ETV Bharat / state

ಕೊಡಗಿನ ಸರ್ವನಾಶದ ಭವಿಷ್ಯ ನುಡಿದ ಬ್ರಹ್ಮಾಂಡ ಗುರೂಜಿ ವಿರುದ್ಧ ದೂರು - Virajpet

ಕೊಡಗಿನಲ್ಲಿ ಈ ಬಾರಿ ಭೂಕಂಪನ ಸಂಭವಿಸುತ್ತದೆ. ಕೊಡಗು ಸರ್ವನಾಶ ಆಗುತ್ತದೆ ಎಂದು ಭವಿಷ್ಯ ನುಡಿದ ಬ್ರಹ್ಮಾಂಡ ಗುರೂಜಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾ ಕಾಫಿ ಬೆಳೆಗಾರರ ಒಕ್ಕೂಟ ಶ್ರೀಮಂಗಲ ಪೊಲೀಸ್ ಠಾಣೆಗಯಲ್ಲಿ ದೂರು ನೀಡಿದ್ದಾರೆ.

brahmanda guruji
ಬ್ರಹ್ಮಾಂಡ ಗುರೂಜಿ ವಿರುದ್ಧ ದೂರು
author img

By

Published : May 27, 2020, 5:39 PM IST

ವಿರಾಜಪೇಟೆ/ಶ್ರೀಮಂಗಲ: ಭೂ ಕಂಪನದಿಂದ ಕೊಡಗು ಸರ್ವನಾಶ ಆಗುತ್ತದೆ ಎಂದು ಭವಿಷ್ಯ ಹೇಳಿರುವ ಬ್ರಹ್ಮಾಂಡ ಗುರೂಜಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಜಿಲ್ಲಾ ಕಾಫಿ ಬೆಳೆಗಾರರ ಒಕ್ಕೂಟದಿಂದ ದೂರು ನೀಡಲಾಯಿತು‌.

ಬ್ರಹ್ಮಾಂಡ ಗುರೂಜಿ ಕೊಡಗಿನಲ್ಲಿ ಈ ಬಾರಿ ಭಾರೀ ಪ್ರಮಾಣದ ಭೂಕಂಪನ ಸಂಭವಿಸುತ್ತದೆ. ಕೊಡಗು ನೆಲಸಮ ಆಗುತ್ತದೆ ಎಂದೆಲ್ಲ ಭವಿಷ್ಯ ನುಡಿದಿದ್ದಾರೆ. ಇದರಿಂದ ಜಿಲ್ಲೆಯ ಜನರನ್ನು ಸುಖಾ ಸುಮ್ಮನೆ ಆತಂಕಕ್ಕೆ ದೂಡುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.

ಇವರು ಹೇಳುವ ಭವಿಷ್ಯ ಯಾವ ಆಧಾರದ ಮೇಲೆ ನಿಜವಾಗುತ್ತದೆ. ಭಾರೀ ಭೂ ಕಂಪನ ಯಾವ ದಿನಾಂಕದಲ್ಲಿ ಸಂಭವಿಸುತ್ತದೆ. ಯಾವ ಸ್ಥಳದಲ್ಲಿ ಹಾಗೂ ಎಷ್ಟು ತೀವ್ರತೆಯಲ್ಲಿ ಆಗುತ್ತದೆ? ಎಲ್ಲವನ್ನೂ ಹೇಳಲಿ. ಇಂತಹ ಆತಂಕ ಸೃಷ್ಟಿಸುವ ಹೇಳಿಕೆ ಕೊಡಲು ಯಾವ ವೈಜ್ಞಾನಿಕ ಆಧಾರ ಇಟ್ಟುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯ ಜನತೆ ಮೊದಲೇ ಕಳೆದ ಮೂರು ವರ್ಷಗಳಿಂದ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ನಲುಗಿದ್ದಾರೆ. ಇಂತಹ ಸಂಕಷ್ಟದ ಸ್ಥಿತಿಯಲ್ಲಿ ವಿನಾಕಾರಣ ಗೊಂದಲ ಹಾಗೂ ಆತಂಕ ಸೃಷ್ಟಿಸುವ ಹೇಳಿಕೆಗಳನ್ನು ಕೊಡುತ್ತ ಸಮಾಜವನ್ನು ದಿಕ್ಕು ತಪ್ಪಿಸುತ್ತಿರುವ ಬ್ರಹ್ಮಾಂಡ ಗುರೂಜಿ ವಿರುದ್ಧ ಪ್ರಕರಣ ದಾಖಲಿಸಿ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.