ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಕನ್ನಡ ಭವನದಲ್ಲಿ ಮನದಾಳದ ಮಾತು ಕಾರ್ಯಕ್ರಮದಲ್ಲಿ ಮಾಜಿ ಸಚಿವ, ಕಾರ್ಮಿಕ ಮುಖಂಡ ಎಸ್.ಕೆ. ಕಾಂತಾ ಅವರ ಮಾತು ತಮ್ಮ ಹೋರಾಟದ ಬದುಕಿನ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಬಿಂದುವಾಗಿದ್ದ ಎಸ್. ಕೆ. ಕಾಂತಾ ತಮ್ಮ ಮನದಾಳ ಬಿಚ್ಚಿಟ್ಟರು. ತಮ್ಮ ಬಾಲ್ಯ, ಯೌವನ, ವೃತ್ತಿ ಜೀವನ, ಹೋರಾಟ, ರಾಜಕೀಯ ಜೀವನ ಸೇರಿದಂತೆ ತಾವು ಬೆಳೆದು ಬಂದ ಹೂವು- ಮುಳ್ಳಿನ ಹಾದಿಯನ್ನು ನೆರೆದಿದ್ದ ಜನರೊಂದಿಗೆ ಮುಕ್ತ ಮನಸ್ಸಿನಿಂದ ಹಂಚಿಕೊಂಡರು.
ಕಾರ್ಮಿಕ ನಾಯಕರಿಂದ ಕಾರ್ಮಿಕ ಸಚಿವರಾಗುವವರೆಗೂ ಬೆಳೆದು ಬಂದ ರೀತಿ ಇತ್ಯಾದಿ ತಮ್ಮ ಜೀವನದ ಪ್ರಮುಖ ಹೆಜ್ಜೆಗಳನ್ನು ವಿವರಿಸಿದರು. ಎಸ್.ಕೆ. ಕಾಂತಾ ಅವರ ಜೀವನ ಗಾಥೆ ಕೇಳಿದವರು ಪ್ರಶಂಸೆ ವ್ಯಕ್ತಪಡಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೀರಭದ್ರ ಸಿಂಪಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.