ಕೊಡಗು: ನಾಡಿನೆಲ್ಲೆಡೆ ನಾಗರ ಪಂಚಮಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಅಂತೆಯೇ ವಿಶಿಷ್ಟ ಆಚರಣೆ ಹಾಗೂ ಸಂಪ್ರದಾಯಗಳಿಂದಲೇ ಹೆಸರುವಾಸಿಯಾಗಿರುವ ಕೊಡಗಿನ ಪ್ರಮುಖ ದೇವಾಲಯಗಳಲ್ಲೂ ನಾಗಪ್ಪಗೆ ಶ್ರದ್ಧಾ-ಭಕ್ತಿಯಿಂದ ಪೂಜೆ ನೆರವೇರಿಸಲಾಯಿತು.
ನಗರದ ದೇವಾಲಯಗಳಲ್ಲಿ ಬೆಳಗ್ಗೆಯಿಂದಲೇ ಭಕ್ತ ಸಮೂಹ ಸೇರಿ ನಾಗರ ಪಂಚಮಿ ಆಚರಿಸಿದರು. ಮನೆ ಹಾಗೂ ದೇವಾಲಯಗಳಲ್ಲಿ ವಿಶೇಷವಾಗಿ ಪೂಜೆ ಸಲ್ಲಿಸಿ ಭಕ್ತಿಯಿಂದ ನಾಗ ದೇವತೆಗೆ ನಮಿಸಿ ಒಳಿತಾಗಲೆಂದು ಪ್ರಾರ್ಥಿಸಿದರು. ನಾಗರ ಕಲ್ಲು ಹಾಗೂ ಹುತ್ತಕ್ಕೆ ಅಲಂಕಾರ ಮಾಡಿ, ಹಾಲು ಎರೆದು ಪೂಜೆ ಸಲ್ಲಿಸಿದರು.
ದೇವಾಲಯಗಳು ಮಾತ್ರವಲ್ಲದೆ ಮನೆ, ಹೊಲ, ಜಮೀನು, ತೋಟಗಳಲ್ಲಿನ ಹುತ್ತ, ನಾಗರ ಕಲ್ಲುಗಳಿಗೆ ಕುಟುಂಬ ಸಮೇತರಾಗಿ ಪೂಜೆ ಸಲ್ಲಿಸುವ ದೃಶ್ಯಗಳು ಸಾಮಾನ್ಯವಾಗಿದ್ದವು.