ಕಲಬುರಗಿ: ಗುಲ್ಬರ್ಗಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮೇಶ ಜಾಧವ್ ಅಭಿಮಾನಿಯೊಬ್ಬ, ಅಂಬಾ ಭವಾನಿ ದೇವರೆದುರು ಉರುಳು ಸೇವೆ ಮಾಡುವ ಮೂಲಕ ಜಾಧವ್ ಗೆಲುವಿಗೆ ಪ್ರಾರ್ಥಿಸಿದ್ದಾರೆ.
ಮೂಲತಃ ಚಿಂಚೋಳಿ ತಾಲೂಕಿನ ಚಂದಾಪೂರ ಗ್ರಾಮದ ನಿವಾಸಿ ಹಾಗೂ ಬೆಂಗಳೂರಿನಲ್ಲಿ ಡ್ರೈವರ್ ವೃತ್ತಿಯಲ್ಲಿರುವ ಜಗನ್ನಾಥ ಕುಂಬಾರ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆ ತುಳಜಾಪೂರ ಅಂಬಾ ಭವಾನಿ ದೇವಸ್ಥಾನಕ್ಕೆ ಆಗಮಿಸಿ ಹನ್ನೊಂದು ಸೂತ್ತು ಉರುಳು ಸೇವೆ ಮಾಡಿದ್ದಾರೆ.
ಈ ವೇಳೆ ಜಗನ್ನಾಥ್‌ಗೆ ಸ್ನೇಹಿತರೂ ಸಾಥ್ ಕೊಟ್ಟಿದ್ದು, ಜಾಧವ್ ಗೆಲುವಿಗೆ ಅವರೆಲ್ಲಾ ಪ್ರಾರ್ಥನೆ ಸಲ್ಲಿಸಿದರು.