ಕೊಡಗು: ಕೊಡಗಿನಲ್ಲಿ ಮೊಟ್ಟೆ ಎಸೆತ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಕೊಡಗು ಜಿಲ್ಲೆಯ ಕುಶಾಲನಗರ ಗುಡ್ಡೆಹೊಸೂರಿನಲ್ಲಿ ಮಾತ್ರ ಮೊಟ್ಟೆ ಎಸೆದಿಲ್ಲ ಬದಲಾಗಿ ಮಡಿಕೇರಿಯಲ್ಲೂ ಎರಡು ಜನರು ಮೊಟ್ಟೆ ಎಸೆದಿರುವುದಾಗಿ ತಿಳಿದುಬಂದಿದೆ.
ಮಡಿಕೇರಿಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದ ವೇಳೆ ಮೊಟ್ಟೆ ಎಸೆದಿದ್ದಾರೆ. ಆದ್ರೆ ಮೊಟ್ಟೆ ಎಸೆದ ವ್ಯಕ್ತಿಗಳು ಇನ್ನೂ ಬಂಧನ ವಾಗದಿರುವುದು ಕಾಂಗ್ರೆಸ್ ಆಕ್ರೋಶಕ್ಕೆ ಕಾರಣವಾಗಿದೆ.
ಆಗಸ್ಟ್ 18 ರಂದು ಸಿದ್ದರಾಮಯ್ಯ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಬರುತ್ತಿದ್ದಾಗ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಕಾರಿಗೆ ಮೊಟ್ಟೆ ಹೊಡೆಯಲಾಗಿತ್ತು. ಇನ್ನು ಉಳಿದ ಈ ಇಬ್ಬರು ಮೊಟ್ಟೆ ಎಸೆದಿರುವ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇನ್ನು, ಗುಡ್ಡೆ ಹೊಸೂರುನಲ್ಲಿ ಮೊಟ್ಟೆ ಎಸೆದ ವ್ಯಕ್ತಿ ಕಾಂಗ್ರೆಸ್ ನವನು ಎಂದು ಹೇಳಿಕೆ ನೀಡಿದ್ದು, ಈಗ ವಿಡಿಯೋದಲ್ಲಿ ಸೆರೆಯಾಗಿರುವ ವ್ಯಕ್ತಿಗಳು ಯಾರು ಎಂಬುದು ತಿಳಿದುಬಂದಿಲ್ಲ.
ಇದನ್ನೂ ಓದಿ : ಕೊಡಗು ಮೊಟ್ಟೆ ಕೇಸ್: ಸಿದ್ದರಾಮಯ್ಯಗೆ ಲಭಿಸಿತು ಝೆಡ್ ಶ್ರೇಣಿಯ ಭದ್ರತೆ