ETV Bharat / state

ಕೊಡಗಿನಲ್ಲಿ ಮತ್ತೆ 9 ಪಾಸಿಟಿವ್ ಪ್ರಕರಣ ಪತ್ತೆ:  408 ಕ್ಕೇರಿದ ಸೋಂಕಿತರ ಸಂಖ್ಯೆ

ಕೊಡಗಿನಲ್ಲಿ ಮತ್ತೆ 9 ಜನರಿಗೆ ಕೊರೊನಾ ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 408 ಕ್ಕೆ ಏರಿಕೆಯಾಗಿದೆ.

Kodagu
Kodagu
author img

By

Published : Jul 31, 2020, 9:47 AM IST

ಕೊಡಗು: ಹೊಸದಾಗಿ 9 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಜಿಲ್ಲೆಯಲ್ಲಿ ಇದುವರೆಗೆ ಒಟ್ಟು ಸೋಂಕಿತರ ಸಂಖ್ಯೆ 408ಕ್ಕೆ ಏರಿಕೆಯಾದಂತಾಗಿದೆ.

ವೀರಾಜಪೇಟೆಯ ಕಾಕೋಟು ಪರಂಬುವಿನ 10 ವರ್ಷದ ಬಾಲಕ, ವಡ್ಡರಮಡು ಗ್ರಾಮದ 26, 30, 75 ಹಾಗೂ 26 ರ ವರ್ಷದ ಮಹಿಳೆ ಸೇರಿದಂತೆ ನಾಲ್ವರು ಮಹಿಳೆಯರಿಗೆ ಸೋಂಕು ಹರಡಿದೆ. ಮಡಿಕೇರಿಯ ಗೌಳಿಬೀದಿಯಲ್ಲಿ 56 ರ ಹಾಗೆಯೇ ಪೊಲೀಸ್ ಕ್ವಾಟರ್ಸ್​​​​​​​​ನ 56ರ ಮತ್ತೋರ್ವ ಸಿಬ್ಬಂದಿ ಸೇರಿದಂತೆ ಐಟಿಐ ಜಂಕ್ಷನ್ ಬಳಿಯ 32 ವರ್ಷದ ಮಹಿಳೆಯಲ್ಲಿ ಸೋಂಕು ಕಾಣಿಸಿಕೊಂಡಿದೆ.‌ ಅಲ್ಲದೇ ಸೋಮವಾರಪೇಟೆ ತಾಲೂಕಿನ ‌ಕುಶಾಲನಗರದ ಹೆಬ್ಬಾಲೆ ಸಮೀಪದ ಹುಲುಸೆಯ 75 ವರ್ಷದ ಮಹಿಳೆಯಲ್ಲಿ ಪಾಸಿಟಿವ್ ವರದಿಯಾಗಿದೆ.

ಜಿಲ್ಲೆಯಲ್ಲಿ ಇಲ್ಲಿವರೆಗೆ 289 ಮಂದಿ ಗುಣಮುಖರಾಗಿದ್ದು, 110 ಸಕ್ರಿಯ ಪ್ರಕರಣಗಳಿವೆ.‌ ಇವುಗಳಲ್ಲಿ 9 ಮಂದಿ‌ ಮೃತಪಟ್ಟಿದ್ದು, 94 ಕಂಟೇನ್​​​​ಮೆಂಟ್ ವಲಯಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.