ಸೇಡಂ: ಸರ್ಕಾರ ಮುಖಕ್ಕೆ ಮಾಸ್ಕ್ ಧರಿಸದೆ ರಸ್ತೆಗಿಳಿಯುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವಂತೆ ಸೂಚಿಸಿದ್ದರೂ ಸಹ ನಗರದಲ್ಲಿ ತರಕಾರಿ, ಹಣ್ಣು ವ್ಯಾಪಾರಿಗಳು ಯಾವುದೇ ಮುನ್ನೆಚ್ಚರಿಕೆ ಪಾಲಿಸದೆ ವ್ಯಾಪಾರ ನಡೆಸುತ್ತಿದ್ದಾರೆ.
ಪಟ್ಟಣದಲ್ಲಿ ಪ್ರತಿನಿತ್ಯ ಮನೆ ಮನೆಗೆ ತರಕಾರಿ ತರುವ ವ್ಯಾಪಾರಿಗಳು ಹಾಗೂ ಬಸ್ ನಿಲ್ದಾಣ, ರೈಲು ನಿಲ್ದಾಣ ಬಳಿಯ ಹಣ್ಣು ಮಾರಾಟಗಾರರು ಮಾಸ್ಕ್ ಧರಿಸದೇ ವ್ಯಾಪಾರ ಮಾಡುತ್ತಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ಪ್ರತಿನಿತ್ಯ ಸುಮಾರು 100ಕ್ಕೂ ಅಧಿಕ ಜನ ಹಣ್ಣು, ತರಕಾರಿ ಮಾರಾಟಕ್ಕೆ ರಸ್ತೆಗಿಳಿಯುತ್ತಿದ್ದಾರೆ. ಇವರು ಸ್ಯಾನಿಟೈಸರ್ ಬಳಸುವುದು ದೂರದ ಮಾತು. ಆದರೆ ಕನಿಷ್ಠ ಮಾಸ್ಕ್ ಸಹ ಧರಿಸದಿರುವುದು ಆತಂಕ ಮೂಡಿಸಿದೆ.