ETV Bharat / state

ಕೊಡಗಿನಲ್ಲಿ ಹೆಚ್ಚುತ್ತಿರುವ ‌ಮಾನವ-ಕಾಡಾನೆ ಸಂಘರ್ಷ: ಅಪಾರ ಬೆಳೆ ಹಾನಿ - ಕಾಡಾನೆ ಹಾವಳಿ

ಶನಿವಾರಸಂತೆ ಗ್ರಾಮದ ಸುತ್ತಮುತ್ತಲಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ. ರಾತ್ರಿ ಹೊತ್ತಿನಲ್ಲಿ ಮನೆಯಂಗಳಕ್ಕೆ ಬರುವ ಕಾಡಾನೆಗಳು ಬಾಳೆಗಿಡ ಹಾಗು ತರಕಾರಿ ಬೆಳೆ ತಿಂದು ನಾಶಪಡಿಸುತ್ತಿವೆ.

Increased wild Elephant attack in Kodagu
ಕೊಡಗಿನಲ್ಲಿ ಹೆಚ್ಚುತ್ತಿರುವ ‌ಮಾನವ ಕಾಡಾನೆ ಸಂಘರ್ಷ
author img

By

Published : Nov 22, 2022, 12:04 PM IST

Updated : Nov 22, 2022, 2:12 PM IST

ಕೊಡಗು: ಜಿಲ್ಲೆಯಲ್ಲಿ ‌ಮಾನವ-ಕಾಡಾನೆ ಸಂಘರ್ಷ ದಿನ ದಿನಕ್ಕೆ ಹೆಚ್ಚಾಗುತ್ತಿದೆ. ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ಮುಂದುವರಿದಿದೆ. ಕಾಡಾನೆಗಳು ಭತ್ತದ ಗದ್ದೆಗಳಲ್ಲಿ ಮನಬಂದಂತೆ ಓಡಾಡಿದ್ದು, ದಾಳಿಗೆ ಅಪಾರ ಪ್ರಮಾಣದ ಬೆಳೆ ನಾಶವಾಗಿವೆ. ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಎಂದು ರೈತರು ಕಂಗಾಲಾಗಿದ್ದಾರೆ.

ಸೋಮವಾರ ಪೇಟೆ ತಾಲ್ಲೂಕಿನ ಶನಿವಾರಸಂತೆ ಸಮೀಪದ ಕಿರಿಬಿಳಹದ ಸುನೀಲ್ ಎಂಬವರಿಗೆ ಸೇರಿದ ಭತ್ತದ ಗದ್ದೆ ಹಾಗೂ ಸುತ್ತಮುತ್ತಲಿನ ಭತ್ತ ಮತ್ತು ಕಾಫಿ ತೋಟ ನಾಶವಾಗಿದೆ.‌ ಆಹಾರ ಅರಸಿ ನಾಡಿಗೆ ಬಂದ ಕಾಡಾನೆಗಳ ಹಿಂಡು ಗದ್ದೆ ಮಧ್ಯದಲ್ಲಿ ಓಡಾಡಿ ಪುಂಡಾಟ ಮಾಡಿದ್ದು, ಕಟಾವಿಗೆ ಬಂದಿದ್ದ ಭತ್ತದ ಬೆಳೆ ಮಣ್ಣು ಪಾಲಾಗಿದೆ.‌

ಕೊಡಗಿನಲ್ಲಿ ಹೆಚ್ಚುತ್ತಿರುವ ‌ಮಾನವ ಕಾಡಾನೆ ಸಂಘರ್ಷ

ಸುತ್ತಮುತ್ತಲಿನ ಗ್ರಾಮದ ಕಾಫಿ ತೋಟಗಳಲ್ಲಿ 15 ದಿನಗಳಿಂದ 6 ಆನೆಗಳ ಹಿಂಡು ಬೀಡುಬಿಟ್ಟಿದ್ದು, ಮನಬಂದಂತೆ ಓಡಾಡಿ ಕಾಫಿ ಗಿಡಗಳನ್ನು ಮುರಿದಿವೆ. ಅಡಿಕೆ ಗಿಡಗಳನ್ನು ನಾಶ ಮಾಡಿವೆ. 20 ವರ್ಷಗಳಿಂದ ಬೆಳೆದಿದ್ದ ಕಾಫಿ ಗಿಡಗಳನ್ನು ಕಳೆದುಕೊಂಡು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಗಜ ಪಡೆಗಳನ್ನು ನಾಡಿನಿಂದ ಕಾಡಿಗೆ ಓಡಿಸಿದರೂ ಮುಂಜಾನೆ ವೇಳೆಗೆ ರೈತರ ಬೆಳೆಗಳನ್ನು ನಾಶಪಡಿಸಿವೆ.

ಶನಿವಾರಸಂತೆ ಗ್ರಾಮದ ಸುತ್ತಮುತ್ತಲಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ. ರಾತ್ರಿ ಹೊತ್ತಿನಲ್ಲಿ ಮನೆಯ ಅಂಗಳಕ್ಕೆ ಬರುವ ಕಾಡಾನೆಗಳು ಬಾಳೆಗಿಡ ಹಾಗು ತರಕಾರಿ ಬೆಳೆಯನ್ನು ತಿಂದು ನಾಶಪಡಿಸುತ್ತಿವೆ.

ಹೆಚ್ಚಾದ ಕಾಡುಪ್ರಾಣಿಗಳ ದಾಳಿ: ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳು ನಾಡಿಗೆ ಬಂದು ಹಾನಿ ಮಾಡುತ್ತಿರುವ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಒಂದೆಡೆ ಕಾಡಾನೆಗಳು ದಾಳಿ ಮಾಡಿದರೆ ಇನ್ನೊಂದೆಡೆ ಹುಲಿ, ಚಿರತೆಯಂತಹ ಪ್ರಾಣಿಗಳು ದಾಳಿ ಮಾಡುತ್ತಿವೆ. ಜನರು ಭಯದಲ್ಲೇ ಜೀವನ ಸಾಗಿಸುವಂತಹ ಪರಿಸ್ಥಿತಿ ಉಂಟಾಗುತ್ತಿದೆ. ಕಾಡಾನೆಗಳ ಉಪಟಳ ಹೆಚ್ಚಾಗಿದ್ದು, ಒಂದೋ ಮಾನವರ ಮೇಲೆ, ಇಲ್ಲ ರೈತರ ಜಮೀನುಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿವೆ.

ನಿತ್ಯ ನೂರಾರು ಕಿಲೋಮೀಟರ್ ನಡೆದಾಡುತ್ತಿದ್ದ ಆನೆಗಳಿಗೆ, ಈಗ ನಾಡಿನಲ್ಲೇ ನೀರಿನ ಜೊತೆಗೆ ಪೌಷ್ಠಿಕ ಅಹಾರವೂ ದೊರಕುವುದರಿಂದ ಇಲ್ಲೇ ನೆಲೆ ಕಂಡುಕೊಂಡು ಜನರ ಜೀವಕ್ಕೆ ಸಂಚಕಾರ ತರುತ್ತಿವೆ.

ಇದನ್ನೂ ಓದಿ: ಮೂರು ತಿಂಗಳಲ್ಲಿ ಮೂವರು ರೈತರು ಬಲಿ: ಕಾಡಾನೆ ಸ್ಥಳಾಂತರಕ್ಕೆ ಸರ್ಕಾರ ಆದೇಶ

Last Updated : Nov 22, 2022, 2:12 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.