ETV Bharat / bharat

ಸೂರತ್​ನಲ್ಲಿ ಉಕ್ಕಿನ ಘಟಕದಲ್ಲಿ ಅನಾಹುತ - ನಾಲ್ವರು ಉದ್ಯೋಗಿಗಳ ಸಾವು; ಕುಟುಂಬಸ್ಥರ ಆಕ್ರಂದನ - FIRE AT A STEEL PLANT IN SURAT

ಸೂರತ್​ನ ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್​ ಇಂಡಿಯಾ (ಎಎಮ್​/ಎನ್​ಎಸ್​ ಇಂಡಿಯಾ)ದಲ್ಲಿ ಈ ಅಗ್ನಿ ಅವಘಡ ಸಂಭವಿಸಿದೆ ಎಂದು ಸೂರತ್​ ಪೊಲೀಸ್​ ಕಮಿಷನರ್​​ ಅನೂಪಮ್​ ಸಿಂಗ್​ ಗೆಹ್ಲೋಟ್​ ತಿಳಿಸಿದ್ದಾರೆ.

massive-fire-breaks-out-in-hazira-company-of-surat-4-employees-die
ಬೆಂಕಿ ಅನಾಹುತ ನಡೆದ ಘಟಕ (ETV Bharat)
author img

By ETV Bharat Karnataka Team

Published : Jan 1, 2025, 4:08 PM IST

ಸೂರತ್, ಗುಜರಾತ್​: ಇಲ್ಲಿನ ಹಜಿರಾ ಕೈಗಾರಿಕಾ ಪ್ರದೇಶದಲ್ಲಿನ ಉಕ್ಕಿನ ಘಟಕದಲ್ಲಿ ಕಾಣಿಸಿಕೊಂಡ ಅಗ್ನಿ ಅವಘಡದಲ್ಲಿ ನಾಲ್ವರು ಸಾವನ್ನಪ್ಪಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ವರದಿಯಾಗಿದೆ.

ಸೂರತ್​ನ ಎಎಮ್​/ಎನ್​ಎಸ್​ ಇಂಡಿಯಾ ದಲ್ಲಿ ಈ ಅಗ್ನಿ ಅವಘಡ ಸಂಭವಿಸಿದೆ ಎಂದು ಸೂರತ್​ ಪೊಲೀಸ್​ ಕಮಿಷನರ್​​ ಅನೂಪಮ್​ ಸಿಂಗ್​ ಗೆಹ್ಲೋಟ್​ ತಿಳಿಸಿದ್ದಾರೆ. ಘಟಕದ ಒಂದು ವಲಯದಲ್ಲಿ ಮಾತ್ರ ಈ ಅಗ್ನಿ ಅವಘಡ ಸಂಭವಿಸಿದೆ. ಸುಡುತ್ತಿದ್ದ ಕಲ್ಲಿದ್ದಲ್ಲು ತಕ್ಷಣ ಇಬ್ಬಾಗವಾಗಿದೆ. ಪರಿಣಾಮವಾಗಿ ಬೆಂಕಿ ಕೆನ್ನಾಲಿಗೆಯಿಂದಾಗಿ ನಾಲ್ವರು ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ತನಿಖೆ ನಡೆಸಲಾಗುತ್ತಿದೆ. ಜೊತೆಗೆ ಫ್ಯಾಕ್ಟರಿ ಇನ್ಸ್​ಪೆಕ್ಟರ್​ ಕೂಡ ಘಟನೆ ಸಂಬಂಧ ಪರಿಶೀಲನೆಗೆ ಮುಂದಾಗಿದ್ದಾರೆ ಎಂದರು.

ಹಜಿರಾ ಪೊಲೀಸ್​ ಠಾಣೆಯ ಅಧಿಕಾರಿಗಳ ಪ್ರಕಾರ, ಘಟನೆಯಲ್ಲಿ ನಾಲ್ವರ ಸಾವು ಸಂಭವಿಸಿದ್ದು, ಮೂವರು ಸಂತ್ರಸ್ತರು ಮರಣೋತ್ತರ ಪರೀಕ್ಷೆ ಸಿವಿಲ್​ ಆಸ್ಪತ್ರೆಯಲ್ಲಿ ಸಾಗಿದೆ. ಕೊರೆಕ್ಸ್​ ಘಟಕದಲ್ಲಿನ ಸಾಧನದ ವೈಫಲ್ಯದಿಂದಾಗಿ ಈ ಘಟನೆ ಸಂಭವಿಸಿದೆ ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ.

