ETV Bharat / state

ಕೊಡಗು ಕೆಡಿಪಿ ಸಭೆಯಲ್ಲಿ ಪ್ರತಿಧ್ವನಿಸಿದವು ಸಮಸ್ಯೆಗಳ ಸರಮಾಲೆ

ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ನೇತೃತ್ವದಲ್ಲಿ ನಗರದ ಜಿಲ್ಲಾ ಪಂಚಾಯಿತಿಯಲ್ಲಿ ಇಂದು ಕೆಡಿಪಿ ಸಭೆ ಜರುಗಿತು.

KDP meeting
ಕೆಡಿಪಿ ಸಭೆ
author img

By

Published : Jan 4, 2020, 4:29 PM IST

ಕೊಡಗು: ಸಾಕಷ್ಟು ಬುಡಕಟ್ಟು ಹಾಗೂ ಅರಣ್ಯ ವಾಸಿಗಳಿಗೆ ಇನ್ನೂ ಸಾಗುವಳಿ ಪತ್ರಗಳನ್ನೇ ಕೊಟ್ಟಿಲ್ಲ. ಕಳೆದ ವರ್ಷ ಸುರಿದ ಮಳೆಯಿಂದ ಸಂಪರ್ಕ ಕಳೆದುಕೊಂಡಿರುವ ರಸ್ತೆಗಳ ಪುನರ್ ನಿರ್ಮಾಣಕ್ಕೆ ಅರಣ್ಯ ಇಲಾಖೆ ಇಂಚು ಜಾಗ ಕೊಡ್ತಿಲ್ಲ. ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಹಾಸ್ಟೆಲ್‌ಗಳು ಇನ್ನೂ ಪೂರ್ಣಗೊಂಡಿಲ್ಲ ಹೀಗೆ ಕೆಡಿಪಿ ಸಭೆಯಲ್ಲಿ ಸಮಸ್ಯೆಗಳ ಸರಮಾಲೆಗಳೇ ಸ್ಥಳೀಯ ಜನಪ್ರತಿನಿಧಿಗಳಿಂದ ಅಭಿವ್ಯಕ್ತಗೊಂಡವು.

ಕೆಡಿಪಿ ಸಭೆ

ಜಿಲ್ಲಾ ಉಸ್ತುವಾರಿ ಸಚಿವ ಸಚಿವ ವಿ.ಸೋಮಣ್ಣ ನೇತೃತ್ವದಲ್ಲಿ ನಗರದ ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಹಲವು ಸಮಸ್ಯೆಗಳು ಪ್ರತಿಧ್ವನಿಸಿದವು. ಇಲ್ಲಿ ಕನಿಷ್ಠ 5 ಇಂಚು ಮಳೆ ಬಿದ್ದರೆ ಪ್ರವಾಹದ ಪರಿಸ್ಥಿತಿ ಉಂಟಾಗುತ್ತೆ. ಆದ್ದರಿಂದ ಹಾರಂಗಿ ಡ್ಯಾಂ ಹಾಗೂ ಇತರೆ ಪ್ರಮುಖ ಹೊಳೆಗಳಲ್ಲಿ ತುಂಬಿರುವ ಹೂಳನ್ನು ತೆಗೆಯಬೇಕು ಎಂದು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಕೆಡಿಪಿ ಸಭೆಯಲ್ಲಿ ಗಮನ ಸೆಳೆದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಸೋಮಣ್ಣ, ಕಾವೇರಿ ನೀರಾವರಿ ನಿಗಮದಿಂದ 2019-20ನೇ ಸಾಲಿನ ಬಜೆಟ್‌ನಲ್ಲಿ 130 ಕೋಟಿ ಬಿಡುಗಡೆ ಮಾಡಿದ್ದು, ಹಾರಂಗಿ ಇನ್ನಿತರೆ ಹೊಳೆಗಳಲ್ಲಿ ತುಂಬಿರುವ ಹೂಳನ್ನು ತೆಗೆಯಲು ಆಡಳಿತಾತ್ಮಕ ಅನುಮೋದನೆ ಕೊಡಬೇಕು ಎಂದು ಸಭಾ ನಡಾವಳಿಗೆ ದಾಖಲಿಸಿದರು.

