ಕಲಬುರಗಿ: ರಸ್ತೆ ಬದಿ ಅನುಮಾನಾಸ್ಪದವಾಗಿ ವ್ಯಕ್ತಿಯ ಶವ ಪತ್ತೆಯಾದ ಘಟನೆ ಚಿಂಚೋಳಿ ತಾಲೂಕಿನ ಯಂಪಳ್ಳಿ–ಮರಪಳ್ಳಿ ರಸ್ತೆಯಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನ ಬೀದರ್ ಜಿಲ್ಲೆ ಹುಮ್ನಾಬಾದ್ ತಾಲೂಕಿನ ಮರಕುಂದಾ ಗ್ರಾಮದ ಅಶೋಕ್ ಕುಮಾರ್ ಕೋಲಿ (32) ಎಂದು ಗುರುತಿಸಲಾಗಿದೆ. ಚಾಲಕ ವೃತ್ತಿ ಮಾಡುತ್ತಿದ್ದ ಅಶೋಕ್ ಕುಮಾರ್ ತನ್ನ ತಂಗಿಯನ್ನು ನೋಡಲೆಂದು ಗಾರಂಪಳ್ಳಿ ಗ್ರಾಮಕ್ಕೆ ಬಂದು ಶವವಾಗಿ ಪತ್ತೆಯಾಗಿದ್ದಾನೆ. ರಸ್ತೆಯ ಮೇಲೆ ಶವವಾಗಿ ಬಿದ್ದಿದ್ದ ಅಶೋಕ್ ಮೇಲೆ ಎರಡು-ಮೂರು ಬಾರಿ ಸಣ್ಣ ವಾಹನ ಹತ್ತಿಸಲಾಗಿದೆ. ಹೀಗಾಗಿ ಕೊಲೆ ಮಾಡಿ ರಸ್ತೆ ಅಪಘಾತದಲ್ಲಿ ಸತ್ತಿದ್ದಾನೆ ಎಂದು ಬಿಂಬಿಸಲು ಯತ್ನಿಸಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಸದ್ಯ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ. ತನಿಖೆ ನಂತರ ಇದು ಕೊಲೆಯೋ ಅಥವಾ ಸಹಜ ಸಾವೋ ಅನ್ನೋದು ತಿಳಿದು ಬರಬೇಕಿದೆ.