ಈ ಕುರಿತು ಹೇಳಿಕೆ ಪ್ರಕಟಿಸಿರುವ ಅವರು, ಕೊರೆಕ್ಸ್​ ಘಟಕದಲ್ಲಿ ಸಾಧನದ ವೈಫಲ್ಯದಿಂದಾಗಿ ಎಎಂಎನ್​ಎಸ್​ ಹಜಿರ ಕಾರ್ಯಾಚರಣೆಯಲ್ಲಿ ಈ ಅಪಘಾತ ಸಂಭವಿಸಿದೆ. ಮಂಗಳವಾರ ಸಂಜೆ 6ಕ್ಕೆ ಈ ಘಟನೆ ಸಂಭವಿಸಿದ್ದು, ಮುಚ್ಚಿದ ಘಟಕ ಮತ್ತೆ ಆರಂಭಿಸುವಾಗ ಈ ಅಪಘಾತ ನಡೆದಿದೆ. ಘಟನಾ ಸ್ಥಳದ ಹತ್ತಿರದ ಲಿಫ್ಟ್‌ ನಿರ್ವಹಣೆ ಮಾಡುತ್ತಿದ್ದ ಖಾಸಗಿ ಕಂಪನಿಯ ನಾಲ್ವರು ಗುತ್ತಿಗೆ ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

ಒಬ್ಬ ವ್ಯಕ್ತಿ ಗಾಯಗೊಂಡಿದ್ದು, ಅವರನ್ನು ತಕ್ಷಣಕ್ಕೆ ಘಟಕದ ಆವರಣದಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂತ್ರಸ್ತರ ಕುಟುಂಬಕ್ಕೆ ಸಾಧ್ಯವಾಗುವ ಎಲ್ಲಾ ನೆರವು ನೀಡುವುದಾಗಿ ಕೂಡ ತಿಳಿಸಲಾಗಿದೆ.

ಎಲ್ಲಾ ತುರ್ತು ಪ್ರೋಟೋಕಾಲ್‌ಗಳನ್ನು ತಕ್ಷಣವೇ ಸಕ್ರಿಯಗೊಳಿಸಲಾಗಿದೆ. ಘಟನೆ ಸಂಬಂಧ ಘಟಕಕ್ಕೆ ಸಂಬಂಧಿಸಿದ ಅಧಿಕಾರಿಳೊಂದಿಗೆ ನಿಕಟ ಕೆಲಸ ನಿರ್ವಹಿಸುತ್ತಿದ್ದು, ಅಪಘಾತಕ್ಕೆ ಕಾರಣ ಏನು ಎಂಬ ಕುರಿತ ಆಂತರಿಕ ತನಿಖೆ ನಡೆಸಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಘಟನೆ ನಿರ್ವಹಿಸಿದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಘಟನೆ ಬಗ್ಗೆ ಕಂಪನಿಯ ಅಧಿಕಾರಿಗಳು ಮೃತರ ಕುಟುಂಬದವರಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ ಎಂದು ಹೇಳಲಾಗುತ್ತಿದೆ. ಜನರಿಗೆ ಅಷ್ಟೇ ಅಲ್ಲ ಜಿಲ್ಲಾಧಿಕಾರಿ, ಪೊಲೀಸ್ ಅಥವಾ ಕ್ಷೇತ್ರದಲ್ಲಿನ ಜವಾಬ್ದಾರಿಯುತ ಅಧಿಕಾರಿಗಳಿಗೆ ಘಟನೆಯ ಬಗ್ಗೆ ಕಂಪನಿ ಮಾಹಿತಿ ನೀಡಿಲ್ಲ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಹೊಸ ವರ್ಷದಂದೇ ಭೀಕರ ಕೊಲೆ ; ತಾಯಿ, ನಾಲ್ವರು ಸಹೋದರಿಯರನ್ನು ಕೊಂದ ಯುವಕ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.