ಕಲಬುರಗಿ : ಮರಳು ಟಿಪ್ಪರ್ಗಳ ಅತಿಯಾದ ವೇಗದಿಂದ ನಗರ ಮತ್ತು ಜಿಲ್ಲೆಯ ವಿವಿಧೆಡೆ ಪದೇ ಪದೆ ಅಪಘಾತಗಳು ಸಂಭವಿಸುತ್ತಿವೆ ಎಂದು ಆರೋಪಿಸಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಅಕ್ರಮ ಮರಳುಗಾರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಿನ್ನೆ ರಾಮ ಮಂದಿರ ವೃತ್ತದಲ್ಲಿ ಬೈಕ್ ಮೇಲೆ ಟಿಪ್ಪರ್ ಹಾಯ್ದು ಇಬ್ಬರು ಸಾವನ್ನಪ್ಪಿದ್ದರು. ಇದನ್ನು ಖಂಡಿಸಿ ಪ್ರತಿಭಟನಾಕಾರರು, ಹಗಲು ಹೊತ್ತಿನಲ್ಲಿ ಸಿಟಿಯಲ್ಲಿ ಟಿಪ್ಪರ್ ಪ್ರವೇಶಕ್ಕೆ ನಿರ್ಬಂಧ ಹೇರಬೇಕೆಂದು ಆಗ್ರಹಿಸಿದರು. ಪದೇ ಪದೆ ಅಪಘಾತ ನಡೆಯುತ್ತಿರುವ ರಾಮ ಮಂದಿರ ವೃತ್ತದಲ್ಲಿ ರೋಡ್ ಬ್ರೇಕರ್ ಹಾಕುವಂತೆ ಒತ್ತಾಯಿದರು.