ಕಲಬುರಗಿ: ಲಾಕ್‌ಡೌನ್ ಹಿಂಪಡೆದ ಪಡೆದ ಬೆನ್ನಲ್ಲೇ ಜಿಲ್ಲೆಯಲ್ಲಿ ಇಂದು 78 ವರ್ಷದ ವೃದ್ಧೆ ಸೋಂಕಿಗೆ ಬಲಿಯಾಗಿದ್ದು, 175 ಜನರಿಗೆ ಹೊಸದಾಗಿ ಸೋಂಕು ದೃಢಪಟ್ಟಿದೆ.
ಜ್ವರ, ಕೆಮ್ಮು ಹಾಗೂ ತೀವ್ರ ಉಸಿರಾಟದ ತೊಂದರೆ ಅನುಭವಿಸುತ್ತಿದ್ದ ವೃದ್ಧೆಯನ್ನು ಜುಲೈ 08 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ನಂತರ ಜುಲೈ 18 ರಂದು ಸಾವನ್ನಪ್ಪಿದ್ದರು. ಇದೀಗ ಈ ಮಹಿಳೆಯ ಕೊರೊನಾ ವರದಿ ಬಂದಿದ್ದು, ಸೋಂಕಿರೋದು ಖಾತ್ರಿಯಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಕೊರೊನಾದಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 49 ತಲುಪಿದೆ.
ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,141 ತಲುಪಿದೆ. 47 ಜನ ಇಂದು ಸೋಂಕು ಮುಕ್ತರಾಗಿ ಮನೆಗೆ ಮರಳಿದ್ದಾರೆ. ಜಿಲ್ಲೆಯಲ್ಲಿ ಗುಣಮುಖರಾದವರ ಸಂಖ್ಯೆ 1,881 ತಲುಪಿದ್ದು, 1,211 ಸಕ್ರಿಯ ಪ್ರಕರಣಗಳಿವೆ.