ಕಲಬುರಗಿ: ಭಾರಿ ಮಳೆಯಿಂದ ಭೀಮಾ ನದಿ ತಟದಲ್ಲಿ ಉಂಟಾಗಿರುವ ಪ್ರವಾಹ ತಗ್ಗಲೆಂದು ಜಿಲ್ಲೆಯ ಹಾಗರಗುಂಡಗಿ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಸೊನ್ನ ಬ್ಯಾರೇಜ್ನಿಂದ ನದಿಗೆ ಅಧಿಕ ಪ್ರಮಾಣದ ನೀರು ಹರಿಬಿಟ್ಟಿದ್ದು ನದಿಪಾತ್ರದ ಗ್ರಾಮಗಳ ಜನರು ಪ್ರವಾಹದಿಂದ ರೋಸಿ ಹೋಗಿದ್ದಾರೆ.
ಮನೆ, ಆಸ್ತಿ-ಪಾಸ್ತಿ ಕಳೆದುಕೊಂಡು ನಿರಾಶ್ರಿತರಾಗಿದ್ದು, ಇದೀಗ ಪೂಜೆಯ ಮೊರೆ ಹೋಗಿದ್ದಾರೆ.