಕಣ್ಮರೆಯಾಗುತ್ತಿವೆ. ವಿಶೇಷವಾಗಿ ಮಲೆನಾಡು ಭಾಗದಲ್ಲಿ ಮಳೆಗಾಲ ಆರಂಭದ ಸಮಯದಲ್ಲಿ ಆಚರಿಸಿಕೊಂಡು ಬರುತ್ತಿದ್ದ ಕ್ರೀಡೆಗಳು ಇಲ್ಲದಂತಾಗುತ್ತಿವೆ. ಆದರೆ, ಮಡಿಕೇರಿಯ ಬೇಕೋಟು ಮಕ್ಕ ಎಂಬ ತಂಡ ಇಂತಹ ಗ್ರಾಮೀಣ ಕಲೆಗಳನ್ನ ಉಳಿಸುವ ಪ್ರಯತ್ನ ಮಾಡಿದೆ.

ಒಂದು ಕಡೆ ಬಿಟ್ಟು ಬಿಟ್ಟು ಸುರಿಯುತ್ತಿರುವ ಜಿಟಿ ಜಿಟಿ ಮಳೆ, ಮತ್ತೊಂದು ಕಡೆ ನಾ ಮುಂದು, ತಾ ಮುಂದು ಎಂದು ಕೆಸರು ಗದ್ದೆಯಲ್ಲಿ ಹಗ್ಗ ಜಗ್ಗಾಟದಲ್ಲಿ ತೊಡಗಿರುವ ಮಹಿಳೆಯರು, ಪುರುಷರು. ಈ ದೃಶ್ಯ ಕಂಡುಬಂದಿದ್ದು, ಮಡಿಕೇರಿ ತಾಲೂಕಿನ ಅರುವತ್ತೊಕ್ಲುವಿನ ಹಾಕತ್ತೂರು ಗ್ರಾಮದಲ್ಲಿ.

ಬೇಕೋಟು ಮಕ್ಕ ಎಂಬ ತಂಡದ ವತಿಯಿಂದ ಹಾಕತ್ತೂರಿನಲ್ಲಿ ವರ್ಷದ ಮೊದಲ ಕೆಸರು ಗದ್ದೆ ಕ್ರೀಡಾಕೂಟ ಆಯೋಜಿಸಲಾಗಿತ್ತು. ಈ ಕ್ರೀಡಾಕೂಟದಲ್ಲಿ ಪುರುಷರು, ಮಹಿಳೆಯರು ಹಾಗೂ ಮಕ್ಕಳು ಕೆಸರು ಗದ್ದೆಯಲ್ಲಿ ಆಟವಾಡಿ ಸಖತ್​ ಎಂಜಾಯ್​ ಮಾಡಿದ್ರು.

ಮಡಿಕೇರಿ: ಕೆಸರು ಗದ್ದೆಯಲ್ಲಿ ಗ್ರಾಮೀಣ ಕ್ರೀಡೆಗಳ ಝಲಕ್

ಇಲ್ಲಿ ಹಗ್ಗಜಗ್ಗಾಟ, 100 ಮೀ ಹಾಗೂ 200 ಮೀ. ಕೆಸರು ಗದ್ದೆ ಓಟದ ಸ್ಪರ್ಧೆ ಏರ್ಪಡಿಸಲಾಗಿತ್ತು. ಜಿಲ್ಲಾಮಟ್ಟದಲ್ಲಿ‌ ನಡೆದ ಈ ಸ್ಪರ್ಧೆಯಲ್ಲಿ 20ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು. ಮಕ್ಕಳಿಗೆ ಆಟದ ಜೊತೆಗೆ ಕೃಷಿ ಹಾಗೂ ರೈತರು ಎದುರಿಸುವ ಸವಾಲುಗಳ ಬಗ್ಗೆ ಮಾಹಿತಿ ನೀಡಲಾಯಿತು.

ಪ್ರಕೃತಿ ವಿಕೋಪ, ಕೊರೊನಾ ಕಾರಣದಿಂದ ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಕೆಸರು ಗದ್ದೆ ಕ್ರೀಡಾಕೂಟ ಆಯೋಜಿಸಿರಲಿಲ್ಲ. ಈ ಬಾರಿ ಕ್ರೀಡಾಕೂಟ ಆಯೋಜನೆ ಮಾಡಿದ್ದು, ನೂರಾರು ಸ್ಪರ್ಧಿಗಳು ಭಾಗವಹಿಸಿ ಖುಷಿಪಟ್ಟರು.

ಇದನ್ನೂ ಓದಿ: ಗದಗ: ಮಳೆ ನಿಂತರೂ ಕಡಿಮೆಯಾಗದ ಪ್ರವಾಹ ಭೀತಿ..ಮಲಪ್ರಭಾ ಅಬ್ಬರಕ್ಕೆ ಜನ - ಜೀವನ ಅಸ್ತವ್ಯಸ್ತ

Last Updated : Jul 27, 2021, 4:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.