ಕೊಡಗು: ಜಿಲ್ಲಾ ಕೊವೀಡ್ ಆಸ್ಪತ್ರೆಯ ಅವ್ಯವಸ್ಥೆ ಕುರಿತು ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತ ವ್ಯಕ್ತಿಯೊಬ್ಬರು ಮಾಧ್ಯಮಗಳಲ್ಲಿ ತೋಡಿಕೊಂಡಿದ್ದ ಅಸಹಾಯಕತೆಗೆ ಕೊನೆಗೂ ಜಿಲ್ಲೆಡಳಿತ ಎಚ್ಚೆತ್ತುಕೊಂಡು ಸ್ಪಂದಿಸಿದೆ.
ಮಾಧ್ಯಮಗಳ ವರದಿ ಬಳಿಕ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಮತ್ತು ಜಿಲ್ಲಾಸ್ಪತ್ರೆಯ ಆಡಳಿತ ಅಧಿಕಾರಿಗಳು, ಅವ್ಯವಸ್ಥೆಯನ್ನು ಸರಿಪಡಿಸಿ ಶುಚಿತ್ವದ ಕಡೆ ಗಮನ ಹರಿಸಲಾಗಿದೆ. ಇದು ಸಾಧ್ಯವಾಗಿದ್ದು ಮಾಧ್ಯಮಗಳ ಮೂಲಕ ಎಂದು ಕೊರೊನಾ ಸೋಂಕಿತ ವ್ಯಕ್ತಿ ಮಾಧ್ಯಮಗಳಿಗೆ ಧನ್ಯವಾದ ತಿಳಿಸಿದ್ದಾರೆ.
ಆಸ್ಪತ್ರೆಯಲ್ಲಿ 20 ರೋಗಿಗಳಿಗೆ ಒಂದೇ ಟಾಯ್ಲೇಟ್ ಇದ್ದು, ಕುಡಿಯಲು ಬಿಸಿ ನೀರಿಗೂ ಆಹಾಕಾರ ಇದೆ. ದಿನಕ್ಕೆ ಎರಡು ಬಾರಿ ಮಾತ್ರ ಬಿಸಿ ನೀರನ್ನು ಕೊಡುತ್ತಿದ್ದಾರೆ. ಸ್ಯಾನಿಟೈಸರ್ ವಿತರಣೆಯಲ್ಲೂ ವ್ಯತ್ಯಾಸ ಮಾಡಲಾಗಿದೆ. ಎರಡು ಮೂರು ದಿನಗಳಾದರೂ ಸ್ಯಾನಿಟೈಸರ್ ಪೂರೈಸುತ್ತಿಲ್ಲ. ಆಸ್ಪತ್ರೆಯಲ್ಲಿ ಇರುವುದಕ್ಕಿಂತ ಮನೆಯಲ್ಲಿದ್ದರೆ ಚೆನ್ನಾಗಿರುತ್ತಿದ್ದೆವು ಎಂದು ಮಡಿಕೇರಿಯ ಕೋವಿಡ್ ವಾರ್ಡ್‌ನಲ್ಲಿರುವ ಕೊರೊನಾ ಸೋಂಕಿತ ವ್ಯಕ್ತಿಯೊಬ್ಬ ಅಸಮಾಧಾನ ವ್ಯಕ್ತಪಡಿಸಿದ್ದರು.