ETV Bharat / state

ಹಿಂದೂಪರ ಸಂಘಟನೆಯ ಕಾರ್ಯಕರ್ತನ ಕೊಲೆ: ಆರೋಪಿಗಳ ಬಂಧನ

ಮೇ 5 ರಂದು ಆಳಂದ ಕಾಲೋನಿಯಲ್ಲಿರುವ ರಾಜ್ಯ ಮಹಿಳಾ ನಿಲಯದ ಮುಂದೆ ದೇವಿನಗರ ನಿವಾಸಿ ಹಿಂದೂಪರ ಸಂಘಟನೆಯ ಕಾರ್ಯಕರ್ತ ಸೀತಲ್ ಎಂಬುವರನ್ನು ಜೈನ್ ಕೊಲೆಗೈದು ಪರಾರಿಯಾಗಿದ್ದರು.

Kalburgi
Kalburgi
author img

By

Published : May 9, 2021, 3:42 PM IST

ಕಲಬುರಗಿ: ರಾಜ್ಯ ಮಹಿಳಾ ನಿಲಯದ ಮುಂದೆ ಮಾರಕಾಸ್ತ್ರಗಳಿಂದ ಕೊಚ್ಚಿ, ಕಲ್ಲು ಎತ್ತಿ ಹಾಕಿ ಹಿಂದೂ ಸಂಘಟನೆಯ ಕಾರ್ಯಕರ್ತನನ್ನು ಬರ್ಬರ ಕೊಲೆಗೈದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಇಲ್ಲಿನ ಖಾದ್ರಿ ಚೌಕ್ ನಿವಾಸಿಗಳಾದ ಶೇಖ ಮಹೆಬೂಬ್ (32) ಹಾಗೂ ಶೇಖ್ ಅಮ್ಜಾದ್ ಬಂಧಿತ ಆರೋಪಿಗಳು. ಇವರು ಮೇ 5 ರಂದು ಆಳಂದ ಕಾಲೋನಿಯಲ್ಲಿರುವ ರಾಜ್ಯ ಮಹಿಳಾ ನಿಲಯದ ಮುಂದೆ ದೇವಿನಗರ ನಿವಾಸಿ, ಹಿಂದೂಪರ ಸಂಘಟನೆಯ ಕಾರ್ಯಕರ್ತ ಸೀತಲ್ ಜೈನ್ (38) ಎಂಬುವರನ್ನು ಕೊಲೆಗೈದು ಪರಾರಿಯಾಗಿದ್ದರು.

ಕುಟುಂಬಸ್ಥರಿಂದ ನೊಂದ ಆಫ್ರೀನ್​ ಎಂಬ ಮಹಿಳೆಯ ಬೆಂಬಲಕ್ಕೆ ನಿಂತಿದ್ದ ಸೀತಲ್ ಜೈನ್, ಬಾಲ ಮಂದಿರದಲ್ಲಿದ್ದ ಇಬ್ಬರು ಮಕ್ಕಳನ್ನು ಆಕೆಗೆ ಕೊಡಿಸಲು ಬಂದಾಗ ಆಫ್ರೀನ್ ತಾಯಿ ಕುಲಿಸುಂಬಿ, ಸಹೋದರಾದ ಅಮ್ಜದ್ ಮತ್ತು ಮೆಹಬೂಬ್ ಕೊಲೆ ಮಾಡಿದ್ದಾರೆಂದು ಆರೋಪಿಸಲಾಗಿತ್ತು.

ಪ್ರಕರಣದ ಬೆನ್ನು ಬಿದ್ದ ರಾಘವೇಂದ್ರ ಕಾಲೋನಿ ಪೊಲೀಸರು ಮೆಹಬೂಬ್ ಮತ್ತು ಅಮ್ಜದ್​ನನ್ನು ಬಂಧಿಸಿದ್ದಾರೆ. ಅಫ್ರೀನ್ ಬೆಂಬಲಕ್ಕೆ ನಿಂತಿದ್ದ ಸೀತಲ್ ಆಸ್ತಿ ವಿಷಯದಲ್ಲಿ ಕಲಹ ತೆಗೆದ ಹಿನ್ನೆಲೆ ಕೊಲೆಗೈದಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಈ ಕುರಿತು ರಾಘವೇಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡ ಇತರ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.