ಕಲಬುರಗಿ: ರಾಜಕೀಯವಾಗಿ ಜನ್ಮಕೊಟ್ಟಿದ್ದ ಕಾಂಗ್ರೆಸ್ ಪಕ್ಷಕ್ಕೆ ಉಮೇಶ ಜಾಧವ್ ದ್ರೊಹ ಮಾಡಿದ್ದಾರೆ ಎಂದು ಡಿಸಿಎಂ ಜಿ.ಪರಮೇಶ್ವರ್ ಜಾಧವ್ ವಿರುದ್ಧ ವಾಗ್ದಾಳಿ ನಡೆಸಿದರು.
ಚಿಂಚೋಳಿ ವಿಧಾನಸಭಾ ಕ್ಷೇತ್ರದ ಟೆಂಗಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ಗೆ ಜಾಧವ್ ದ್ರೋಹಮಾಡಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿ ಬಿಜೆಪಿ ಗೆ ಹೊಗಿರುವ, ಜಾಧವ್ ಗೆ ಈ ಭಾರಿ ತಕ್ಕ ಪಾಠ ಕಲಿಸಿ. ನಿಮ್ಮ ಓಟ್ ಪಡೆದು ಶಾಸಕನಾಗಿ ಆಯ್ಕೆಯಾದ ಜಾಧವ್ ಬಿಜೆಪಿ ಯವರ ಆಮಿಷಕ್ಕೆ ಒಳಗಾಗಿ 50 ಕೊಟಿಗೆ ಮಾರಾಟ ಆಗಿದ್ದಾರೆ ಎಂಬ ಮಾಹಿತಿ ಇದೆ.
ಈ ಬಗ್ಗೆ ಚುನಾವಣೆ ಬಳಿಕ ಮಾತಾನಾಡುತ್ತೆನೆ. ಆದರಿಂದ ಉಮೇಶ್ ಜಾಧವ್ ಗೆ ತಕ್ಕ ಪಾಠ ಕಲಿಸಬೆಕಾದ್ರೆ ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಠೋಡ ಆಯ್ಕೆ ಮಾಡುವಂತೆ ಜನರಲ್ಲಿ ಮನವಿ ಮಾಡಿದರು.
ಸರ್ಕಾರ ಈಗ ಬಿಳುತ್ತೆ ಆಗ ಬಿಳುತ್ತೆ ಎಂದು ಹೆಳುವ ಬಿಜೆಪಿ ಯವರೆ ನೀವು ಎಷ್ಟೆ ಪಲ್ಟಿ ಹೊಡುದ್ರು ನಮ್ಮ ಸರ್ಕರ ಐದು ವರ್ಷ ಪೂರೈಸೆ ಪೂರೈಸುತ್ತದೆ ಎಂದರು.