ಕೊಡಗು: ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಉಂಟಾಗುತ್ತಿರುವ ಭೂಕುಸಿತದ ಉಂಟಾಗುವ ಕಾರಣ ಈ ಬಾರಿ ಮಳೆಗಾಲ ಆರಂಭವಾಗುತ್ತಿದ್ದಂತೆ ಬೃಹತ್ ವಾಹನಗಳ ಸಂಚಾರಕ್ಕೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಆದೇಶ ಹೊರಡಿಸಿದ್ದಾರೆ.
ಕೊಡಗಿನಲ್ಲಿ ಈಗಾಗಲೇ ಮಳೆ ಆರಂಭವಾಗಿದ್ದು ಭೂಮಿಯಲ್ಲಿ ತೇವಾಂಶ ಜಾಸ್ತಿಯಾದಂತೆ ಭೂಕುಸಿತ ಉಂಟಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಡಳಿತ ಈ ಕ್ರಮಕ್ಕೆ ಮುಂದಾಗಿದೆ. ಹೀಗಾಗಿ ಬುಲೆಟ್ ಟ್ಯಾಂಕರ್ಸ್, ಕಂಟೈನರ್ ಗಾಡಿಗಳು ಸೇರಿದಂತೆ ಎಲ್ಲಾ ಬಗೆಯ ದೊಡ್ಡ ವಾಹನಗಳ ಓಡಾಟವನ್ನು ನಿರ್ಬಂಧಿಸಲಾಗಿದೆ.
ಅಲ್ಲದೆ ಮರದ ದಿಮ್ಮಿಗಳ ಸಾಗಾಟ ಮತ್ತು ಮರಳು ಸಾಗಾಟವನ್ನೂ ನಿಲ್ಲಿಸಲಾಗಿದೆ. ಈ ಆದೇಶ ಜೂನ್ 11 ರಿಂದ ಆಗಸ್ಟ್ 10 ವರೆಗೆ ಅಂದರೆ ಮುಂದಿನ ಎರಡು ತಿಂಗಳ ಕಾಲ ಜಾರಿಯಲ್ಲಿರುತ್ತದೆ.