ಜಿಲ್ಲೆಯಲ್ಲಿಇನ್ನೂ 1876 ಮಂದಿಗೆ ಅರಣ್ಯ ಹಕ್ಕು ಪತ್ರಗಳನ್ನು ಕೊಡಬೇಕು. ಗ್ರಾಮಸಭೆಗಳಲ್ಲೂ ಫಲಾನುಭವಿಗಳನ್ನು ಗುರುತಿಸಲು ಅರಣ್ಯ ಇಲಾಖೆಯ ಅಧಿಕಾರಿಗಳು ವಿಫಲರಾಗಿದ್ದಾರೆ. ಇದನ್ನು ಕೇಳಿದ್ರೆ ಇಲ್ಲದ ಕಾನೂನುಗಳನ್ನು ಹೇಳ್ತಾರೆ ಎಂದು ಡಿಎಫ್ಓ ಹಾಗೂ ಆರ್‌ಎಫ್‌ಓ ವಿರುದ್ಧ ಶಾಸಕ ಕೆ.ಜಿ.ಬೋಪಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಎಲ್ಲೆಲ್ಲಿ ಅರಣ್ಯ ಹಕ್ಕುಪತ್ರಗಳನ್ನು ವಿತರಿಸಿಲ್ಲ ಅಂತಹವರಿಗೆ ತಿಂಗಳೊಳಗೆ ಹಕ್ಕು ಪತ್ರಗಳನ್ನು ವಿತರಿಸಬೇಕು. ತಾಲೂಕು ಪಂಚಾಯಿತಿಯ ಕಾರ್ಯ ನಿರ್ವಹಣಾಧಿಕಾರಿ, ತಹಸೀಲ್ದಾರ್, ಅರಣ್ಯ ಇಲಾಖೆ, ಕೆಇಬಿ ಮತ್ತು ಭೂ ದಾಖಲೆಗಳ ಅಧಿಕಾರಿಗಳನ್ನು ಸೇರಿಸಿಕೊಂಡು ಪಂಚಾಯಿತಿ ಹಂತದಿಂದ ಎಲ್ಲರಿಗೂ ಹಕ್ಕುಪತ್ರಗಳನ್ನ ಕೊಡುವಂತೆ ಕೊಡಗು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ( ಪ್ರಭಾರಿ) ಹೀರಾಲಾಲ್ ಅವರಿಗೆ ಶಾಸಕರಾದ ಸೋಮಣ್ಣ ತಾಕೀತು ಮಾಡಿದರು.

ಆಶ್ರಯ ಮನೆ ಯೋಜನೆಯಡಿ ಮನೆಗಳ ನಿರ್ಮಾಣಕ್ಕೆ ಹಾಗೂ ಸ್ವಂತ ಜಾಗದಲ್ಲಿ ಮರಳು ತೆಗೆದು ಪಿಕ್‌ಅಪ್ ಜೀಪ್​ನಲ್ಲಿ ತೆಗೆದುಕೊಂಡು ಹೋಗುವ ಗಾಡಿಗಳನ್ನೆಲ್ಲ ಪೊಲೀಸರು ಹಿಡಿಯುತ್ತಿದ್ದಾರೆ. ಅದ್ರಲ್ಲಿ ಎಷ್ಟು ಮರಳನ್ನು ಸಾಗಿಸಲು ಸಾಧ್ಯ ದಯವಿಟ್ಟು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಸಡಿಲಿಕೆ ಮಾಡಿಕೊಡಬೇಕು. ದೇವಸ್ಥಾನಕ್ಕೆ ಮರಳನ್ನು ತೆಗೆದುಕೊಂಡು ಹೋದ್ರು ಅದನ್ನೂ ಬಿಡಲ್ಲ ನೀವು ಎಂದು ಶಾಸಕರಾದ ಕೆ.ಜಿ.ಬೋಪಯ್ಯ ಹಾಗೂ ಅಪ್ಪಚ್ಚು ರಂಜನ್ ಸಭೆಯ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸೋಮಣ್ಣ, ಚಿಕ್ಕ ಪುಟ್ಟ ಕೆಲಸಗಳಿಗೆ ಚಿಕ್ಕ ವಾಹನದಲ್ಲಿ ತೆಗೆದುಕೊಂಡು ಹೋಗುವ ವಾಹನಗಳನ್ನು ಕಿರಿಕಿರಿ ಮಾಡಬೇಡಿ. ಕಾನೂನಲ್ಲಿ ಮಾನವೀಯತೆಯೂ ಇರಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ತಾಕೀತು ಮಾಡಿದ್ರು. ಹಾಗೂ ಅವರನ್ನು ಸೇವೆಯಿಂದ ವಜಾಮಾಡುವಂತೆ ಆಗ್ರಹಿಸಿದರು.

ಸಭೆಯಲ್ಲಿ ಎಂ‌ಎಲ್‌ಸಿ ಸುನೀಲ್ ಸುಬ್ರಹ್ಮಣಿ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ ಡಿ.ಪನ್ನೇಕರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಹರೀಶ್, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಿಪ್ರಿಯಾ ಇದ್ದರು.

