ಕೊಡಗು/ವಿರಾಜಪೇಟೆ: ಐಟಿ ದಾಳಿ ಹಿನ್ನೆಲೆ ಈಗಾಗಲೇ ನಟಿ ರಶ್ಮಿಕಾ ಮಂದಣ್ಣ ತಮ್ಮ ನಿವಾಸಕ್ಕೆ ಆಗಮಿಸಿದ್ದು ಕಳೆದ 2 ಗಂಟೆಗಳಿಂದ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ನಟಿ ನಿವಾಸಕ್ಕೆ ಅಗಮಿಸುತ್ತಿದ್ದಂತೆ ಅಧಿಕಾರಿಗಳು ಮನೆಯೊಳಗೆ ಕರೆದುಕೊಂಡು ಹೋಗಿದ್ದಾಗಿ ವರದಿಯಾಗಿದೆ.
ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಿ ವಿವರಣೆ ನೀಡುವಂತೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಸಮನ್ಸ್ ಜಾರಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ವಿರಾಜಪೇಟೆಯಲ್ಲಿರುವ ತಮ್ಮ ನಿವಾಸಕ್ಕೆ ನಟಿ ಆಗಮಿಸಿದ್ದು, ಮಾಧ್ಯಮದವರ ಕಣ್ತಪ್ಪಿಸಿ ಐಟಿ ಅಧಿಕಾರಿಗಳು ನಟಿ ರಶ್ಮಿಕಾ ಮಂದಣ್ಣ ಅವರನ್ನು ವಿಚಾರಣೆಗೆ ಮನೆಗೆ ಕರೆದೊಯ್ದಿದ್ದಾರೆ ಎಂದು ತಿಳಿದು ಬಂದಿದೆ.
ಸಿನಿಮಾ ಕಾರ್ಯ ನಿಮಿತ್ತ ಚೆನ್ನೈನಲ್ಲಿದ್ದ ರಶ್ಮಿಕಾ ಅಲ್ಲಿಂದ ವಿರಾಜಪೇಟೆಗೆ ಆಗಮಿಸಿದ್ದಾರೆ.
![IT raid on Actress home, IT raid on Actress Rashmika home, IT raid on Actress Rashmika home news, ನಟಿ ಮನೆ ಮೇಲೆ ಐಟಿ ದಾಳಿ, ನಟಿ ರಶ್ಮಿಕಾ ಮನೆ ಮೇಲೆ ಐಟಿ ದಾಳಿ, ನಟಿ ರಶ್ಮಿಕಾ ಮನೆ ಮೇಲೆ ಐಟಿ ದಾಳಿ ಸುದ್ದಿ,](https://etvbharatimages.akamaized.net/etvbharat/prod-images/5733708_rashmika.jpg)
ರಶ್ಮಿಕಾ ಮನೆಯಲ್ಲಿ ಐಟಿ ಅಧಿಕಾರಿಗಳು ವಾಸ್ತವ್ಯ?
ಕಳೆದ ಒಂದೂವರೆ ಗಂಟೆಯಿಂದ ರಶ್ಮಿಕಾ ಅವರ ವಿಚಾರಣೆ ನಡೆಸುತ್ತಿರುವ ಕಂದಾಯ ಇಲಾಖೆ ಅಧಿಕಾರಿಗಳು ನಾಳೆ ಕೂಡ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಹೀಗಾಗಿ ಇಂದು ರಾತ್ರಿ ವಿರಾಜಪೇಟೆಯಲ್ಲಿರುವ ರಶ್ಮಿಕಾ ಮನೆಯಲ್ಲಿ ಅಧಿಕಾರಿಗಳು ಉಳಿದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ.
ತಂದೆಯ ಸ್ಥಿತಿ ನೋಡಿ ಮರುಗಿದ ಮಗಳು?
ಕಳೆದ 15 ಗಂಟೆಗಳಿಂದ ರಶ್ಮಿಕಾ ಮಂದಣ್ಣ ಅವರ ತಂದೆ ವಿಚಾರಣೆಗೊಳಗಾಗಿರುವ ಕಾರಣ ಅವರ ಸ್ಥಿತಿ ಕಂಡು ಮಗಳು ಆತಂಕಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಮನೆಗೆ ತೆರಳುತ್ತಿದ್ದಂತೆ ತಂದೆಯವರನ್ನು ಸಂತೈಸಿರುವ ಮಗಳು ಅವರೊಂದಿಗೆ ಮಾತನಾಡಿ ವಿಚಾರಣೆಗೆ ಹಾಜರಾದರು ಎಂದು ತಿಳಿದು ಬಂದಿದೆ.