ETV Bharat / state

ಮಡಿಕೇರಿ ಕೋವಿಡ್ ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದ ವ್ಯಕ್ತಿ ಪತ್ತೆ - Siddapur Police Station

ಬುಧವಾರ ಮಡಿಕೇರಿ ಕೋವಿಡ್ ಆಸ್ಪತ್ರೆಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಅರೆಕಾಡು ಮೂಲದ ವ್ಯಕ್ತಿಯನ್ನು ಸೆರೆ ಹಿಡಿದು ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿದೆ.

Madikeri
ಕೋವಿಡ್ ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದ ವ್ಯಕ್ತಿ ಪತ್ತೆ
author img

By

Published : Jun 25, 2021, 11:08 AM IST

ಮಡಿಕೇರಿ (ಕೊಡಗು): ಗುಣಮುಖನಾಗಿದ್ದರೂ ಮಡಿಕೇರಿ ಕೋವಿಡ್ ಆಸ್ಪತ್ರೆಯ ವೈದ್ಯರು ಆಸ್ಪತ್ರೆಯಿಂದ ಕಳುಹಿಸುತ್ತಿಲ್ಲ ಎಂದು ಬೇಸರಗೊಂಡ ಅರೆಕಾಡು ಮೂಲದ ಸೋಂಕಿತ ವ್ಯಕ್ತಿ, ಬುಧವಾರ ಆಸ್ಪತ್ರೆಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ. ಇದೀಗ ಆ ವ್ಯಕ್ತಿಯನ್ನು ಮತ್ತೆ ಆಸ್ಪತ್ರೆಗೆ ಸೇರಿಸಲಾಗಿದೆ.

ಮಡಿಕೇರಿ ಕೋವಿಡ್ ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದ ವ್ಯಕ್ತಿ ಪತ್ತೆ

ಬುಧವಾರ ಸೋಂಕಿತ ವ್ಯಕ್ತಿ ತಪ್ಪಿಸಿಕೊಂಡಿರುವ ಬಗ್ಗೆ ಮಡಿಕೇರಿ ಪೊಲೀಸ್ ಠಾಣೆಗೆ ವೈದ್ಯಾಧಿಕಾರಿಗಳು ದೂರು ನೀಡಿ, ಪತ್ತೆಗಾಗಿ ಮನವಿ ಮಾಡಿದ್ದರು. ಇತ್ತ ಪೊಲೀಸರು ಹುಡುಕುವ ಮೊದಲೇ ಇಂದು ಬೆಳಿಗ್ಗೆ ಸಿದ್ದಾಪುರ ಪೊಲೀಸ್ ಠಾಣೆಗೆ ತೆರಳಿದ ಸೋಂಕಿತ, ಆಸ್ಪತ್ರೆಯಲ್ಲಿ ವೈದ್ಯರು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಹೇಳಿದ್ದಾನೆ.

ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು, ಆತನನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಲು ಆ್ಯಂಬುಲೆನ್ಸ್​​ ಕರೆಸಿದ್ದಾರೆ. ಆದರೆ, ಪೊಲೀಸ್ ಠಾಣೆಗೆ ಆ್ಯಂಬುಲೆನ್ಸ್​​ ಬರುತ್ತಿದಂತೆ ಅಲ್ಲಿಂದಲೂ ಆತ ಪರಾರಿಯಾಗಿದ್ದಾನೆ. ಕೆಲವು ಗಂಟೆಗಳ ಬಳಿಕ ಪಟ್ಟಣದ ವಿರಾಜಪೇಟೆಯಲ್ಲಿ ಪರಿಚಿತರ ಬೈಕ್​ನಲ್ಲಿ ಸಾಗುತ್ತಿರುವ ಮಾಹಿತಿ ದೊರತ ಪೊಲೀಸರು, ಅಲ್ಲಿಗೆ ತೆರಳಿ ಆತನನ್ನು ಸುತ್ತುವರಿದು ಓಡಿಹೋಗದಂತೆ ತಡೆದಿದ್ದಾರೆ. ಬಳಿಕ ಆ್ಯಂಬುಲೆನ್ಸ್ ಮೂಲಕ ಸೋಂಕಿತನನ್ನು ಮಡಿಕೇರಿ ಕೋವಿಡ್ ಆಸ್ಪತ್ರೆಗೆ ಕರೆತಂದು ದಾಖಲಿಸಿದ್ದಾರೆ‌.

ಇದನ್ನೂ ಓದಿ: ತಂದೆ, ತಾಯಿ ಅಗಲಿಕೆಯ ನೋವು: ಮೈಸೂರಿನಲ್ಲಿ ಹುಟ್ಟುಹಬ್ಬದಂದೇ ಯುವಕ ಆತ್ಮಹತ್ಯೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.