Intro:ಕೆಡಿಪಿ ಸಭೆಯಲ್ಲಿ ಪ್ರತಿಧ್ವನಿಸಿದವು ಸಮಸ್ಯೆಗಳ ಸರಮಾಲೆ: ಅರಣ್ಯ ಇಲಾಖೆ ವಿರುದ್ಧ ಶಾಸಕರ ತೀವ್ರ ಅಸಮಾಧಾನ..!

ಕೊಡಗು: ಸಾಕಷ್ಟು ಬುಡಕಟ್ಟು ಹಾಗೂ ಅರಣ್ಯ ವಾಸಿಗಳಿಗೆ ಇನ್ನೂ ಸಾಗುವಳಿ ಪತ್ರಗಳನ್ನೇ ಕೊಟ್ಟಿಲ್ಲ. ಕಳೆದ ವರ್ಷ ಸುರಿದ ಮಳೆಯಿಂದ ಸಂಪರ್ಕ ಕಳೆದುಕೊಂಡಿರುವ ರಸ್ತೆಗಳ ಪುನರ್ ನಿರ್ಮಾಣಕ್ಕೆ ಅರಣ್ಯ ಇಲಾಖೆ ಇಂಚು ಜಾಗ ಕೊಡ್ತಿಲ್ಲ. ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಹಾಸ್ಟೆಲ್‌ಗಳು ಇನ್ನೂ ಪೂರ್ಣಗೊಂಡಿಲ್ಲ....ಹೀಗೆ ಸಮಸ್ಯೆಗಳ ಸರಮಾಲೆಗಳೇ ಸ್ಥಳೀಯ ಜನಪ್ರತಿನಿಧಿಗಳಿಂದ ಅಭಿವ್ಯಕ್ತಗೊಂಡವು.

ಜಿಲ್ಲಾ ಉಸ್ತುವಾರಿ ಸಚಿವ ಸಚಿವ ವಿ.ಸೋಮಣ್ಣ ನೇತೃತ್ವದಲ್ಲಿ
ನಗರದ ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಹಲವು ಸಮಸ್ಯೆಗಳು ಪ್ರತಿಧ್ವನಿಸಿದವು. ಇಲ್ಲಿ ಕನಿಷ್ಠ 5 ಇಂಚು ಮಳೆ ಬಿದ್ದರೆ ಪ್ರವಾಹದ ಪರಿಸ್ಥಿತಿ ಉಂಟಾಗುತ್ತೆ. ಆದ್ದರಿಂದ ಹಾರಂಗಿ ಡ್ಯಾಂ ಹಾಗೂ ಇತರೆ ಪ್ರಮುಖ ಹೊಳೆಗಳಲ್ಲಿ ತುಂಬಿರುವ ಹೂಳನ್ನು ತೆಗೆಯಬೇಕು ಎಂದು ಶಾಸಕ ಎಂ.ಪಿ.ಅಪ್ಪಚ್ಚ ರಂಜನ್ ಕೆಡಿಪಿ ಸಭೆಯಲ್ಲಿ ಗಮನ ಸೆಳೆದರು.

ಇದಕ್ಕೆ ಪ್ರತಿಕ್ರಿಸಿದ ಸಚಿವ ಸೋಮಣ್ಣ, ಕಾವೇರಿ ನೀರಾವರಿ ನಿಗಮದಿಂದ 2019-20 ನೇ ಸಾಲಿನ ಬಜೆಟ್‌ನಲ್ಲಿ 130 ಕೋಟಿ ಬಿಡುಗಡೆ ಮಾಡಿದ್ದು, ಹಾರಂಗಿ ಇನ್ನಿತರೆ ಹೊಳೆಗಳಲ್ಲಿ ತುಂಬಿರುವ ಹೂಳನ್ನು ತೆಗೆಯಲು ಆಡಳಿತಾತ್ಮಕ ಅನುಮೋದನೆ ಕೊಡಬೇಕು ಎಂದು ಸಭಾ ನಡಾವಳಿಗೆ ದಾಖಲಿಸಿದರು.

ಜಿಲ್ಲೆಯಲ್ಲಿ ಇನ್ನೂ 1876 ಮಂದಿಗೆ ಅರಣ್ಯ ಹಕ್ಕು ಪತ್ರಗಳನ್ನು ಕೊಡಬೇಕು. ಗ್ರಾಮಸಭೆಗಳಲ್ಲೂ ಫಲಾನುಭವಿಗಳನ್ನು ಗುರುತಿಸಲು ಅರಣ್ಯ ಇಲಾಖೆಯ ಅಧಿಕಾರಿಗಳು ವಿಫಲರಾಗಿದ್ದಾರೆ.ಇದನ್ನು ಕೇಳಿದ್ರೆ ಇಲ್ಲದ ಕಾನೂನುಗಳನ್ನು ಹೇಳ್ತಾರೆ ಎಂದು ಡಿಎಫ್ಓ ಹಾಗೂ ಆರ್‌ಎಫ್‌ಓ ವಿರುದ್ಧ ಶಾಸಕ ಕೆ.ಜಿ.ಬೋಪಯ್ಯ ಆಕ್ರೊಶ ವ್ಯಕ್ತಪಡಿಸಿದರು.

ಎಲ್ಲೆಲ್ಲೆ ಅರಣ್ಯ ಹಕ್ಕು ಪತ್ರಗಳನ್ನು ವಿತರಿಸಿಲ್ಲ ಅಂತಹವರಿಗೆ ತಿಂಗಳೊಳಗೆ ಹಕ್ಕು ಪತ್ರಗಳನ್ನು ವಿತರಿಸಬೇಕು. ತಾಲೂಕು ಪಂಚಾಯಿತಿಯ ಕಾರ್ಯ ನಿರ್ವಹಣಾಧಿಕಾರಿ, ತಹಸೀಲ್ದಾರ್, ಅರಣ್ಯ ಇಲಾಖೆ, ಕೆಇಬಿ ಮತ್ತು ಭೂ ದಾಖಲೆಗಳ ಅಧಿಕಾರಿಗಳನ್ನು ಸೇರಿಸಿಕೊಂಡು ಪಂಚಾಯಿತಿ ಹಂತದಿಂದ ಎಲ್ಲರಿಗೂ ಹಕ್ಕುಪತ್ರಗಳನ್ನ ಕೊಡುವಂತೆ ಕೊಡಗು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ( ಪ್ರಭಾರಿ) ಹೀರಾಲಾಲ್
ಅವರಿಗೆ ಶಾಸಕರಾದ ಸೋಮಣ್ಣ ತಾಕೀತು ಮಾಡಿದರು.

ಆಶ್ರಮ ಮನೆ ಯೋಜನೆಯಡಿ ಮನೆಗಳ ನಿರ್ಮಾಣಕ್ಕೆ ಹಾಗೂ ಸ್ವಂತ ಜಾಗದಲ್ಲಿ ಮರಳು ತೆಗೆದು ಪಿಕ್‌ಅಪ್
ಚಿಪ್‌ನಲ್ಲಿ ತೆಗೆದುಕೊಂಡು ಹೋಗುವ ಗಾಡಿಗಳನ್ನೆಲ್ಲ ಪೊಲೀಸರು ಹಿಡಿಯುತ್ತಿದ್ದಾರೆ.ಅದ್ರಲ್ಲಿ ಎಷ್ಟು ಮರಳನ್ನು ಸಾಗಿಸಲು ಸಾಧ್ಯ.ದಯವಿಟ್ಟು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಸಡಿಲಿಕೆ ಮಾಡಿಕೊಡಬೇಕು. ದೇವಸ್ಥಾನಕ್ಕೆ ಮರಳನ್ನು ತೆಗೆದುಕೊಂಡು ಹೋದ್ರು ಅದನ್ನೂ ಬಿಡಲ್ಲ ನೀವು ಎಂದು ಶಾಸಕರಾದ ಕೆ.ಜಿ.ಬೋಪಯ್ಯ ಹಾಗೂ ಅಪ್ಪಚ್ಚು ರಂಜನ್ ಸಭೆಯ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸೋಮಣ್ಣ, ಚಿಕ್ಕ,ಪುಟ್ಟ ಕೆಲಸಗಳಿಗೆ ಚಿಕ್ಕ ವಾಹನದಲ್ಲಿ ತೆಗೆದುಕೊಂಡು ಹೋಗುವ ವಾಹನಗಳನ್ನು ಕಿರಿಕಿರಿ ಮಾಡಬೇಡಿ.ಕಾನೂನಲ್ಲಿ ಮಾನವೀಯತೆಯೂ ಇರಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ತಾಕೀತು ಮಾಡಿದ್ರು. ಹಾಗೂ ಅವರನ್ನು ಸೇವೆಯಿಂದ ವಜಾಮಾಡುವಂತೆ ಆಗ್ರಹಿಸಿದರು.

ಸಭೆಯಲ್ಲಿ ಎಂ‌ಎಲ್‌ಲ್ಸಿ ಸುನೀಲ್ ಸುಬ್ರಹ್ಮಣಿ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ ಡಿ.ಪನ್ನೇಕರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಹರೀಶ್, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಲಕ್ಷ್ಮಿಪ್ರಿಯಾ ಇದ್ದರು.

- ಕೆ.ಸಿ.ಮಣಿಕಂಠ, ಈಟಿವಿ ಭಾರತ, ಕೊಡಗು.

Body:0

Conclusion:0
ETV Bharat Logo

Copyright © 2024 Ushodaya Enterprises Pvt. Ltd., All Rights Reserved.